ಹ್ಯೂಸ್ಟನ್: 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸುತ್ತೀರಾ ಎಂದು ಡೊನಾಲ್ಡ್ ಟ್ರಂಪ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೇಳಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಬ್ಯಾಸ್ಕೆಟ್ಬಾಲ್ ಪಂದ್ಯವನ್ನು ಉಲ್ಲೇಖಿಸುತ್ತಾ, ಭಾರತವು ಶೀಘ್ರದಲ್ಲೇ ವಿಶ್ವ ದರ್ಜೆಯ ಮತ್ತೊಂದು ಅಮೇರಿಕನ್ ಉತ್ಪನ್ನವಾದ ಎನ್ಬಿಎ ಬ್ಯಾಸ್ಕೆಟ್ಬಾಲ್ಗೆ ಪ್ರವೇಶವನ್ನು ಪಡೆಯಲಿದೆ. ಮುಂಬೈಯಲ್ಲಿ ಬ್ಯಾಸ್ಕೆಟ್ಬಾಲ್ ಪಂದ್ಯ ನಡೆಯಲಿದೆ. ಪ್ರಧಾನಿ ಮೋದಿಯವರೇ, "ನೀವು ನನ್ನನ್ನು ಆಹ್ವಾನಿಸುತ್ತೀರಾ, ಜಾಗರೂಕರಾಗಿರೀ ನಾನು ಬರಬಹುದು" ಎಂದರು.
#WATCH US Pres Donald Trump: Very soon India will have to access to another world class American product-NBA basketball. Wow, sounds good. Next week thousands in Mumbai will watch the first ever NBA game in India..am I invited Mr. Prime Minister? I may come, be careful I may come pic.twitter.com/QmcyeXurLg
— ANI (@ANI) September 22, 2019
ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಮೊದಲಿಗಿಂತ ಬಲವಾಗಿದೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಸಂಬಂಧಗಳು ನಮ್ಮ ಸಾಮಾನ್ಯ ಮೌಲ್ಯಗಳನ್ನು ಆಧರಿಸಿವೆ. ನಮ್ಮದು ಸ್ವತಂತ್ರ ದೇಶ, ನಾವು ನಮ್ಮ ರಾಷ್ಟ್ರದ ಸ್ವಾತಂತ್ರ್ಯದ ಪ್ರಿಯರೆಂದು ಪರಿಗಣಿಸುತ್ತೇವೆ ಎಂದು ಟ್ರಂಪ್ ಹೇಳಿದರು.
"ಪ್ರಧಾನಿ ಮೋದಿ ಭಾರತದಲ್ಲಿ 300 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಡತನದಿಂದ ಹೊರತಂದಿದ್ದಾರೆ. ಮುಂಬರುವ ದಶಕದಲ್ಲಿ 140 ದಶಲಕ್ಷ ಭಾರತೀಯ ಕುಟುಂಬಗಳು ಮಧ್ಯಮ ವರ್ಗಕ್ಕೆ ಪ್ರವೇಶಿಸಲಿವೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ನಾವು ಕೆಲವು ಅಸಾಧಾರಣತೆಯನ್ನು ನೋಡುತ್ತಿದ್ದೇವೆ" ಎಂದು ಅವರು ಸಂತಸ ವ್ಯಕ್ತಪಡಿಸಿದರು.