Health Tips: ಮಲಗುವ ಮುನ್ನ ಹೆಚ್ಚು ನೀರು ಕುಡಿಯುತ್ತೀರಾ? ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ

Drinking Water Before Bed: ಒಮ್ಮೆಲೇ ಅತಿಯಾಗಿ ನೀರು ಕುಡಿಯುವುದು ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ. ಮಿತಿ ಮೀರಿ ನೀರು ಸೇವಿಸಿದರೆ ಕಿಡ್ನಿ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ​

ನವದೆಹಲಿ: ನೀರಿಲ್ಲದೇ ನಾವು ಬದುಕುವುದು ಅಸಾಧ್ಯ. ಏಕೆಂದರೆ ನಮ್ಮ ದೇಹವು ಶೇ.70ರಷ್ಟು ನೀರಿನಿಂದ ತುಂಬಿರುತ್ತದೆ. ದೇಹದ ಎಲ್ಲಾ ರೀತಿಯ ಕಾರ್ಯಗಳಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನೀರನ್ನು ಸೇವಿಸುವ ನಿಯಮಗಳು ಮತ್ತು ವಿಧಾನಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ಅನೇಕರಿಗೆ ನೀರು ಹೇಗೆ ಕುಡಿಯಬೇಕು ಅನ್ನೋದು ಗೊತ್ತಿರುವುದಿಲ್ಲ. ನಿಂತು ನೀರು ಕುಡಿಯಬೇಕಾ ಅಥವಾ ಕುಳಿತುಕೊಂಡು ನೀರು ಕುಡಿಯಬೇಕಾ? ಒಂದು ದಿನಕ್ಕೆ ಎಷ್ಟು ನೀರು ಕುಡಿಯಬೇಕು..? ಬಿಸಿ ನೀರು ಕುಡಿಯಬೇಕಾ? ಅಥವಾ ನಾರ್ಮಲ್‌ ನೀರು ಕುಡಿಯಬೇಕಾ? ಮಲಗುವ ಮುನ್ನ ಎಷ್ಟು ಪ್ರಮಾಣದ ನೀರು ಕುಡಿಯಬೇಕು? ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಇದಕ್ಕೆ ಸಂಪೂರ್ಣ ಉತ್ತರ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಮಲಗುವ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಇದು ಅನೇಕ ರೀತಿಯಯಲ್ಲಿ ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಮಲಗುವ ಮುನ್ನ ಹೆಚ್ಚು ನೀರು ಕುಡಿಯುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಿರಿ.

2 /5

ರಾತ್ರಿ ಹೆಚ್ಚು ನೀರು ಕುಡಿದರೆ ನಿದ್ದೆಯಿಂದ ಎದ್ದು ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಇದರಿಂದ ಸುಖವಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಆರೋಗ್ಯಕ್ಕೆ ಶಾಂತಿಯುತ ನಿದ್ರೆ ಮುಖ್ಯ. ನಿದ್ರೆ ಸರಿಯಾಗಿ ಆಗದಿದ್ದಲ್ಲಿ ಮರುದಿನ ನೀವು ಆಯಾಸ ಮತ್ತು ಆಲಸ್ಯವನ್ನು ಎದುರಿಸಬೇಕಾಗುತ್ತದೆ.

3 /5

ಮಲಗುವ ಮುನ್ನ ಹೆಚ್ಚು ನೀರು ಕುಡಿದರೆ ಹೊಟ್ಟೆ ಭಾರವಾಗುತ್ತದೆ. ಇದು ಕೂಡ ಒಂದು ರೀತಿಯಲ್ಲಿ ಅಸ್ವಸ್ಥತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ ನಿದ್ರೆಗೆ ಅಡಚಣೆ ಉಂಟು ಮಾಡಬಹುದು.

4 /5

ಒಮ್ಮೆಲೇ ಅತಿಯಾಗಿ ನೀರು ಕುಡಿಯುವುದು ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ. ಮಿತಿ ಮೀರಿ ನೀರು ಸೇವಿಸಿದರೆ ಕಿಡ್ನಿ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಇದರಿಂದ ಕಿಡ್ನಿಗಳಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.

5 /5

ನೀವು ನಿಂತು ನೀರು ಕುಡಿಯುವ ಬದಲು ಕುಳಿತು ಕುಡಿಯುವುದು ಯಾವಾಗಲೂ ಉತ್ತಮ. ಅದೇ ರೀತಿ ಕಾಯಿಸಿ ಆರಿಸಿದ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ. ಬೆಳಗ್ಗೆ ಎದ್ದಕೂಡಲೇ ಒಂದು ಲೋಟ ಬಿಸಿ ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಪ್ರತಿದಿನಕ್ಕೆ 4 ರಿಂದ 5 ಲೀಟರ್‌ ನೀರು ಕುಡಿಯುವುದು ಉತ್ತಮವೆಂದು ತಜ್ಞರು ಸಲಹೆ ನೀಡಿದ್ದಾರೆ.