ನವದೆಹಲಿ: ಚೆಂಡನ್ನು ವಿರೂಪಗೊಳಿಸಿದ್ದಕ್ಕಾಗಿ 12 ತಿಂಗಳುಗಳ ಕಾಲ ಕ್ರಿಕೆಟ್ ನಿಂದ ಬ್ಯಾನ್ ಆಗಿದ್ದ ಸ್ಟೀವ್ ಸ್ಮಿತ್ ಈಗ ಶತಕದೊಂದಿಗೆ ಮರಳಿದ್ದಾರೆ.
Fewest innings to 24th Test 100
66 - Don Bradman
118 - Steve Smith
123 - Virat Kohli
125 - Sachin Tendulkar
128 - Sunil Gavaskar#Ashes#EngvAus#AusvsEng— Mohandas Menon (@mohanstatsman) August 1, 2019
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆಸೀಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ಒಂದು ಹಂತದಲ್ಲಿ 122 ರನ್ ಗಳಿಗೆ ಎಂಟು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಗೋಡೆಯಂತೆ ನಿಂತು ಬ್ಯಾಟ್ ಮಾಡಿದ ಸ್ಟೀವ್ ಸ್ಮಿತ್ 144 ರನ್ ಗಳನ್ನು ಗಳಿಸಿದರು. ಆ ಮೂಲಕ ವೇಗವಾಗಿ 24 ಟೆಸ್ಟ್ ಶತಕಗಳನ್ನು ಗಳಿಸಿದ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾದರು.
ಇದಕ್ಕೆ ಅವರು ಕೇವಲ 118 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.ಇನ್ನೊಂದೆಡೆ ಡಾನ್ ಬ್ರಾಡ್ಮನ್ ಮಾತ್ರ 66 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನೊಂದೆಡೆ ಸ್ಟೀವ್ ಸ್ಮಿತ್ ಅವರು ಸಚಿನ್ ಹಾಗೂ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಅವರು ಕ್ರಮವಾಗಿ 123 ಹಾಗೂ 125 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.
ಈಗ ಅವರು ಗ್ರೆಗ್ ಚಾಪಲ್ ಹಾಗೂ ವಿವಿ ರಿಚರ್ಡ್ ಅವರ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ.