YouTube Playlist: ಯೂಟ್ಯೂಬ್‌ನಲ್ಲಿ ನೆಚ್ಚಿನ ವಿಡಿಯೋಗಳ ಪ್ಲೇ ಲಿಸ್ಟ್ ರಚಿಸಲು ಇಲ್ಲಿದೆ ಸುಲಭ ಮಾರ್ಗ

How to create playlist in YouTube: ಯೂಟ್ಯೂಬ್‌ನಲ್ಲಿ ಲಕ್ಷಾಂತರ ವಿಡಿಯೋಗಳು ಲಭ್ಯವಿದೆ. ಈ ಅಪ್ಲಿಕೇಶನ್‌ನಲ್ಲಿ ನಿಮ್ಮಿಷ್ಟದ ವಿಡಿಯೋವನ್ನು ತಕ್ಷಣ ಸಿಗುವಂತೆ ಮಾಡಲು ವಿಡಿಯೋಗಳ ಪ್ಲೇಲಿಸ್ಟ್ ಅನ್ನು ಕೂಡ ರಚಿಸಬಹುದು. 

Written by - Yashaswini V | Last Updated : Feb 23, 2024, 10:59 AM IST
  • ಯೂಟ್ಯೂಬ್ ಪ್ರಸ್ತುತ ಜನಪ್ರಿಯ ಸ್ಟ್ರೀಮಿಂಗ್ ವೇದಿಕೆಯಾಗಿದೆ
  • ಯೂಟ್ಯೂಬ್‌ನಲ್ಲಿ ಲಕ್ಷಾಂತರ ವಿಡಿಯೋಗಳು ಲಭ್ಯವಿವೆ
  • ಇವುಗಳಲ್ಲಿ ನೀಮ್ಮಿಷ್ಟದ ವಿಡಿಯೋ ಕೂಡಲೇ ಸಿಗುವಂತೆ ಮಾಡಲು ಅದರ ಪ್ಲೇಲಿಸ್ಟ್ ತಯಾರಿಸಬಹುದು.
YouTube Playlist: ಯೂಟ್ಯೂಬ್‌ನಲ್ಲಿ ನೆಚ್ಚಿನ ವಿಡಿಯೋಗಳ ಪ್ಲೇ ಲಿಸ್ಟ್ ರಚಿಸಲು ಇಲ್ಲಿದೆ ಸುಲಭ ಮಾರ್ಗ  title=

Organizing favorite videos on YouTube: ವಿಶ್ವದಾದ್ಯಂತ ಬಳಕೆದಾರರಿಗೆ ಮನರಂಜನೆಯ ಮೂಲವಾಗಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ  ಸ್ಟ್ರೀಮಿಂಗ್ ವೇದಿಕೆ ಎಂದರೆ ಅದುವೇ ಯೂಟ್ಯೂಬ್. ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸುವುದರ ಜೊತೆಗೆ ಬೇಕೆಂದಾಗ ಆ ವಿಡಿಯೋವನ್ನು ವೀಕ್ಷಿಸಲು ಅದನ್ನು ಡೌನ್ಲೋಡ್ ಮಾಡಿಯೂ ಇಡಬಹುದು. ಲಕ್ಷಾಂತರ ವಿಡಿಯೋಗಳಲ್ಲಿ ನಿಮ್ಮಿಷ್ಟದ ವಿಡಿಯೋವನ್ನು ತಕ್ಷಣ ಪಡೆಯಲು ಅದಕ್ಕಾಗಿ ನಿಮ್ಮ ನೆಚ್ಚಿನ ವಿಡಿಯೋಗಳ ಲಿಸ್ಟ್ ಅನ್ನು ಕೂಡ ರಚಿಸಬಹುದು. 

ನೀವು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಿದರೆ ಮತ್ತು ನಿಮ್ಮ ಆಯ್ಕೆಯ ವೀಡಿಯೊಗಳ ಪ್ಲೇ ಲಿಸ್ಟ್ ಅನ್ನು ರಚಿಸಲು ಬಯಸಿದರೆ ಇದಕ್ಕಾಗಿ ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಕೆಲವೇ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಇದನ್ನು ಸುಲಭವಾಗಿ ಮಾಡಬಹುದು.  

ಇದನ್ನೂ ಓದಿ- YouTube ವೀಡಿಯೊದಿಂದ ತಮಾಷೆಯ GIF ರಚಿಸಲು ಬಹಳ ಪ್ರಯೋಜನಕಾರಿ ಈ ಟೂಲ್ಸ್

ಯೂಟ್ಯೂಬ್‌ನಲ್ಲಿ ನೆಚ್ಚಿನ ಪ್ಲೇ ಲಿಸ್ಟ್ ರಚಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: 
* ಮೊದಲನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ಅಪ್ಲಿಕೇಶನ್ ತೆರೆಯಿರಿ.
* ಯೂಟ್ಯೂಬ್‌ನ ಕೆಳಗಿನ ಬಲ ಮೂಲೆಯಲ್ಲಿರುವ 'You' ವಿಭಾಗದ ಮೇಲೆ ಕ್ಲಿಕ್ ಮಾಡಿ.
*  ಇಲ್ಲಿ ಪ್ಲೇ ಲಿಸ್ಟ್ ವಿಭಾಗಕ್ಕೆ ಹೋಗಿ ಮತ್ತು ಹೊಸ ಪ್ಲೇಲಿಸ್ಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ನೀವು ಇತ್ತೀಚೆಗೆ ವೀಕ್ಷಿಸಿದ ವೀಡಿಯೊಗಳನ್ನು ಕಾಣಬಹುದು. ನಿಮ್ಮ ಹೊಸ ಪ್ಲೇ ಲಿಸ್ಟ್ ನಲ್ಲಿ ನೀವು ಬಯಸಿದರೆ, ನೀವು ಯಾವುದೇ ವೀಡಿಯೊವನ್ನು ಸೇರಿಸಬಹುದು ಅಥವಾ ಹೊಸ ವೀಡಿಯೊವನ್ನು ಕೂಡ  ಸೇರಿಸಬಹುದು. ಇದಕ್ಕಾಗಿ ಮುಂದಿನ ಬಟನ್ ಕ್ಲಿಕ್ ಮಾಡಿ.
* ಇಲ್ಲಿ ನಿಮ್ಮ ನೆಚ್ಚಿನ ಪ್ಲೇ ಲಿಸ್ಟ್ ಅನ್ನು ಹೆಸರಿಸಿ. ಬಳಿಕ ಮುಂದುವರಿಯಿರಿ.
* ನಂತರ ರಚಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
* ಹೀಗೆ ಸುಲಭ ಹಂತಗಳಲ್ಲಿ ನೀವು ಯೂಟ್ಯೂಬ್‌ನ ಪ್ಲೇ ಲಿಸ್ಟ್ ರಚಿಸಬಹುದು. 

ಇದನ್ನೂ ಓದಿ- YouTube Shorts: ಯೂಟ್ಯೂಬ್ ಶಾರ್ಟ್ಸ್'ನಲ್ಲೀಗ ರೀಮಿಕ್ಸ್‌ ಮ್ಯೂಜಿಕ್, ವೀಡಿಯೋಗಳನ್ನು ಸೇರಿಸುವುದು ಇನ್ನೂ ಸುಲಭ

ಒಂದೊಮ್ಮೆ ನೀವು ಈ ಪಟ್ಟಿಯಿಂದ ಯಾವುದೇ ವಿಡಿಯೋವನ್ನು ಡಿಲೀಟ್ ಮಾಡಲು ಬಯಸಿದರೆ ಅದನ್ನು ಕೂಡ ಸುಲಭವಾಗಿ ಮಾಡಬಹುದು. 
>> ಇದಕ್ಕಾಗಿ ಮೊದಲು ಯೂಟ್ಯೂಬ್ ಪ್ಲೇ ಲಿಸ್ಟ್ ತೆರೆಯಿರಿ. 
>> ಈ ಪಟ್ಟಿಯಲ್ಲಿ ನೀವು ತೆಗೆದುಹಾಕಲು ಬಯಸುವ ವೀಡಿಯೊದ ಮೇಲೆ ಒತ್ತಿ ಹಿಡಿಯಿರಿ. 
>> ವಿಡಿಯೋಗಳನ್ನು ಸೆಲೆಕ್ಟ್ ಮಾಡಿದಾಗ ಪ್ಲೇಪಟ್ಟಿಯಿಂದ ತೆಗೆದುಹಾಕಿ ಎಂಬ ಆಯ್ಕೆಯು ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ಈ ರೀತಿಯಾಗಿ ನೀವು ಯೂಟ್ಯೂಬ್ ಪ್ಲೇ ಲಿಸ್ಟ್ ನಿಂದ ಬೇಡ ವಿಡಿಯೋವನ್ನು ಸುಲಭವಾಗಿ ತೆಗೆದು ಹಾಕಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News