ನವದೆಹಲಿ: ಭಾರತದ ಮಾಜಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮಂಗಳವಾರದಂದು ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
36 ವರ್ಷದ ಮಿಥಾಲಿ ರಾಜ್ 2006 ರಿಂದ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈಗ 2021 ರಲ್ಲಿನ ವಿಶ್ವಕಪ್ ಮೇಲೆ ಕೇಂದ್ರಿಕರಿಸುವ ನಿಟ್ಟಿನಲ್ಲಿ ಅವರು ಈಗ ಟಿ20 ಪಂದ್ಯಗಳಿಂದ ನಿವೃತ್ತಿ ಘೋಷಿರುವುದಾಗಿ ಹೇಳಿದ್ದಾರೆ. ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು ತಮ್ಮ ಕನಸಾಗಿ ಉಳಿದಿದೆ, ಅದನ್ನು ನೆರೆವೇರಿಸಲು ಶ್ರಮಿಸುವುದಾಗಿ ಮಿಥಾಲಿ ರಾಜ್ ಹೇಳಿದ್ದಾರೆ.
BREAKING: @M_Raj03 announces retirement from T20Is
She led India in 32 T20Is including the three Women’s WT20 World Cups in 2012 (Sri Lanka), 2014 (Bangladesh) and 2016 (India).
More details here - https://t.co/Yuv1CaCXFv pic.twitter.com/Y6n5irOoME
— BCCI Women (@BCCIWomen) September 3, 2019
"ಬಿಸಿಸಿಐ ನಿರಂತರ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧದ ತವರು ಸರಣಿಗೆ ಭಾರತೀಯ ಟಿ 20 ತಂಡಕ್ಕೆ ಶುಭ ಹಾರೈಸುತ್ತೇನೆ ಎಂದು ಅವರು ಹೇಳಿದ್ದಾರೆ. ಮಿಥಾಲಿ ರಾಜ್ ಅವರು 2006 ರಲ್ಲಿ ಡರ್ಬಿಯಲ್ಲಿ ಆಡಿದ ಮಹಿಳೆಯರ ಮೊದಲ ಟಿ-20 ಯಲ್ಲಿ ನಾಯಕರಾಗಿದ್ದರು. ಅಲ್ಲಿಂದ ಇದುವರೆಗೆ 88 ಪಂದ್ಯಗಳಲ್ಲಿ ಅವರು 2364 ರನ್ ಗಳಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಭಾರತೀಯಳು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
ಭಾರತದ ಮಹಿಳೆಯರು ಸೆಪ್ಟೆಂಬರ್ 24 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ 20 ಐ ಸ್ವದೇಶದಲ್ಲಿ ಸರಣಿಯನ್ನು ಆಡಲಿದ್ದಾರೆ. ನಂತರ ಫೆಬ್ರವರಿ-ಮಾರ್ಚ್ 2020 ರಲ್ಲಿ ಟಿ 20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.