ನವದೆಹಲಿ: ಬಾಹುಬಲಿ ಬಳಿಕ ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮತ್ತೊಮ್ಮೆ 500 ಕೋಟಿ ರೂ. ಕ್ಲಬ್ ಸೇರುವ ಮೂಲಕ ವಿಶಿಷ್ಟ ದಾಖಲೆ ಬರೆದಿದ್ದಾರೆ. ಈ ಹಿಂದೆ ಪ್ರಭಾಸ್ ನಟನೆಯ ಬಾಹುಬಲಿ ಪಾರ್ಟ್ 1 ಮತ್ತು 2 500 ಕೋಟಿ ರೂ. ಕ್ಲಬ್ ಸೇರಿದ್ದವು. ಇದೀಗ ಬಿಡುಗಡೆಯಾದ ಆರೇ ದಿನಕ್ಕೆ ಸಲಾರ್ 500 ಕೋಟಿ ರೂ. ಕ್ಲಬ್ ಸೇರಿದೆ.
ಬಾಕ್ಸ್ ಆಫೀಸ್ ಧೂಳಿಪಟ ಮಾಡಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಗಳಿಕೆಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ನಟನೆಯ ಡಂಕಿಯನ್ನು ಹಿಂದಿಕ್ಕಿದೆ. ಡಂಕಿ 6 ದಿನಕ್ಕೆ ಒಟ್ಟು 271.89 ಕೋಟಿ ರೂ. ಗಳಿಕೆ ಮಾಡಿದ್ದರೆ, ಸಲಾರ್ ಕೇವಲ 5 ದಿನಕ್ಕೆ 490.23 ರೂ. ಗಳಿಸಿದೆ. ಈ ಬಗ್ಗೆ ದಕ್ಷಿಣ ಭಾರತದ ಫಿಲ್ಮ್ ಬಾಕ್ಸಾಫೀಸ್ ಟ್ರ್ಯಾಕರ್ ಹಾಗೂ ಸಿನಿಮಾ ಕ್ರಿಟಿಕ್ ಮನೋಬಾಲ ವಿಜಯಬಾಲನ್ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ಗೆ ಬರ್ತ್ಡೇ ಸ್ಯಾಂಡಲ್ವುಡ್ ಬಾದ್ಶಾ ವಿಶ್!
ವಿಜಯಬಾಲನ್ ಪ್ರಕಾರ ಡಂಕಿ 300 ಕೋಟಿ ರೂ. ಕ್ಲಬ್ ಸೇರಿದರೆ, ಸಲಾರ್ 500 ಕೋಟಿ ರೂ. ಕ್ಲಬ್ ಸೇರಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಪ್ರಭಾಸ್ ನಟನೆಯ ಸಲಾರ್ ಸಖತ್ ಕ್ರೇಜ್ ಸೃಷ್ಟಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿರುವ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಸಾಹೋ, ರಾಧೆ ಶ್ಯಾಮ್ ಮತ್ತು ಆದಿಪುರುಷ ಸಿನಿಮಾಗಳ ಸೋಲಿನ ಬಳಿಕ ಪ್ರಭಾಸ್ಗೆ ಸಲಾರ್ ದೊಡ್ಡ ಬ್ರೇಕ್ ನೀಡಿದೆ.
ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಜೋಡಿ ತೆರೆಮೇಲೆ ಭರ್ಜರಿ ಕಮಾಲ್ ಮಾಡಿದೆ. 500 ಕೋಟಿ ರೂ. ಗಳಿಕೆ ಮಾಡಿರುವ ಸಲಾರ್ 1000 ಕೋಟಿ ರೂ. ಕ್ಲಬ್ ಸೇರುತ್ತಾ ಅನ್ನೋ ಪ್ರಶ್ನೆ ಸಿನಿಪಂಡಿತರಲ್ಲಿ ಮೂಡಿದೆ. ಈ ಚಿತ್ರದಲ್ಲಿ ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು ಮತ್ತು ಶ್ರೀಯಾ ರೆಡ್ಡಿ ಕೂಡ ನಟಿಸಿದ್ದಾರೆ.
Salaar vs Dunki Box Office
ಡಂಕಿ ಚಿತ್ರದ ಗಳಿಕೆ
#Dunki WW Box Office
#ShahRukhKhan's Dunki is inching towards ₹300 cr club.Day 1 - ₹ 57.43 cr
Day 2 - ₹ 45.10 cr
Day 3 - ₹ 49.71 cr
Day 4 -… pic.twitter.com/sMzWuC9B2j— Manobala Vijayabalan (@ManobalaV) December 27, 2023
ಮೊದಲ ದಿನ ₹57.43 ಕೋಟಿ
ಎರಡನೇ ದಿನ ₹45.10 ಕೋಟಿ
ಮೂರನೇ ದಿನ ₹49.71 ಕೋಟಿ
ನಾಲ್ಕನೇ ದಿನ ₹52.78 ಕೋಟಿ
ಐದನೇ ದಿನ ₹46.56 ಕೋಟಿ
ಆರನೇ ದಿನ ₹20.31 ಕೋಟಿ
ಒಟ್ಟು - ₹271.89 ಕೋಟಿ
ಸಲಾರ್ ಚಿತ್ರದ ಗಳಿಕೆ
#Salaar WW Box Office
#Prabhas is racing towards his 3rd ₹500 cr club film after #Baahubali and #Baahubali2.Day 1 - ₹ 176.52 cr
Day 2 - ₹ 101.39 cr
Day 3 - ₹ 95.24 cr… pic.twitter.com/0maGBGaqY8— Manobala Vijayabalan (@ManobalaV) December 27, 2023
ಮೊದಲ ದಿನ ₹176.52 ಕೋಟಿ
ಎರಡನೇ ದಿನ ₹101.39 ಕೋಟಿ
ಮೂರನೇ ದಿನ ₹95.24 ಕೋಟಿ
ನಾಲ್ಕನೇ ದಿನ ₹76.91 ಕೋಟಿ
ಐದನೇ ದಿನ ₹40.17 ಕೋಟಿ
ಒಟ್ಟು - ₹490.23 ಕೋಟಿ
ಇದನ್ನೂ ಓದಿ: Devara Teaser: 'ದೇವರ' ಟೀಸರ್ ರೆಡಿ.. ಹೈಪ್ ಹೆಚ್ಚಿಸಿದ ಅನಿರುದ್ಧ್.. ಯಾವಾಗ ರಿಲೀಸ್?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.