DA Arrears Latest update : ದೇಶದ ಕೇಂದ್ರ ಉದ್ಯೋಗಿಗಳಿಗೆ ಒಂದು ದೊಡ್ಡ ಗುಡ್ ನ್ಯೂಸ್. 18 ತಿಂಗಳ ಬಾಕಿ ಹಣವನ್ನು ಸರ್ಕಾರಿ ನೌಕರರ ಖಾತೆಗಳಿಗೆ ಶೀಘ್ರದಲ್ಲೇ ವರ್ಗಾಯಿಸಲಾಗುವುದು ಎನ್ನಲಾಗಿದೆ.
7th Pay Commission : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಶೀಘ್ರವೇ ಉಡುಗೊರೆ ನೀಡಲು ಹೊರಟಿದೆ.ಸರ್ಕಾರದ ಈ ಕೊಡುಗೆಯಿಂದ ಸುಮಾರು ಒಂದು ಕೋಟಿ ಕುಟುಂಬಗಳು ಪ್ರಯೋಜನ ಪಡೆಯಲಿವೆ ಎಂದು ನಂಬಲಾಗಿದೆ. ಮೋದಿ ಸರ್ಕಾರವು ಬಾಕಿ ಉಳಿದಿರುವ 18 ತಿಂಗಳ ಡಿಎ ಬಾಕಿ ಹಣವನ್ನು ಶೀಘ್ರದಲ್ಲೇ ಖಾತೆಗೆ ಜಮಾ ಮಾಡಲಿದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕರೋನಾ ಅವಧಿಯಲ್ಲಿ 1 ಜನವರಿ 2020 ರಿಂದ 30 ಜೂನ್ 2021 ರವರೆಗಿನ ತುಟ್ಟಿಭತ್ಯೆಯನ್ನು ಸರ್ಕಾರ ತಡೆ ಹಿಡಿದಿತ್ತು. ಸಂಸತ್ತಿನಲ್ಲಿಯೂ ಸಹ ಬಾಕಿ ಉಳಿಸಿಕೊಂಡಿರುವ ಡಿಎ ಬಗ್ಗೆ ಚರ್ಚೆ ನಡೆದಿದೆ. ಆದರೆ ಸರ್ಕಾರ ಯಾವುದೇ ಸ್ಪಷ್ಟ ಉತ್ತರವನ್ನು ನೀಡಿರಲಿಲ್ಲ.
18 ತಿಂಗಳ ಡಿಎ ಬಾಕಿಯನ್ನು ಮೋದಿ ಸರ್ಕಾರ ಖಾತೆಗೆ ಜಮಾ ಮಾಡಿದರೆ, ಭಾರೀ ಮೊತ್ತದ ಹಣ ನೌಕರರ ಖಾತೆ ಸೇರುವುದು ಖಚಿತ. ಡಿಎ ಬಾಕಿಯ ಹಣವನ್ನು ಸರ್ಕಾರ ಮೂರು ಕಂತುಗಳಲ್ಲಿ ನೌಕರರ ಖಾತೆಗೆ ವರ್ಗಾವಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇನ್ನೇನು ಲೋಕಸಭೆ ಚುನಾವಣೆ ಸನಿಹದಲ್ಲಿದ್ದು, ಅದಕ್ಕೂ ಮುನ್ನ ಬಾಕಿ ಉಳಿಸಿಕೊಂಡಿರುವ ತುಟ್ಟಿಭತ್ಯೆಯನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಹೀಗಾದರೆ ಪ್ರಥಮ ದರ್ಜೆ ನೌಕರರ ಖಾತೆಗಳಿಗೆ 2 ಲಕ್ಷಕ್ಕೂ ಹೆಚ್ಚು ಹಣ ಜಮಾ ಆಗುವ ನಿರೀಕ್ಷೆಯಿದೆ
ಸದ್ಯದಲ್ಲೇ ನೌಕರರು ಮತ್ತು ಪಿಂಚಣಿದಾರರ ಡಿಎ ಹೆಚ್ಚಿಸಲಿದೆ. ಈ ಬಾರಿ ಸುಮಾರು ಶೇ.4ರಷ್ಟು ಡಿಎ ಹೆಚ್ಚಿಸಬಹುದಾಗಿದ್ದು, ಇದು ಶೇ.46ಕ್ಕೆ ಏರಿಕೆಯಾಗಲಿದೆ.ಇದರಿಂದಾಗಿ ನೌಕರರ ಮೂಲ ವೇತನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ನೌಕರರು ಮತ್ತು ಪಿಂಚಣಿದಾರರ ಸಂಘಟನೆಗಳು ಈ ಬಗ್ಗೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರೂ ಸರ್ಕಾರ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. 18 ತಿಂಗಳ ಡಿಎ ಬಾಕಿ ಪಾವತಿಸುವ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಮಾಧ್ಯಮ ವರದಿಗಳು ಶೀಘ್ರದಲ್ಲೇ ನೀಡುತ್ತವೆ ಎಂದು ಹೇಳುತ್ತಿವೆ.