Venus Transit 2024: ಮಾರ್ಚ್ ತಿಂಗಳಿನಲ್ಲಿ ಒಟ್ಟು 2 ಬಾರಿ ಶುಕ್ರ ಗೋಚರ, ಈ ಜನರಿಗೆ ಅಪಾರ ಸಿರಿ-ಸಂಪತ್ತು-ಕೀರ್ತಿ ಪ್ರಾಪ್ತಿ!

Shukra Gochara 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಎರಡು ಬಾರಿ ಧನದಾತ ಶುಕ್ರನ ಗೋಚರ ನೆರವೇರಲಿದೆ. ಇದರಲ್ಲಿ ಒಮ್ಮೆ ಕುಂಭ ರಾಶಿ ಹಾಗೂ ಒಮ್ಮೆ ಮೀನ ರಾಶಿಗೆ ಶುಕ್ರನ ಗೋಚರ ನೆರವೇರುತ್ತಿದೆ. ಶುಕ್ರನ ಈ ದ್ವೀಗೋಚರದಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)
 

Shukra Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನ-ಐಶ್ವರ್ಯ ಕರುಣಿಸುವಾತ ಶುಕ್ರ ಮಾರ್ಚ್ ತಿಂಗಳಿನಲ್ಲಿ ಎರಡು ಬಾರಿ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಮೊದಲನೆಯದಾಗಿ ಶುಕ್ರ ಮಾರ್ಚ್ 7, 2024 ರಂದು ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದಾದ ಬಳಿಕ ಮಾರ್ಚ್ 31, 2024 ರಂದು ಶುಕ್ರ ದೇವ ಗುರು ಬೃಹಸ್ಪತಿಯ ರಾಶಿಯಾಗಿರುವ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಮಾರ್ಚ್ ತಿಂಗಳಲ್ಲಿ ಶುಕ್ರನ ಈ ಎರಡು ಬಾರಿ ಗೋಚರ ಅತ್ಯಂತ ಮಹತ್ವದ್ದು ಎನ್ನಲಾಗುತ್ತಿದ್ದು, ಇದರಿಂದ ಕೆಲ ರಾಶಿಗಳ ಜನರಿಗೆ ಜೀವನದಲ್ಲಿ ಅಪಾರ ಧನ-ಸಂಪತ್ತು-ಕೀರ್ತಿ ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,  (Spiritual News In Kannada)

 

ಇದನ್ನೂ ಓದಿ-Ruchak-Aditya Mangal Yog 2024: ಹತ್ತು ವರ್ಷಗಳ ಬಳಿಕ ಆದಿತ್ಯ ಮಂಗಳ ಯೋಗ ನಿರ್ಮಾಣ, ಈ ಜನರ ಜನರ ಮೇಲೆ ಅಪಾರ ಕನಕವೃಷ್ಟಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Shukra Gochara 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಎರಡು ಬಾರಿ ಧನದಾತ ಶುಕ್ರನ ಗೋಚರ ನೆರವೇರಲಿದೆ. ಇದರಲ್ಲಿ ಒಮ್ಮೆ ಕುಂಭ ರಾಶಿ ಹಾಗೂ ಒಮ್ಮೆ ಮೀನ ರಾಶಿಗೆ ಶುಕ್ರನ ಗೋಚರ ನೆರವೇರುತ್ತಿದೆ. ಶುಕ್ರನ ಈ ದ್ವೀಗೋಚರದಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. (Spiritual News In Kannada)  

2 /5

ವೃಷಭ ರಾಶಿ: ಈ ಅವಧಿಯಲ್ಲಿ ಶುಕ್ರ ನಿಮ್ಮ ಜಾತಕದ ಆದಾಯ ಹಾಗೂ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಇದಲ್ಲದೆ ಆದಾಯದ ಹೊಸ ಮಾಧ್ಯಮಗಳು ಕೂಡ ನಿಮ್ಮ ಪಾಲಿಗೆ ತೆರದುಕೊಳ್ಳಲಿವೆ. ಇನ್ನೊಂದೆಡೆ ನಿರುದ್ಯೋಗಿಗಳಿಗೆ ಈ ಅವಧಿಯಲ್ಲಿ ಉದ್ಯೋಗ ಭಾಗ್ಯ ಪ್ರಾಪ್ತಿಯಾಗಲಿದೆ. ವ್ಯಾಪಾರ ಉತ್ತಮವಾಗಿ ಆರ್ಥಿಕ ಸಮೃದ್ಧಿ ಹೆಚ್ಚಾಗಲಿದೆ. ವೃತ್ತಿಯಲ್ಲಿ ಉನ್ನತಿಯ ಹಲವು ಸುವರ್ಣಾವಕಾಶಗಳು ಪ್ರಾಪ್ತಿಯಾಗಲಿವೆ. ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ.   

3 /5

ಮಿಥುನ ರಾಶಿ: ಈ ಅವಧಿಯಲ್ಲಿ ಶುಕ್ರ ನಿಮ್ಮ ಜಾತಕದ ನವಮ ಹಾಗೂ ಕರ್ಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಅಂದುಕೊಂಡ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ. ಪ್ರತಿಯೊಂದು ಕಾರ್ಯಗಳ ಯೋಜನೆಯನ್ನು ರೂಪಿಸುವಿರಿ ಮತ್ತು ಅದನ್ನು ಜಾರಿಗೊಳಿಸಲು ಸಂಪೂರ್ಣ ಪ್ರಯತ್ನಪಡುವಿರಿ. ವೃತ್ತಿಪರ ಜೀವನದಲ್ಲಿ ನೀವು ಮಾಡಿದ ಪ್ರಯಂತದಿಂದ ಸಾರ್ಥಕತೆಯನ್ನು ಪಡೆದುಕೊಳ್ಳುವಿರಿ. ಕೆಲಸ ಕಾರ್ಯಗಳ ಸಂಬಂಧ ಯಾತ್ರೆ ಕೂಡ ಜರುಗುವ ಸಾಧ್ಯತೆ ಇದೆ. ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ದೊಡ್ಡ ಜವಾಬ್ದಾರಿ ಪ್ರಾಪ್ತಿಯಾಗಲಿದೆ.   

4 /5

ಧನು ರಾಶಿ: ಈ ಅವಧಿಯಲ್ಲಿ ಶುಕ್ರ ನಿಮ ಜಾತಕದ ತೃತೀಯ ಹಾಗೂ ಚತುರ್ಥ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಸಾಹಸ-ಪರಾಕ್ರಮ ಹೆಚ್ಚಾಗಲಿದೆ. ಇದರಿಂದ ನಿಮಗೆ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನೀವು ವಾಹನ-ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಪಿತ್ರಾರ್ಜಿತ ಸಂಪತ್ತಿನ ಲಾಭ ಕೂಡ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ನೋಡಲು ಸಿಗಲಿವೆ. ನೀವು ರಿಯಲ್ ಎಸ್ಟೇಟ್, ಭೂಮಿಗೆ ಸಂಬಂಧಿಸಿದ ವ್ಯವಹಾರ ಮಾಡುತ್ತಿದ್ದರೆ, ನಿಮಗೆ ಅಪಾರ ಲಾಭ ಸಿಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)