ಇಬ್ಬರು ಎನ್‌ಆರ್‌ಐ ಉದ್ಯಮಿಗಳಿಂದ ತಿರುಮಲ ದೇವಸ್ಥಾನಕ್ಕೆ 14 ಕೋಟಿ ರೂ. ದೇಣಿಗೆ

ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ವಿಶೇಷ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಅವರಿಗೆ ಉದ್ಯಮಿಗಳು 14 ಕೋಟಿ ರೂ.ಗಳ ದೇಣಿಗೆಯ ಡ್ರಾಫ್ಟ್ ಅನ್ನು ಹಸ್ತಾಂತರಿಸಿದರು.  

Last Updated : Aug 10, 2019, 01:50 PM IST
ಇಬ್ಬರು ಎನ್‌ಆರ್‌ಐ ಉದ್ಯಮಿಗಳಿಂದ ತಿರುಮಲ ದೇವಸ್ಥಾನಕ್ಕೆ 14 ಕೋಟಿ ರೂ. ದೇಣಿಗೆ title=
Pic Courtesy: ANI

ತಿರುಮಲ (ಆಂಧ್ರಪ್ರದೇಶ): ಅಮೆರಿಕ ಮೂಲದ ಇಬ್ಬರು ಎನ್‌ಆರ್‌ಐ ಉದ್ಯಮಿಗಳು ಆಂಧ್ರ ಪ್ರದೇಶದ ಪ್ರಸಿದ್ದ ತಿರುಮಲ ದೇವಾಲಯಕ್ಕೆ 14 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ತೆಲುಗು ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಎರಡನೇ ಶುಕ್ರವಾರ ಇಲ್ಲಿ ವರಲಕ್ಷ್ಮಿ ಪೂಜೆಯ ಶುಭ ಸಂದರ್ಭದಲ್ಲಿ ಈ ದೇಣಿಗೆ ನೀಡಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.

ವರಮಹಾಲಕ್ಷ್ಮೀ ಪೂಜೆ ಹಿನ್ನೆಲೆಯಲ್ಲಿ ತಮ್ಮ ಕುಟುಂಬಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಇಬ್ಬರು ಉದ್ಯಮಿಗಳು 14 ಕೋಟಿ ರೂ. ದೇಣಿಗೆ ನೀಡಿದರು. 

ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ವಿಶೇಷ ಅಧಿಕಾರಿ ಎ.ವಿ.ಧರ್ಮ ರೆಡ್ಡಿ ಅವರಿಗೆ ಉದ್ಯಮಿಗಳು 14 ಕೋಟಿ ರೂ.ಗಳ ದೇಣಿಗೆಯ ಡ್ರಾಫ್ಟ್ ಅನ್ನು ಹಸ್ತಾಂತರಿಸಿದರು.

ಎನ್‌ಆರ್‌ಐಗಳು ಹಣವನ್ನು ಸೇವಾ ಚಟುವಟಿಕೆಗಳಿಗೆ ಬಳಸುವಂತೆ ರೆಡ್ಡಿ ಅವರನ್ನು ಕೇಳಿದರು. ಈ ಇಬ್ಬರೂ ಎನ್‌ಆರ್‌ಐಗಳು ಕಳೆದ ವರ್ಷ ಜುಲೈನಲ್ಲಿ ಕೂಡ ದೇವಾಲಯಕ್ಕೆ 13.5 ಕೋಟಿ ರೂ. ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
 

Trending News