Bad Cholesterol Tips: ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಬೇಕೆ? ಈ ಐದು Natural Vegetables ನಿಮ್ಮ ಆಹಾರದಲ್ಲಿರಲಿ!

Home Remedies For Bad Cholesterol Control: ದೇಹದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಔಷಧಿಗಳು ಮಾತ್ರವಲ್ಲದೆ ಮನೆಯಲ್ಲಿ ಈ ನೈಸರ್ಗಿಕ ತರಕಾರಿಗಳು ಸಹ ತುಂಬಾ ಉಪಯುಕ್ತವಾಗಿವೆ, ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ. (Health News In Kannada)  

Written by - Nitin Tabib | Last Updated : Mar 5, 2024, 08:49 PM IST
  • ಕೆಟ್ಟ ಕೊಲೆಸ್ಟ್ರಾಲ್ (Bad Chollesterol) ತಡೆಗಟ್ಟಲು ಔಷದಿಗಳು ಹಾಗೂ ಚಿಕಿತ್ಸೆಗಳು ಇದ್ದರೂ ಕೂಡ,
  • ಆಹಾರ ಮತ್ತು ವ್ಯಾಯಾಮವಿಲ್ಲದೆ, ಈ ಔಷಧಿಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
  • ಆರೋಗ್ಯ ತಜ್ಞರು ಯಾವಾಗಲೂ ಫೈಬರ್ ಯುಕ್ತ ಆಹಾರ ಸೇವಿಸಲು ಸಲಹೆ ನೀಡುತ್ತಾರೆ,
Bad Cholesterol Tips: ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಬೇಕೆ? ಈ ಐದು Natural Vegetables ನಿಮ್ಮ ಆಹಾರದಲ್ಲಿರಲಿ! title=

Vegetables For Bad Cholesterol Control: ನಮ್ಮ ದೇಹದಲ್ಲಿ ಒಟ್ಟು ಎರಡು ವಿಧದ ಕೊಲೆಸ್ಟ್ರಾಲ್ ಗಳಿಗೆ. ಒಂದು ಒಳ್ಳೆಯದು (Good Cholesterol) ಮತ್ತು ಇನ್ನೊಂದು ಕೆಟ್ಟದ್ದು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿ ನಮ್ಮ ದೇಹಕ್ಕೆ ಹಾನಿಕಾರಕ ಎಂದು ಪರಿಗಣಿದಲಾಗುತ್ತದೆ, ಏಕೆಂದರೆ ಇದು ಹೃದಯಾಘಾತದಿಂದ ಪಾರ್ಶ್ವವಾಯು ಮುಂತಾದ ಅನೇಕ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ಕೆಟ್ಟ ಕೊಲೆಸ್ಟ್ರಾಲ್ ಹೊಂದಿರುವ ಜನರು, ತಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯಲು, ಆರೋಗ್ಯಕರ ಆಹಾರ ಸೇವಿಸಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಕೆಟ್ಟ ಕೊಲೆಸ್ಟ್ರಾಲ್ (Bad Chollesterol) ತಡೆಗಟ್ಟಲು ಔಷದಿಗಳು ಹಾಗೂ ಚಿಕಿತ್ಸೆಗಳು ಇದ್ದರೂ ಕೂಡ, ಆಹಾರ ಮತ್ತು ವ್ಯಾಯಾಮವಿಲ್ಲದೆ, ಈ ಔಷಧಿಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆರೋಗ್ಯ ತಜ್ಞರು ಯಾವಾಗಲೂ ಫೈಬರ್ ಯುಕ್ತ ಆಹಾರ ಸೇವಿಸಲು ಸಲಹೆ ನೀಡುತ್ತಾರೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಎದುರಿಸಲು ಹೆಚ್ಚು ಸಹಾಯ ಮಾಡುತ್ತದೆ. ಮನೆಯಲ್ಲಿ ಬೆಳೆಯುವ ನೈಸರ್ಗಿಕ ತರಕಾರಿಗಳಲ್ಲಿ ಫೈಬರ್ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನಿರ್ಮೂಲನೆ ಮಾಡುವ ಆ ಐದು ನೈಸರ್ಗಿತ ತರಕಾರಿಗಳು (Natural Vegetables For Bad Cholesterol ) ಯಾವುವು ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ, (Health News In Kannada).

1. ಸೌತೆಕಾಯಿ
ಮನೆಯಲ್ಲಿ ಸುಲಭವಾಗಿ ಬೆಳೆಯಬಹುದಾದ ತರಕಾರಿ ಎಂದರೆ ಅದು ಸವತೆಕಾಯಿ, ಸವತೆಕಾಯಿಯಲ್ಲಿ ಹೇರಳ ಪ್ರಮಾಣದ ಫೈಬರ್ ಇರುತ್ತದೆ. ಇದರ ಸೇವನೆಯು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವ ಜನರು ಪ್ರತಿದಿನ ಒಂದು ಸೌತೆಕಾಯಿಯನ್ನು ಸೇವಿಸಬೇಕು, ಇದು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

2. ಹಾಗಲಕಾಯಿ
ಈ ತರಕಾರಿಯನ್ನು ಕೂಡ ನೀವು ಮನೆಯಲ್ಲಿಗೆ ಮಣ್ಣಿನ ಕುಂಡಗಳಲ್ಲಿ ಬೆಳೆಯಬಹುದು. ಮನೆಯಲ್ಲಿ ಬೆಳೆದ ನೈಸರ್ಗಿಕ ಹಾಗಲಕಾಯಿ ಸ್ವಲ್ಪ ಕಹಿ ರುಚಿಯನ್ನು ಹೊಂದಿರುತ್ತದೆ, ಆದರೆ ಇದು ಅಧಿಕ ಕೊಲೆಸ್ಟ್ರಾಲ್‌ಗೆ ಒಂದು ರಾಮಬಾಣ ತರಕಾರಿ ಎಂದು ಸಾಬೀತಾಗುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

3. ಬೆಂಡೆಕಾಯಿ
ಬೆಂಡೆಕಾಯಿಯನ್ನು ಕೂಡ ನೀವು ನಿಮ್ಮ ಮನೆಯ ಟೆರೇಸ್ ಗಾರ್ಡನ್ ನಲ್ಲಿ ಸುಲಭವಾಗಿ ಮತ್ತು ಸಂಪೂರ್ಣ ನೈಸರ್ಗಿಕವಾಗಿ ಬೆಳೆಯಬಹುದು, ಇದು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಲೇಡಿ ಫಿಂಗರ್ ಎಂದು ಕರೆಯಲಾಗುವ ಈ ತರಕಾರಿಯಲ್ಲಿನ  ವಿಶೇಷ ಪೋಷಕಾಂಶಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಇದನ್ನೂ ಓದಿ-Health Tips For Fatty Liver: ಯಕೃತ್ತಿಗೆ ಸಂಬಂಧಿಸಿದ ಈ ಕಾಯಿಲೆ ಪ್ರಾಣಕ್ಕೆ ಕುತ್ತು ತರುತ್ತದೆ... ಎಚ್ಚರ!

4. ಮುಳ್ಳು ಸೌತೆಕಾಯಿ
ಮನೆಯಲ್ಲಿ ಬೆಳೆಯುವ ಮುಳ್ಳು ಸವತೆಕಾಯಿ ಕೂಡ  ಸಂಪೂರ್ಣ ನೈಸರ್ಗಿಕವಾಗಿದ್ದು ನಾರಿನಂಥ ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿರುವ ವಿವಿಧ ರೀತಿಯ ಪೋಷಕಾಂಶಗಳು ವಿವಿಧ ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವ ರೋಗಿಗಳು ದಿನಕ್ಕೆ ಕನಿಷ್ಠ ಒಂದು ಮುಳ್ಳು ಸೌತೆಕಾಯಿಯನ್ನು ಸೇವಿಸಬೇಕು.

ಇದನ್ನೂ ಓದಿ-Diabetes Control Fruits: ಮಧುಮೇಹ ನಿಯಂತ್ರಣಕ್ಕೆ ಈ ಐದು ಹಣ್ಣುಗಳು ಸೂಪರ್ ಫುಡ್ ಗಳಾಗಿವೆ!

5. ಸೋರೆಕಾಯಿ
ನಿಮ್ಮ ದಿನನಿತ್ಯದ ಆಹಾದಲ್ಲಿ ನೀವು ಸೋರೆಕಾಯಿಯಂತಹ ತರಕಾರಿಯನ್ನು ಸೇರಿಸಿದರೆ, ಅದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ನೀವು ಸೋರೆಕಾಯಿಯನ್ನು ಸಲಾಡ್ ರೂಪದಲ್ಲಿ ಸೇವಿಸಬಹುದು, ಈ ತರಕಾರಿಯ ರಸವನ್ನು ಕುಡಿಯಬಹುದು. ಇದನ್ನು ಯಾವುದೇ ರೀತಿಯಲ್ಲಿ ಸೇವಿಸಿದರೆ ಅದು ಪ್ರಯೋಜನಕಾರಿಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News