ಅತಿ ಕಡಿಮೆ ಬಡ್ಡಿದರದಲ್ಲಿ Personal Loan ನೀಡುತ್ತಿದೆ ಈ ಬ್ಯಾಂಕ್ !ಒಂದು ಲಕ್ಷದ ಸಾಲಕ್ಕೆ ಇಷ್ಟೇ EMI


ಬ್ಯಾಂಕುಗಳು ಸಾಮಾನ್ಯವಾಗಿ ವೈಯಕ್ತಿಕ ಸಾಲಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತವೆ. ಬಡ್ಡಿ ದರವು ಕೆಲವೊಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್, ಬ್ಯಾಂಕಿನೊಂದಿಗಿನ ಸಂಬಂಧ ಮತ್ತು ನೀವು ಮಾಡುವ ಕೆಲಸದ ಸ್ಥಳವನ್ನು ಅವಲಂಬಿಸಿರುತ್ತದೆ. 

ಬೆಂಗಳೂರು : ಹಣದ ಅಗತ್ಯ ಯಾವಾಗ ಎದುರಾಗುತ್ತದೆ, ಎಮರ್ಜಿ ಎನ್ನುವುದು ಯಾವ ರೂಪದಲ್ಲಿ ಬಂದು ಬಿಡುತ್ತದೆ ಎನ್ನುವುದು ಯಾರಿಗೂ ತಿಳಿದಿರುವುದಿಲ್ಲ.ಹೀಗೆ ಎಮರ್ಜೆನ್ಸಿ ಎದುರಾದಾಗ ಹಣದ ಅಗತ್ಯವಿದ್ದಲ್ಲಿ, ಪರ್ಸನಲ್ ಲೋನ್ ಕಡೆಗೆ ವಾಲುವ ಜನರು ಬಹಳ.   ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವಾಗ ಬ್ಯಾಂಕ್‌ಗಳ ಬಡ್ಡಿದರಗಳು ಮತ್ತು ಪ್ರೊಸೆಸಿಂಗ್ ಚಾರ್ಜ್ ಗಳ ಬಗ್ಗೆಯೂ ತಿಳಿದಿರಬೇಕು. ಬ್ಯಾಂಕುಗಳು ಸಾಮಾನ್ಯವಾಗಿ ವೈಯಕ್ತಿಕ ಸಾಲಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತವೆ. ಬಡ್ಡಿ ದರವು ಕೆಲವೊಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್, ಬ್ಯಾಂಕಿನೊಂದಿಗಿನ ಸಂಬಂಧ ಮತ್ತು ನೀವು ಮಾಡುವ ಕೆಲಸದ ಸ್ಥಳವನ್ನು ಅವಲಂಬಿಸಿರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ದೇಶದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ICICI ಬ್ಯಾಂಕ್ ವೈಯಕ್ತಿಕ ಸಾಲಗಳ ಮೇಲೆ ಶೇಕಡಾ 10.65 ರಿಂದ 16 ರಷ್ಟು ವಾರ್ಷಿಕ ಬಡ್ಡಿಯನ್ನು ವಿಧಿಸುತ್ತದೆ. ಬ್ಯಾಂಕ್  ಪ್ರೊಸೆಸಿಂಗ್ ಚಾರ್ಜ್ ಆಗಿ 2.50 ಪ್ರತಿಶತ ತೆರಿಗೆಯನ್ನು ವಿಧಿಸುತ್ತದೆ.  

2 /8

HDFC ಬ್ಯಾಂಕ್ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ವೈಯಕ್ತಿಕ ಸಾಲದ ಮೇಲೆ ಬ್ಯಾಂಕ್ ವಿಧಿಸುವ ಬಡ್ಡಿಯು 10.5 ರಿಂದ 24 ಪ್ರತಿಶತದವರೆಗೆ ಇರುತ್ತದೆ.  ಬ್ಯಾಂಕ್ 4,999 ರೂ.ಗಳ ನಿಗದಿತ  ಪ್ರೊಸೆಸಿಂಗ್ ಚಾರ್ಜ್ ವಿಧಿಸಲಾಗುತ್ತದೆ.

3 /8

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕಾರ್ಪೊರೇಟ್ ಅರ್ಜಿದಾರರಿಂದ 12.30 ರಿಂದ 14.30 ಶೇಕಡಾ ಬಡ್ಡಿಯನ್ನು ವಿಧಿಸುತ್ತದೆ. ಸರಕಾರಿ ಇಲಾಖೆ ನೌಕರರಿಗೆ ಶೇ.11.30ರಿಂದ 13.80ರಷ್ಟು ಬಡ್ಡಿ ವಿಧಿಸಲಾಗುತ್ತದೆ. ರಕ್ಷಣಾ ವಲಯದ ಉದ್ಯೋಗಿಗಳಿಗೆ ಇದು ವಾರ್ಷಿಕ 11.15 ರಿಂದ 12.65 ಪ್ರತಿಶತ ಬಡ್ಡಿ ವಿಧಿಸುತ್ತದೆ. 

4 /8

ಬ್ಯಾಂಕ್ ಆಫ್ ಬರೋಡಾ ಸರ್ಕಾರಿ ನೌಕರರಿಗೆ ವಾರ್ಷಿಕ 12.40 ರಿಂದ 16.75 ರಷ್ಟು ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಇದಲ್ಲದೇ ಖಾಸಗಿ ವಲಯದ ಉದ್ಯೋಗಿಗಳು ವಾರ್ಷಿಕ ಶೇ.15.15 ರಿಂದ 18.75 ಬಡ್ಡಿ ದರದಲ್ಲಿ ಸಾಲ ಪಡೆಯಬೇಕಾಗುತ್ತದೆ.   

5 /8

ಕ್ರೆಡಿಟ್ ಸ್ಕೋರ್‌ಗೆ ಅನುಗುಣವಾಗಿ PNB ಸಾಲಗಾರರಿಗೆ ವಾರ್ಷಿಕ 13.75 ರಿಂದ 17.25 ರಷ್ಟು ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಸರ್ಕಾರಿ ನೌಕರರಿಗೆ 12.75 ರಿಂದ 15.25 ರಷ್ಟು ಬಡ್ಡಿದರಗಳನ್ನು  ವಿಧಿಸಲಾಗುತ್ತದೆ.   

6 /8

ಕೊಟಕ್ ಮಹೀಂದ್ರಾ ಬ್ಯಾಂಕ್ ವೈಯಕ್ತಿಕ ಸಾಲದ ಮೇಲೆ ವಾರ್ಷಿಕ ಕನಿಷ್ಠ 10.99 ಶೇಕಡಾ ಬಡ್ಡಿಯನ್ನು ವಿಧಿಸುತ್ತದೆ. ಆದರೆ ಸಾಲದ ಶುಲ್ಕದ ಮೇಲೆ  ಪ್ರೊಸೆಸಿಂಗ್ ಚಾರ್ಜ್ ಮತ್ತು ತೆರಿಗೆಯನ್ನು ಸೇರಿಸಿದ ನಂತರ, ಅದು ಸುಮಾರು 3 ಪ್ರತಿಶತದಷ್ಟು ಹೆಚ್ಚಾಗುತ್ತದೆ.  

7 /8

ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲಗಳ ಮೇಲೆ ವಾರ್ಷಿಕ 10.65 ಪ್ರತಿಶತದಿಂದ 22 ಪ್ರತಿಶತದವರೆಗೆ ಬಡ್ಡಿದರಗಳನ್ನು ವಿಧಿಸುತ್ತದೆ. ಇಂಡಸ್‌ಇಂಡ್ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ವಾರ್ಷಿಕ 10.49 ಶೇಕಡಾ ದರದಲ್ಲಿ ಸಾಲ ನೀಡುತ್ತದೆ. 

8 /8

ನೀವು ಐದು ವರ್ಷಗಳವರೆಗೆ ಸಾಲವನ್ನು ತೆಗೆದುಕೊಂಡಿದ್ದು, ಬಡ್ಡಿದರವು ಶೇಕಡಾ 10.50 ಆಗಿದ್ದರೆ, ನೀವು  2149 ರೂ. ರ EMI ಅನ್ನು ಪಾವತಿಸಬೇಕಾಗುತ್ತದೆ. ಅದೇ ಅವಧಿ ಮತ್ತು  ಬಡ್ಡಿ ದರವು ಶೇಕಡಾ 12 ಆಗಿದ್ದರೆ,  2224 ರೂ. EMI ಪಾವಸಿತಬೇಕಾಗುತ್ತದೆ. 15 ಪ್ರತಿಶತ ಬಡ್ಡಿಗೆ 2379 ರೂ., 17 ಪ್ರತಿಶತ ಬಡ್ಡಿಗೆ 2485 ರೂ EMI ಪಾವಸಿತಬೇಕಾಗುತ್ತದೆ.