Online Shopping: ಆನ್‌ಲೈನ್ ಶಾಪಿಂಗ್ ಕ್ರೇಜ್ ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು! ಇಲ್ಲಿದೆ ವರದಿ

Online Shopping: "ಡಿಜಿಟಲ್ ರಿಟೇಲ್ ಚಾನೆಲ್‌ಗಳು ಮತ್ತು ಗ್ರಾಹಕರು: ಭಾರತೀಯ ದೃಷ್ಟಿಕೋನ" ಎಂಬ ಶೀರ್ಷಿಕೆಯ ವರದಿಯನ್ನು ಐಐಎಂಎಯ ಸೆಂಟರ್ ಫಾರ್ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ (ಸಿಡಿಟಿ) ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಆನ್‌ಲೈನ್ ಶಾಪಿಂಗ್ ಕುರಿತಂತೆ ಶಾಕಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ. 

Written by - Yashaswini V | Last Updated : Feb 19, 2024, 12:24 PM IST
  • ಆನ್‌ಲೈನ್ ಶಾಪಿಂಗ್ ಕುರಿತಂತೆ ಶಾಕಿಂಗ್ ಮಾಹಿತಿ ಬಹಿರಂಗ

    ಪುರುಷರು ಸರಾಸರಿ ₹2,484 ಆನ್‌ಲೈನ್ ಶಾಪಿಂಗ್‌ಗೆ ಖರ್ಚು ಮಾಡಿದರೆ, ಮಹಿಳೆಯರು ₹1,830 ಖರ್ಚು ಮಾಡುತ್ತಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
  • ಅಂದರೆ ಪುರುಷರು ಮಹಿಳೆಯರಿಗಿಂತ ಶೇ.36ರಷ್ಟು ಹೆಚ್ಚು ಆನ್‌ಲೈನ್ ಶಾಪಿಂಗ್ ಮಾಡುತ್ತಾರೆ.
Online Shopping: ಆನ್‌ಲೈನ್ ಶಾಪಿಂಗ್ ಕ್ರೇಜ್ ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು! ಇಲ್ಲಿದೆ ವರದಿ  title=

Online Shopping: ಸಾಮಾನ್ಯವಾಗಿ ಶಾಪಿಂಗ್ ಎಂದರೆ ಎಲ್ಲರೂ ದೂರುವುದು ಮಹಿಳೆಯರನ್ನೇ! ಅದರಲ್ಲೂ ಈ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಶಾಪಿಂಗ್ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು ಶಾಪಿಂಗ್ ಗಾಗಿಯೇ ಹೆಚ್ಚು ಹಣ ವ್ಯಯ ಮಾಡುತ್ತಾರೆ ಎಂದು ಹೇಳುವವರಿಗೆ ಶಾಕಿಂಗ್ ವರದಿಯೊಂದು ಬಹಿರಂಗವಾಗಿದೆ. 

ಮಹಿಳೆಯರು ಶಾಪಿಂಗ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಪುರುಷರಿಗಿಂತ ಮಹಿಳೆಯರಿಗೆ ಏನನ್ನಾದರೂ ಕೊಳ್ಳುವ ಬಯಕೆ ಹೆಚ್ಚು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಮಹಿಳೆಯರು ಲೆಕ್ಕಾಚಾರವಿಲ್ಲದೆ ಹಣ ಖರ್ಚು ಮಾಡುವುದಿಲ್ಲ. ಏನನ್ನಾದರೂ ಕೊಳ್ಳಬೇಕು ಎಂಬ ಬಯಕೆ ಇದ್ದರೂ ಕೂಡ ಯಾವುದಕ್ಕೆ ಹಣ ವ್ಯಯಿಸಬೇಕು ಎಂದು ಯೋಚಿಸದೆ ಅವರು ಖರ್ಚು ಮಾಡುವುದಿಲ್ಲ ಇದಕ್ಕೆ ಸಾಕ್ಷಿ ಎಂಬಂತಿದೆ ಇತ್ತೀಚಿನ ವರದಿ. 

ವಾಸ್ತವವಾಗಿ, ಮಹಿಳೆಯರು ಆನ್‌ಲೈನ್ ಶಾಪಿಂಗ್ ಅನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಕೆಲವರು ಭಾವಿಸುತ್ತಾರೆ. ಆನ್‌ಲೈನ್ ಶಾಪಿಂಗ್ ಮಾಡುವುದರಲ್ಲಿ ಪುರುಷರದ್ಧೇ ಮೇಲುಗೈ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಐಐಎಂ-ಅಹಮದಾಬಾದ್ "ಡಿಜಿಟಲ್ ರಿಟೇಲ್ ಚಾನೆಲ್‌ಗಳು ಮತ್ತು ಗ್ರಾಹಕರು: ಭಾರತೀಯ ದೃಷ್ಟಿಕೋನ" ಎಂಬ ಶೀರ್ಷಿಕೆಯಡಿ ನಡೆಸಿರುವ ಸಮೀಕ್ಷೆಯ ವರದಿಯನ್ನು ಐಐಎಂಎಯ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ (ಸಿಡಿಟಿ) ಕೇಂದ್ರವು ಭಾನುವಾರ (ಫೆ. 18) ಬಿಡುಗಡೆ ಮಾಡಿದೆ.

ಇದನ್ನೂ ಓದಿ- YouTube Shorts: ಯೂಟ್ಯೂಬ್ ಶಾರ್ಟ್ಸ್'ನಲ್ಲೀಗ ರೀಮಿಕ್ಸ್‌ ಮ್ಯೂಜಿಕ್, ವೀಡಿಯೋಗಳನ್ನು ಸೇರಿಸುವುದು ಇನ್ನೂ ಸುಲಭ

ಈ ಸಮೀಕ್ಷೆಯಲ್ಲಿ 25 ರಾಜ್ಯಗಳ 35,000 ಜನರನ್ನು ಮಾತನಾಡಿಸಲಾಗಿದೆ. ಈ ಸಮೀಕ್ಷೆಯ ಪ್ರಕಾರ, ಪುರುಷರು ಸರಾಸರಿ ₹2,484 ರಷ್ಟು ಹಣವನ್ನು ಆನ್‌ಲೈನ್ ಶಾಪಿಂಗ್‌ಗೆ ಖರ್ಚು ಮಾಡಿದರೆ, ಮಹಿಳೆಯರು ₹1,830 ಖರ್ಚು ಮಾಡುತ್ತಾರೆ ಎಂದು ತಿಳಿದುಬಂದಿದೆ. ಎಂದರೆ,  ಪುರುಷರು ಮಹಿಳೆಯರಿಗಿಂತ ಶೇ.36ರಷ್ಟು ಹೆಚ್ಚು ಆನ್‌ಲೈನ್ ಶಾಪಿಂಗ್ ಮಾಡುತ್ತಾರೆ ಎಂದು "ಡಿಜಿಟಲ್ ರಿಟೇಲ್ ಚಾನೆಲ್‌ಗಳು ಮತ್ತು ಗ್ರಾಹಕರು: ಭಾರತೀಯ ದೃಷ್ಟಿಕೋನ" ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಆನ್‌ಲೈನ್ ಶಾಪಿಂಗ್: ಯಾರು ಯಾವುದಕ್ಕೆ ಹೆಚ್ಚು ಹಣ ವ್ಯಯಿಸುತ್ತಾರೆ? 
ವರದಿಯ ಪ್ರಕಾರ, ಜೈಪುರ, ಲಕ್ನೋ, ನಾಗ್ಪುರ, ಕೊಚ್ಚಿಯಂತಹ ಸಣ್ಣ ನಗರಗಳ ಜನರು ದೆಹಲಿ, ಮುಂಬೈ, ಚೆನ್ನೈನಂತಹ ದೊಡ್ಡ ನಗರಗಳ ಜನರಿಗೆ ಹೋಲಿಸಿದರೆ ಆನ್‌ಲೈನ್ ಫ್ಯಾಷನ್‌ಗೆ 63% ಮತ್ತು ಎಲೆಕ್ಟ್ರಾನಿಕ್ ಸಾಧನಗಳಿಗೆ 21% ಹೆಚ್ಚು ಖರ್ಚು ಮಾಡುತ್ತಾರೆ. 47% ಪುರುಷರು ಮತ್ತು 58% ಮಹಿಳೆಯರು ಆನ್‌ಲೈನ್‌ನಲ್ಲಿ ಬಟ್ಟೆಗಳನ್ನು ಖರೀದಿಸಿದರೆ, 23% ಪುರುಷರು ಮತ್ತು 16% ಮಹಿಳೆಯರು ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಸಣ್ಣ ನಗರಗಳಲ್ಲಿನ (ಟೈರ್-2)  ಜನರು ಫ್ಯಾಶನ್ ಮತ್ತು ಬಟ್ಟೆ ಶಾಪಿಂಗ್‌ನಲ್ಲಿ ಪ್ರತ್ಯೇಕವಾಗಿ ಅಂದರೆ ನೇರವಾಗಿ ಬ್ರ್ಯಾಂಡ್‌ಗಳಿಂದ ಅತಿ ಹೆಚ್ಚು ತಲಾ ವೆಚ್ಚವನ್ನು ಹೊಂದಿದ್ದಾರೆ. ಆದಾಗ್ಯೂ, ವರದಿಯ ಪ್ರಕಾರ, ವಿಶೇಷ ಶಾಪಿಂಗ್ ಮಾಡುವ ಹೆಚ್ಚಿನ ಜನರು ಮಧ್ಯಮ (ಟೈರ್-3) ಅಥವಾ ದೊಡ್ಡ (ಟೈರ್-1) ನಗರಗಳಿಂದ ಬಂದವರು ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ISRO Yuvika 2024:ನಿಮ್ಮ ಮಗುವನ್ನು ವಿಜ್ಞಾನಿಯಾಗಿಸಬೇಕೆ? ISRO ನ ಈ ಕಾರ್ಯಕ್ರಮಕ್ಕೆ ನೋಂದಣಿ ಆರಂಭಗೊಂಡಿದೆ, ಇಲ್ಲಿದೆ ಡೀಟೈಲ್ಸ್!

ಸಣ್ಣ ನಗರಗಳಲ್ಲಿ ಹೆಚ್ಚು ಆನ್‌ಲೈನ್ ಶಾಪಿಂಗ್ ಕ್ರೇಜ್: 
ವರದಿಯ ಪ್ರಕಾರ, ಸಣ್ಣ ನಗರಗಳ ಜನರು (ಟೈರ್-2, 3 ಮತ್ತು 4) ಹೆಚ್ಚು ಆನ್‌ಲೈನ್ ಶಾಪಿಂಗ್ ಮಾಡುತ್ತಾರೆ. ಅದರಲ್ಲೂ ಫ್ಯಾಷನ್ ಮತ್ತು ಬಟ್ಟೆಗಳಿಗೆ ಅವರು ಹೆಚ್ಚು ಖರ್ಚು ಮಾಡುತ್ತಾರೆ. ದೊಡ್ಡ ನಗರಗಳ (ಟಯರ್-1) ಜನರು ₹1,119 ಖರ್ಚು ಮಾಡಿದರೆ, ಸಣ್ಣ ನಗರಗಳ ಜನರು ₹1,870, ಮಧ್ಯಮ ನಗರಗಳಲ್ಲಿ ₹1,44  ಮತ್ತು ಗ್ರಾಮಾಂತರ  ₹2,034 ಖರ್ಚು ಮಾಡಿದ್ದಾರೆ. ಹೆಚ್ಚಿನ ಜನರು (87%) ಕ್ಯಾಶ್ ಆನ್ ಡೆಲಿವರಿ ಬಳಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಕೋವಿಡ್ ನಂತರ  ಹೆಚ್ಚಾಗಿದೆ ಆನ್‌ಲೈನ್ ಶಾಪಿಂಗ್!
ವರದಿಯ ಪ್ರಕಾರ, ಆನ್‌ಲೈನ್ ಶಾಪಿಂಗ್‌ಗೆ ಎರಡು ಪ್ರಮುಖ ಕಾರಣಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಮೊದಲನೆಯದು ಸುಲಭ ಪ್ರಕ್ರಿಯೆಯಲ್ಲಿ ಕಡಿಮೆ ಹಣದಲ್ಲಿ ಒಳ್ಳೆಯ ವಸ್ತುಗಳನ್ನು ಪಡೆಯುವುದು. ಹೆಚ್ಚಿನ ಜನರು ಕೇವಲ ₹ 2,000 ವರೆಗೆ ಖರ್ಚು ಮಾಡುತ್ತಾರೆ, ಇದು ಜನರು ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಬಯಸುತ್ತಾರೆ ಎಂಬುದನ್ನು ತೋರಿಸುತ್ತದೆ. ಇನ್ನೊಂದು ಪ್ರಮುಖ ಕಾರಣವೆಂದರೆ, '2020 ರ ನಂತರ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆನ್‌ಲೈನ್ ಶಾಪಿಂಗ್ ಹೆಚ್ಚಾಗಿದೆ' ಎಂದು ಸಿಡಿಟಿ ಅಧ್ಯಕ್ಷ ಪಂಕಜ್ ಸೆಟಿಯಾ ಮಾಹಿತಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News