Rail Fare Cut: ಪ್ರಯಾಣಿಕರಿಗೆ ಪ್ರಯಾಣದ ವೇಳೆ ಉತ್ತಮ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಕಳೆದ ಕೆಲವು ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಇದರ ಜೊತೆಗೆ ಪ್ರಯಾಣಿಕರಿಗೆ ಹಲವು ಹೊಸ ಸೌಲಭ್ಯಗಳನ್ನು ಕೂಡ ಒದಗಿಸಲಾಗುತ್ತಿದೆ. ಇದೀಗ ರೈಲ್ವೇ ಬೋರ್ಡ್ ರೈಲು ಪ್ರಯಾಣ ದರದಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ದಿನನಿತ್ಯದ ಪ್ರಯಾಣಿಕರಿಗೆ ಬಿಗ್ ರಿಲೀಫ್ ನೀಡಿದೆ. ಮಂಡಳಿಯು ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರ ಕನಿಷ್ಟ ರೈಲು ದರವನ್ನು ಮೂರನೇ ಒಂದು ಭಾಗಕ್ಕೆ ಇಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಪ್ರಯಾಣ ದರವನ್ನು 10 ರೂ.ನಿಂದ 30 ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಇದೀಗ ಮಂಡಳಿ ಮತ್ತೆ ಅದನ್ನು 10 ರೂ.ಗೆ ಇಳಿಕೆ ಮಾಡುವ ಮೂಲಕ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದೆ. ಕನಿಷ್ಠ ದರ ಏರಿಕೆಯಿಂದಾಗಿ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಪ್ರಯಾಣಿಸಲು ಪ್ರಯಾಣಿಕರು 30 ರೂ. ಕನಿಷ್ಠ ದರ ಪಾವತಿಸಬೇಕಾಗುತ್ತಿತ್ತು (Business News In Kannada)
ದರ ಹೆಚ್ಚಳದ ನಂತರ ಹಲವು ಬಾರಿ ಪ್ರಯಾಣಿಕರು ಎಕ್ಸ್ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸಬೇಕಾಗುತ್ತಿದ್ದು. ರೈಲ್ವೆ ಮಂಡಳಿಯ ಈ ನಿರ್ಧಾರದಿಂದ ದೆಹಲಿ-ಎನ್ಸಿಆರ್ ಸೇರಿದಂತೆ ದೇಶದ ಲಕ್ಷಾಂತರ ದೈನಂದಿನ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ರೈಲ್ವೆಯನ್ನು ಯಾವಾಗಲೂ ಅಗ್ಗದ ಸಾರಿಗೆ ಸಾಧನವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದ ನಿತ್ಯ ಲಕ್ಷಾಂತರ ಯಾತ್ರಿಗಳು ತಮ್ಮ ಕೆಲಸಕ್ಕಾಗಿ ಇದರ ಮೇಲೆ ಅವಲಂಭಿಸಿದ್ದಾರೆ. 2020ರಲ್ಲಿ ಕೊರೊನಾ ಸೋಂಕು ಹರಡುವ ಮುನ್ನ ಕನಿಷ್ಠ ರೈಲು ದರ 10 ರೂ. ಆಗಿತ್ತು. ಆದರೆ ಕೊರೊನಾ ನಂತರ ರೈಲು ಸಂಚಾರ ಮತ್ತೆ ಆರಂಭಗೊಂಡಾಗ ಅದನ್ನು 30 ರೂ.ಗೆ ಇರಿಸಲಾಗಿತ್ತು. ಪ್ರಯಾಣ ದರ ಹೆಚ್ಚಳದಿಂದ ಪ್ರಯಾಣಿಕರು ಮೊದಲಿಗಿಂತ ಮೂರು ಪಟ್ಟು ಹಣ ಪಾವತಿಸಬೇಕಾಗುತ್ತಿತ್ತು.
ಇದನ್ನೂ ಓದಿ-Formula 12-15-20, ಇದು 25ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ 40ನೇ ವಯಸ್ಸಲ್ಲಿ ಕೋಟ್ಯಾಧಿಪತಿಯಾಗುವ ಸರಳ ಸೂತ್ರ!
ದರ ಇಳಿಕೆಗೆ ಸಂಘಟನೆಗಳ ಒತ್ತಾಯ
ಕೋರೋನಾ ಕಾಲದಲ್ಲಿ ಹೆಚ್ಚಿಸಲಾಗಿದ್ದ ದರವನ್ನು ಕಡಿಮೆಗೊಳಿಸುವಂತೆ ಪ್ರಯಾಣಿಕರ ಸಂಘಟನೆಗಳು ಹಲವು ಬಾರಿ ರೈಲ್ವೆ ಮಂಡಳಿಗೆ ಒತ್ತಾಯಿಸಿದ್ದವು. ಇದೀಗ ರೈಲ್ವೆ ಮಂಡಳಿಯು ತನ್ನ ಆದೇಶದಲ್ಲಿ ಪ್ರಯಾಣಿಕರಿಂದ ಕನಿಷ್ಠ ದರವನ್ನು 10 ರೂ. ಪಡೆದುಕೊಳ್ಳಲಾಗುವುದು ಎಂದು ಪ್ರಕಟಿಸಿದೆ. ಕಡಿಮೆ ದರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ಥಳೀಯ ಟಿಕೆಟ್ ಬುಕಿಂಗ್ ಅಪ್ಲಿಕೇಶನ್, ಸಾಫ್ಟ್ವೇರ್ ಮತ್ತು UTS ಅಪ್ಲಿಕೇಶನ್ನಲ್ಲಿ ಅಪ್ಡೇಟ್ ಮಾಡಲಾಗಿದೆ. ಕರೋನಾ ನಂತರ, ರೈಲ್ವೇಯಿಂದ ನಡೆಸಲ್ಪಡುತ್ತಿರುವ ರೈಲುಗಳನ್ನು ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳು ಎಂದು ವಿವರಿಸಲಾಗಿದೆ. ಇಂತಹ ರೈಲುಗಳಿಗೆ ಕನಿಷ್ಠ ದರ 30 ರೂ.ಆಗಿತ್ತು ಮತ್ತು ಆ ವೇಳೆ ವೇಳೆ ಸ್ಥಳೀಯ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು.
ಇದನ್ನೂ ಓದಿ-Good News: PM Kisan 16ನೇ ಕಂತಿನ ನಿರೀಕ್ಷೆಗೆ ತೆರೆ, ಈ ದಿನ ಬಿಡುಗಡೆಯಾಗಲಿದೆ ಹಣ!
ಆದರೆ ಇದೀಗ ಲೋಕಲ್ ರೈಲುಗಳ ಸಂಚಾರ ಪುನರಾರಂಭವಾದ ನಂತರ ಕನಿಷ್ಠ ಪ್ರಯಾಣ ದರವನ್ನು 10 ರೂ.ಗೆ ಇಳಿಸಲಾಗಿದೆ. ಈ ನಿರ್ಧಾರದ ಅನುಷ್ಠಾನದ ನಂತರ, ದೆಹಲಿ-ಎನ್ಸಿಆರ್ ಸೇರಿದಂತೆ ದೇಶದ ಲಕ್ಷಾಂತರ ದೈನಂದಿನ ಪ್ರಯಾಣಿಕರು ಪ್ರಯೋಜನ ಪಡೆಯಲಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.