ಪರ್ವತಾರೋಹಣ ಮತ್ತು ಚಾರಣಕ್ಕಾಗಿ ನಾಲ್ಕು ರಾಜ್ಯಗಳಲ್ಲಿ 137 ಪರ್ವತ ಶಿಖರಗಳು!

ವಿದೇಶಿಯರಿಗೆ ಹೆಚ್ಚಿನ ಶಿಖರಗಳನ್ನು ತೆರೆಯುವಂತೆ ಪ್ರವಾಸೋದ್ಯಮ ಸಚಿವಾಲಯದ ಮನವಿಯನ್ನು ಅಂಗೀಕರಿಸಿದ್ದಕ್ಕಾಗಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ದೇಶದಲ್ಲಿ ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸುವ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಪಟೇಲ್ ಹೇಳಿದರು.

Last Updated : Aug 22, 2019, 02:44 PM IST
ಪರ್ವತಾರೋಹಣ ಮತ್ತು ಚಾರಣಕ್ಕಾಗಿ ನಾಲ್ಕು ರಾಜ್ಯಗಳಲ್ಲಿ 137 ಪರ್ವತ ಶಿಖರಗಳು! title=
Representative Image

ನವದೆಹಲಿ: ಪರ್ವತಾರೋಹಣ ಮತ್ತು ಚಾರಣಕ್ಕಾಗಿ ಪರ್ವತಾರೋಹಣ ವೀಸಾ ಪಡೆಯಲು ಬಯಸುವ ವಿದೇಶಿಯರಿಗಾಗಿ ಸರ್ಕಾರವು ನಾಲ್ಕು ರಾಜ್ಯಗಳಲ್ಲಿ 137 ಪರ್ವತ ಶಿಖರಗಳನ್ನು ತೆರೆದಿದೆ. ಈ ಶಿಖರಗಳು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಸಿಕ್ಕಿಂನಲ್ಲಿವೆ. ಉತ್ತರಾಖಂಡದಲ್ಲಿ ಅತಿ ಹೆಚ್ಚು 51 ಶಿಖರಗಳನ್ನು ವಿದೇಶಿಯರಿಗೆ ತೆರೆಯಲಾಗಿದ್ದರೆ, ಜಮ್ಮು ಮತ್ತು ಕಾಶ್ಮೀರದ 15 ಶಿಖರಗಳನ್ನು ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ.

ವಿದೇಶಿಯರಿಗೆ ಹೆಚ್ಚಿನ ಶಿಖರಗಳನ್ನು ತೆರೆಯುವಂತೆ ಪ್ರವಾಸೋದ್ಯಮ ಸಚಿವಾಲಯದ ಮನವಿಯನ್ನು ಅಂಗೀಕರಿಸಿದ್ದಕ್ಕಾಗಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ದೇಶದಲ್ಲಿ ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸುವ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಪಟೇಲ್ ಹೇಳಿದರು.

ಇದಕ್ಕೂ ಮೊದಲು ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನದಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಪ್ರವಾಸೋದ್ಯಮ ಸಚಿವರನ್ನುದ್ದೇಶಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವರು, ಸಾಹಸ ಪ್ರವಾಸೋದ್ಯಮಕ್ಕೆ ಹೋಗುವ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಸಾಹಸ ಪ್ರವಾಸೋದ್ಯಮ ನಿರ್ವಾಹಕರನ್ನು ನೋಂದಾಯಿಸುವಾಗ ರಾಜ್ಯಗಳು ಅತ್ಯಂತ ಎಚ್ಚರಿಕೆಯಿಂದ ವರ್ತಿಸಬೇಕು ಮತ್ತು ಸಾಹಸ ಪ್ರವಾಸೋದ್ಯಮ ಮಾರ್ಗಸೂಚಿಗಳನ್ನು ರಾಜ್ಯಗಳು ಅನುಸರಿಸುತ್ತವೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಇಂಡಿಯನ್ ಅಡ್ವೆಂಚರ್ ಟೂರಿಸಂ ಗೈಡ್‌ಲೈನ್ಸ್ 2018 ಭೂ, ಗಾಳಿ ಮತ್ತು ನೀರು ಆಧಾರಿತ ಚಟುವಟಿಕೆಗಳನ್ನು ಒಳಗೊಂಡಿದೆ, ಇದರಲ್ಲಿ ಪರ್ವತಾರೋಹಣ, ಚಾರಣ, ಬಂಗೀ ಜಂಪಿಂಗ್, ಪ್ಯಾರಾಗ್ಲೈಡಿಂಗ್, ಕಯಾಕಿಂಗ್, ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್, ರಿವರ್ ರಾಫ್ಟಿಂಗ್ ಮತ್ತು ಇತರ ಅನೇಕ ಕ್ರೀಡೆಗಳು ಸೇರಿವೆ.

Trending News