Must visit places in Lakshadweep : ಭಾರತದ ಪ್ರಮುಖ ದ್ವೀಪಗಳಲ್ಲಿ ಒಂದಾದ ಲಕ್ಷದ್ವೀಪವು ತನ್ನ ಪ್ರಕೃತಿ ಸೌಂದರ್ಯದಿಂದ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇದು 36 ದ್ವೀಪಗಳ ಸಮೂಹವಾಗಿದ್ದು, ಇದರ ಕಡಲ ಗಡಿಗಳು ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪ ಸಮುದ್ರವನ್ನು ಮುಟ್ಟುತ್ತವೆ. ಪ್ರಧಾನಿ ಮೋದಿಯವರ ಭೇಟಿಯಿಂದಾಗಿ ಈ ದ್ವೀಪ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ.
ವಿಮಾನದಲ್ಲಿ ಲಕ್ಷದ್ವೀಪಕ್ಕೆ ಬರುವುದಾದರೆ ಮೊದಲು ಅಗತ್ತಿ ದ್ವೀಪದಲ್ಲಿ (Agatti island) ಇಳಿಯಬೇಕು. ಇಲ್ಲಿರುವ ನೈಸರ್ಗಿಕ ಹಸಿರು ಮತ್ತು ಸುಂದರವಾದ ಬೀಚ್ ನಿಮ್ಮ ರಜೆಯನ್ನು ಪರಿಪೂರ್ಣಗೊಳಿಸುತ್ತವೆ. ಇದರ ಹೊರತಾಗಿ ಇಲ್ಲಿನ ಬಣ್ಣಬಣ್ಣದ ಮೀನುಗಳು ಮತ್ತು ಸಮುದ್ರ ಜೀವಿಗಳು ನಿಮ್ಮನ್ನು ಅಚ್ಚರಿಗೊಳಿಸುತ್ತವೆ. ನೀವು ಈ ದ್ವೀಪದಲ್ಲಿರುವ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಬಹುದು.
ಕವರಟ್ಟಿ ದ್ವೀಪವು (Kavaratti island) 3.93 ಚದರ ಕಿಲೋಮೀಟರ್ಗಳಷ್ಟು ಹರಡಿದೆ, ಇದು ಲಕ್ಷದ್ವೀಪದ ರಾಜಧಾನಿಯಾಗಿದೆ, ಅದರ ಬಿಳಿ ಮರಳಿನ ಕಡಲತೀರಗಳು ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಿವೆ. ಈ ದ್ವೀಪದಲ್ಲಿ ನೀವು ಮೋಟಾರು ದೋಣಿ ಸವಾರಿ ಮತ್ತು ಕಯಾಕಿಂಗ್ ಆನಂದಿಸಬಹುದು.
ಲಕ್ಷದ್ವೀಪಕ್ಕೆ ಬಂದಾಗಲೆಲ್ಲ ಕದ್ಮತ್ ದ್ವೀಪ (Kadmat island), ಸಿಲ್ವರ್ ಬೀಚ್, ಪ್ರಕಾಶಮಾನವಾದ ಹವಳದ ಬಂಡೆಗಳು ನಿಮ್ಮನ್ನು ಆಕರ್ಷಿಸುತ್ತವೆ. ಇಲ್ಲಿಗೆ ಬಂದರೆ ನಿಮಗೆ ಮಾಲ್ಡೀವ್ಸ್ಗೆ ಭೇಟಿ ನೀಡಿದ ಅನುಭವ ಸಿಗುತ್ತದೆ. ಈ ದ್ವೀಪದಲ್ಲಿ ನೀವು ಸಮುದ್ರ ಆಮೆಗಳನ್ನು ಸಹ ಕಾಣಬಹುದು.
ಲಕ್ಷದ್ವೀಪದಲ್ಲಿರುವ ಕಲ್ಪೇನಿ (Kalpeni island) ದ್ವೀಪವು ವಿಶ್ರಾಂತಿ ಪಡೆಯಲು ಉತ್ತಮ ಸ್ಥಳವಾಗಿದೆ. ಏಕೆಂದರೆ ಇಲ್ಲಿನ ಕಡಲತೀರದಲ್ಲಿ ನಡೆದಾಡುತ್ತ, ಪ್ರಕೃತಿ ಸೌಂದರ್ಯ ಸವಿಯುತ್ತ, ಮನಸ್ಸಿಗೆ ಶಾಂತಿ ಪಡೆಯಬಹುದು. ಇಲ್ಲಿ ನೀವು ಹಡಗಿನಲ್ಲಿ ಪ್ರವಾಸ ಮತ್ತು ಸ್ಥಳೀಯ ಆಹಾರವನ್ನು ಸವಿಯಬಹುದು.
ನೀವು ಸಮುದ್ರ ಸಾಹಸ ಪ್ರಿಯರಾಗಿದ್ದರೆ, ಅಮಿನಿ ದ್ವೀಪದ (Amini island) ಬೀಚ್ ನಿಮಗೆ ಪರಿಪೂರ್ಣ ತಾಣವಾಗಿದೆ, ಅಲ್ಲಿ ನೀವು ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್, ರೀಫ್ ವಾಕಿಂಗ್ ಮತ್ತು ಕಯಾಕಿಂಗ್ ಅನ್ನು ಆನಂದಿಸಬಹುದು.