IPL 2024, SRH Captain: ಇಂಡಿಯನ್ ಪ್ರೀಮಿಯರ್ ಲೀಗ್ 2024 ಮಾರ್ಚ್ 22 ರಿಂದ ಆರಂಭವಾಗಲಿದೆ. ಈ ಸೀಸನ್ ಆರಂಭಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಳೆದ ಋತುವಿನಲ್ಲಿ ಹೈದರಾಬಾದ್ ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಾಮ್’ಗೆ ನಾಯಕತ್ವವನ್ನು ಹಸ್ತಾಂತರಿಸಿತ್ತು. ಅಂದಹಾಗೆ ಮಾರ್ಕ್ರಾಮ್ ಅವರ ನಾಯಕತ್ವದಲ್ಲಿ ಸತತ ಎರಡು ಬಾರಿ SA20 ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇದನ್ನೂ ಓದಿ:Nayana Nagaraj: ಪ್ರಿಯಕರನ ಜೊತೆಗೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಗಿಣಿರಾಮ ನಟಿ!
ವರದಿಯ ಪ್ರಕಾರ, 2023ರ ODI ವಿಶ್ವಕಪ್ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್’ಗೆ ಸನ್‌ರೈಸರ್ಸ್ ಹೈದರಾಬಾದ್ ನಾಯಕತ್ವ ನೀಡುವ ಸಾಧ್ಯತೆ ಇದೆ. ಐಪಿಎಲ್ 2024ರ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು 20.5 ಕೋಟಿ ರೂಪಾಯಿಗಳಿಗೆ ಹೈದರಾಬಾದ್ ಖರೀದಿಸಿತ್ತು. ಆದರೆ, ಇದುವರೆಗೂ ಫ್ರಾಂಚೈಸಿಯಿಂದ ಈ ಬಗ್ಗೆ ಯಾವುದೇ ಹೇಳಿಕೆ ಬಂದಿಲ್ಲ.
ಕಳೆದ ವರ್ಷ ಅಂದರೆ 2023 ರಲ್ಲಿ ಏಡೆನ್ ಮಾರ್ಕ್ರಾಮ್ ಅವರು ದಕ್ಷಿಣ ಆಫ್ರಿಕಾ ಟಿ 20 ಲೀಗ್’ನಲ್ಲಿ ಸನ್‌ರೈಸರ್ಸ್ ಫ್ರಾಂಚೈಸಿ ಪ್ರಶಸ್ತಿಯನ್ನು ಗೆಲ್ಲುವಂತೆ ಮಾಡಿದ್ದರು. ಇದಾದ ನಂತರ ಐಪಿಎಲ್’ನಲ್ಲೂ ಸನ್‌ರೈಸರ್ಸ್ ನಾಯಕತ್ವವನ್ನು ಮಾರ್ಕ್ರಾಮ್‌ಗೆ ಹಸ್ತಾಂತರಿಸಲಾಗಿತ್ತು. ಈ ವರ್ಷ ಅಂದರೆ 2024 ರಲ್ಲಿಯೂ ಸಹ, ದಕ್ಷಿಣ ಆಫ್ರಿಕಾ T20 ಲೀಗ್’ನಲ್ಲಿ ಈಸ್ಟರ್ನ್ ಸನ್‌ರೈಸರ್ಸ್ ಕೇಪ್ ಪ್ರಶಸ್ತಿಯನ್ನು ಗೆಲ್ಲಲು ಮಾರ್ಕ್‌ರಾಮ್ ನೇತೃತ್ವ ವಹಿಸಿದ್ದರು. ಹೀಗಿರುವಾಗ, ಫ್ರಾಂಚೈಸಿ ಈ ಯುವ ಆಟಗಾರನನ್ನು ನಂಬುತ್ತದೆಯೇ ಅಥವಾ ತಂಡದ ನಾಯಕತ್ವವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್’ಗೆ ಹಸ್ತಾಂತರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ವೇಳಾಪಟ್ಟಿ
- ಮಾರ್ಚ್ 23 vs ಕೆಕೆಆರ್, ಕೋಲ್ಕತ್ತಾ (ರಾತ್ರಿ 7:30)
- ಮಾರ್ಚ್ 27 vs ಮುಂಬೈ ಇಂಡಿಯನ್ಸ್, ಹೈದರಾಬಾದ್ (ಸಂಜೆ 7:30)
- ಮಾರ್ಚ್ 31 vs ಗುಜರಾತ್ ಟೈಟಾನ್ಸ್, ಅಹಮದಾಬಾದ್ (ಮಧ್ಯಾಹ್ನ 3:30)
- ಏಪ್ರಿಲ್ 5 vs ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್ (7:30 PM)
ಇದನ್ನೂ ಓದಿ: ಸಚಿನ್ ಅಲ್ಲ.. ಕ್ರಿಕೆಟ್‌ನಲ್ಲಿ 199 ಶತಕ ದಾಖಲೆಗಳನ್ನು ಹೊಂದಿದ ಸ್ಟಾರ್ ಬ್ಯಾಟ್ಸ್‌ಮನ್ ಈತ!
ಸನ್‌ರೈಸರ್ಸ್ ಹೈದರಾಬಾದ್ ತಂಡ - ಏಡೆನ್ ಮಾರ್ಕ್ರಾಮ್, ಮಾರ್ಕೊ ಜಾನ್ಸೆನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ನಟರಾಜನ್, ಅನ್ಮೋಲ್‌ಪ್ರೀತ್, ಮಯಾಂಕ್ ಮಾರ್ಕಾಂಡೆ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಜ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮಿನ್ಸ್, ಜಯದೇವ್ ಉನದ್ಕತ್, ಆಕಾಶ್ ಸಿಂಗ್, ಜಾತವೇದ್ ಸುಬ್ರಮಣ್ಯಂ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.