Bollywood Weddings: ಯಾವ ತಾರಾ ಜೋಡಿಯ ಮದುವೆಯ ಆಲ್ಬಂ ಹೆಚ್ಚು ಲೈಕ್ಸ್ ಪಡೆದಿದೆ ಗೊತ್ತಾ?

Bollywood: ಇತ್ತೀಚೆಗೆ ಬಾಲಿವುಡ್‌ನಲ್ಲಿ ಅನೇಕ ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.. ಅವರು ತಮ್ಮ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.. ಆದರೆ ಇದೀಗ ಯಾವ ಬಾಲಿವುಡ್‌ ಸೆಲೆಬ್ರಿಟಿ ಜೋಡಿ ಮದುವೆ ಆಲ್ಬಂ ಹೆಚ್ಚು ಲೈಕ್ಸ್ ಪಡೆದಿದೆ ಎನ್ನುವುದರ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..   

Written by - Savita M B | Last Updated : Jan 27, 2024, 12:07 PM IST
  • ಇತ್ತೀಚೆಗೆ ಬಾಲಿವುಡ್‌ನಲ್ಲಿ ಅನೇಕ ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು..
  • ಅವರು ತಮ್ಮ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ
  • ಬಾಲಿವುಡ್‌ನಲ್ಲಿ ಹೈ ಪ್ರೊಫೈಲ್ ಮದುವೆಗಳಿಗೆ ಕೊರತೆಯಿಲ್ಲ
Bollywood Weddings: ಯಾವ ತಾರಾ ಜೋಡಿಯ ಮದುವೆಯ ಆಲ್ಬಂ ಹೆಚ್ಚು ಲೈಕ್ಸ್ ಪಡೆದಿದೆ ಗೊತ್ತಾ? title=

Bollywood Weddings: ಬಾಲಿವುಡ್‌ನಲ್ಲಿ ಹೈ ಪ್ರೊಫೈಲ್ ಮದುವೆಗಳಿಗೆ ಕೊರತೆಯಿಲ್ಲ... ಅವರ ಖರ್ಚು ಸಂಕೀರ್ಣದಿಂದ ರಾಜ ಶೈಲಿಯಂತೆ ಶುಭವಿವಾಹಗಳು ನಡೆಯುತ್ತವೆ.. ಈ ಅದ್ದೂರಿ ಮದುವೆಗಳ ತುಣುಕುಗಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.. ಇದೀಗ Instagram ನಲ್ಲಿ ಯಾವ ತಾರಾ ಜೋಡಿಯ ಮದುವೆ ಫೋಟೋಗೆ ಹೆಚ್ಚು ಲೈಕ್ಸ್ ಬಂದಿದೆ ಎನ್ನುವುದರ ಮಾಹಿತಿ ಲಭಿಸಿದೆ.. 

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ವಿವಾಹವಾದರು... ಅವರು ತಮ್ಮ ಮದುವೆ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು.. ಅವುಗಳನ್ನು ನೋಡಿದ ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು.. ಇದೀಗ ಈ ಸೆಲಿಬ್ರಿಟಿ ಜೋಡಿಯ ಮದುವೆ ಆಲ್ಬಂ Instagram ನಲ್ಲಿ ಹೆಚ್ಚು ಇಷ್ಟಪಟ್ಟ ಪೋಸ್ಟ್‌ಗಳಲ್ಲಿ ಒಂದಾಗಿದೆ. ಅವರ ಮದುವೆಯ ಫೋಟೋ ಪ್ರಸ್ತುತ 4.4 ಮಿಲಿಯನ್ ಲೈಕ್‌ಗಳನ್ನು ಹೊಂದಿದೆ. 

ಇದನ್ನೂ ಓದಿ-SSE Side B: ಗಣರಾಜ್ಯೋತ್ಸವದಂದು ಓಟಿಟಿಗೆ ಲಗ್ಗೆಯಿಟ್ಟ ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಬಿ!

ನವೆಂಬರ್ 14, 2018 ರಂದು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಮದುವೆಯ ಚಿತ್ರಗಳು ಭರ್ಜರಿ ಸದ್ದು ಮಾಡಿದ್ದವು.. ಈ ಫೋಟೋಗಳು ಈಗ Instagram ನಲ್ಲಿ 6.4 ಮಿಲಿಯನ್ ಲೈಕ್‌ಗಳನ್ನು ಹೊಂದಿವೆ.

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರ ವಿವಾಹದ ಚಿತ್ರಗಳನ್ನು ಡಿಸೆಂಬರ್ 1, 2018 ರಂದು ಪೋಸ್ಟ್ ಮಾಡಿದ ನಂತರ, ಹಾಲಿವುಡ್‌ನಿಂದ ಬಾಲಿವುಡ್‌ವರೆಗೂ ಸಂಚಲನವೇ ಸೃಷ್ಟಿಯಾಗಿತ್ತು.. ಈಗ ಆ ಚಿತ್ರಕ್ಕೆ 5.4 ಮಿಲಿಯನ್ ಲೈಕ್ಸ್ ಸಿಕ್ಕಿದೆ.

ಇದನ್ನೂ ಓದಿ-BBK10: ಬಂದೇ ಬಿಡ್ತು ಬಿಗ್‌ಬಾಸ್ ಫಿನಾಲೆ; ಕಾಯ್ತಿದೆ ಸೆಲಬ್ರೇಷನ್‌ ಸರಮಾಲೆ!

9 ಡಿಸೆಂಬರ್ 2022 ರಂದು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವಿವಾಹದ ನಂತರ ಅಭಿಮಾನಿಗಳು ಭಾರೀ ಶಾಕ್‌ ಆಗಿದ್ದರು.. ಅವರು ಪೋಟೋಗಳನ್ನು ಶೇರ್‌ ಮಾಡಿಕೊಂಡ ನಂತರ ಅನೇಕ ಟೀಕೆಗಳು ವ್ಯಕ್ತವಾಗಿದ್ದವು.. ಆದರೂ ಇದೀಗ ಆ ಫೋಟೋಗಳು ಈಗ 11.2 ಮಿಲಿಯನ್ ಲೈಕ್‌ಗಳನ್ನು ಪಡೆದಿವೆ.. 

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ 14, 2023 ರಂದು ವಿವಾಹವಾದರು. ಇವರ ಫೋಟೋಗಳು ಪ್ರಸ್ತುತ 11.3 ಮಿಲಿಯನ್ ಲೈಕ್‌ ಪಡೆದಿವೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News