Tollywood Actor Chiranjeevi Got Padmavibhushana Award: 2024ರ ಗಣರಾಜ್ಯೋತ್ಸವ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ಗೌರವವಾದ ಪದ್ಮ ಪ್ರಶಸ್ತಿಗಳಿಗೆ ಅರ್ಹರಾಗಿರುವರ ಪಟ್ಟಿಯಲ್ಲಿ, ಸಿನಿಮಾ ಕ್ಷೇತ್ರದಿಂದ ಮೂವರು ಈ ಬಾರಿ ಪದ್ಮಗೌರವಕ್ಕೆ ಪಾತ್ರರಾಗಿದ್ದಾರೆ. ವಿವಿಧ ಕ್ಷೇತ್ರಗಳಾದ ಕಲೆ, ಸಾಮಾಜಿಕ ಸೇವೆ, ಸಾರ್ವಜನಿಕ ಸೇವೆ, ಸೈನ್ಸ್ ಮತ್ತು ಎಂಜಿನಿಯರಿಂಗ್, ವಾಣಿಜ್ಯ, ಶಿಕ್ಷಣ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಅರ್ಹರಿಗೆ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. 2024ರಲ್ಲಿ ಒಟ್ಟು 132 ಜನರಿಗೆ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಕೇಂದ್ರ ಸರ್ಕಾರ 2024ರ ಗಣರಾಜ್ಯೋತ್ಸವ ಸಂಭ್ರಮದ ಹಿನ್ನೆಲೆ ದೇಶದ ಅತ್ಯುನ್ನತ ಗೌರವವಾದ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಬಾರಿ 132 ಜನರಿಗೆ ಗೌರವ ಪುರಸ್ಕಾರ ದೊರಕಿದೆ. ಈ 132 ಮಂದಿಯಲ್ಲಿ ಐವರಿಗೆ ಪದ್ಮವಿಭೂಷಣ, ಹದಿನೇಳು ಮಂದಿಗೆ ಪದ್ಮಭೂಷನ್ ಮತ್ತು ನೂರಾಹತ್ತು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಈ ವರ್ಷದ ವಿಶೇಷವೇನೆಂದರೆ, ಸಿನಿಮಾರಂಗದಿಂದ ಮೆಗಾಸ್ಟಾರ್ ನಟ ಚಿರಂಜೀವಿಗೆ ಪದ್ಮವಿಭೂಷಣ ಸಿಕ್ಕಿದೆ.
ಇದನ್ನೂ ಓದಿ: ಕನ್ನಡದ ಮೊದಲ ಹೈಪರ್ ಲಿಂಕ್ ರಾಮ್ ಕಾಮ್ ಚಿತ್ರ `ಚೌ ಚೌ ಬಾತ್’ ಟ್ರೈಲರ್ ಬಿಡುಗಡೆ!
ತೆಲುಗು ನಟ ಚಿರಂಜೀವಿಗೆ ಸಿನಿಮಾರಂಗಕ್ಕೆ ಸೇವೆ ಸಲ್ಲಿಸುವ ಜೊತೆಗೆ ರಕ್ತದಾನ ಹಾಗೂ ನೇತ್ರದಾನವನ್ನು ಪ್ರೋತ್ಸಾಹಿಸುತ್ತಾ ಬರ್ತಿದ್ದಾರೆ. ಕೊರೊನಾ, ಲಾಕ್ಡೌನ್ ಸಮಯದಲ್ಲಿ ಸಿನಿ ಕಾರ್ಮಿಕರ ಜೊತೆಗೆ ಜನಸಾಮಾನ್ಯರಿಗೆ ಸಹಾಯ ಮಾಡಿದ್ದು, ಇದನ್ನೆಲ್ಲಾ ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮವಿಭೂಷಣ ಗೌರವ ನೀಡಿ ಚಿರಂಜೀವಿಯವರನ್ನು ಸತ್ಕರಿಸುತ್ತಿದೆ. ಇದೀಗ ದೇಶದ ಎರಡನೇ ಅತ್ಯುನ್ನತ ಗೌರವ ಪದ್ಮವಿಭೂಷಣ ಗರಿ ಲಭಿಸಿದೆ. ತೆಲುಗು ನಟ ಚಿರಂಜೀವಿಗೆ ಪದ್ಮವಿಭೂಷಣ ಗೌರವ ಲಭಿಸಿರುವುದಕ್ಕೆ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಮಹಾಪೂರವೇ ಹರಿದು ಬರುತ್ತಿದೆ.
ಇನ್ನು ತಮಿಳು ನಟಿ ವೈಜಂತಿಮಾಲಾ ಬಾಲಿಗೂ ಹಾಗೂ ಡ್ಯಾನ್ಸರ್ ಪದ್ಮ ಸುಬ್ರಮಣಿಯಂಗೂ ಪದ್ಮವಿಭೂಷಣ ಗೌರವ ಧಕ್ಕಿದ್ದು, ಹಾಗೆ ತಮಿಳು ನಟ ವಿಜಯ್ಕಾಂತ್ಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಸಂಗೀತ ನಿರ್ದೇಶಕ ಪ್ಯಾರೆಲಲ್ ಶರ್ಮಾಗೂ ಕೂಡ ಪದ್ಮಭೂಷಣ ಗೌರವ ಲಭಿಸುತ್ತಿದೆ. ವೈಜಯಂತಿ ಮಾಲಾಗೆ ದೇಶದ ಎರಡನೇ ಅತ್ಯುನ್ನತ ಗೌರವ ಲಭಿಸಿರುವುದಕ್ಕೆ ಬಾಲಿವುಡ್ ನಟಿ ಸೈರಾ ಭಾನು ಅಭಿನಂದನೆ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.