ಗಣಪತಿ ವಿಸರ್ಜನೆ ವೇಳೆ ಶಿಲ್ಪಾ ಶೆಟ್ಟಿ ಡ್ಯಾನ್ಸ್ Video ಆಯ್ತು Viral

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಣಪತಿ ವಿಸರ್ಜನೆ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ತನ್ನ ಪತಿ ಮತ್ತು ಮಗನೊಂದಿಗೆ ನೃತ್ಯ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಭಿಮಾನಿಗಳು, ಅದನ್ನು ಶೇರ್ ಮಾಡಿದ್ದಾರೆ.

Last Updated : Sep 4, 2019, 11:06 AM IST
ಗಣಪತಿ ವಿಸರ್ಜನೆ ವೇಳೆ ಶಿಲ್ಪಾ ಶೆಟ್ಟಿ ಡ್ಯಾನ್ಸ್ Video ಆಯ್ತು Viral title=
Image Credits: Yogen Shah

ನವದೆಹಲಿ: ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕುಟುಂಬದವರೊಂದಿಗೆ ಕುಣಿದು ಕುಪ್ಪಳಿಸಿರುವ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೊನ್ನೆಯಷ್ಟೇ ಅದ್ಧೂರಿಯಾಗಿ ಗಣೇಶನನ್ನು ಬರಮಾಡಿಕೊಂಡಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಮಂಗಳವಾರ ಗಣೇಶನನ್ನು ವಿಸರ್ಜನೆ ಮಾಡಿದರು. ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಅವರೊಂದಿಗೆ ಅವರ ಇಡೀ ಕುಟುಂಬವು ಕಾಣಿಸಿಕೊಂಡಿತು. ಶಿಲ್ಪಾ ಪ್ರತಿವರ್ಷದಂತೆ ಪರಿಸರ ಸ್ನೇಹಿ ಗಣೇಶನನ್ನು ಸ್ಥಾಪಿಸಿದರು ಮತ್ತು ಮಂಗಳವಾರ ಮಧ್ಯಾಹ್ನ ಗಣಪತಿ ವಿಸರ್ಜನೆ ಮಾಡಿದರು. ಈ ಸಂದರ್ಭದಲ್ಲಿ ಶಿಲ್ಪಾ ಪತಿ ರಾಜ್ ಕುಂದ್ರಾ ಅವರೊಂದಿಗೆ ಅನಿಲ್ ಕಪೂರ್ ಶೈಲಿಯಲ್ಲಿ ನೃತ್ಯ ಮಾಡಿದರು.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಣಪತಿ ವಿಸರ್ಜನೆ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಶಿಲ್ಪಾ ಅವರ ಸಹೋದರಿ ಶಮಿತಾ ಶೆಟ್ಟಿ ಅವರೊಂದಿಗೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಶಿಲ್ಪಾ ಗುಲಾಬಿ ಬಣ್ಣದ ಡಿಸೈನರ್ ಸೂಟ್ ಧರಿಸಿದ್ದರು. ಈ ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ತನ್ನ ಪತಿ ಮತ್ತು ಮಗನೊಂದಿಗೆ ನೃತ್ಯ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಭಿಮಾನಿಗಳು, ಅದನ್ನು ಶೇರ್ ಮಾಡಿದ್ದಾರೆ. 

ಫೋಟೊ ಕೃಪೆ: ಯೋಗನ್ ಶಾ

ಶಿಲ್ಪಾ ಅವರ ಮೋಜಿನ ನೃತ್ಯವನ್ನೂ ನೀವೂ ನೋಡಿ:

Trending News