ಶಾರುಖ್ ಖಾನ್‌ ಅವರನ್ನು ಹಿಡಿತದಲ್ಲಿಟ್ಟಿದ್ದಾರಂತೆ ಗೌರಿ ಖಾನ್.. ಯಾವ ವಿಚಾರದಲ್ಲಿ ಗೊತ್ತಾ..?

Shahrukh Khan- Gauri Khan: ಬಾಲಿವುಡ್ ಅನ್ನು ಆಳುತ್ತಿರುವ ಬಾದ್ ಶಾ ಶಾರುಖ್ ಖಾನ್ ಅವರನ್ನು ಮನೆಯಲ್ಲಿ ಅವರ ಪತ್ನಿ ಗೌರಿ ಖಾನ್ ನಿಯಂತ್ರಿಸುತ್ತಿದ್ದಾರೆ ಎನ್ನಲಾಗುತ್ತಿದೆ.. ಹಾಗಾದರೆ ಶಾರುಖ್‌ಗೆ ಆಕೆ ವಿಧಿಸಿದ ಕಟ್ಟುನಿಟ್ಟಿನ ನಿಯಮಗಳೇನು ಗೊತ್ತಾ? 

Written by - Savita M B | Last Updated : Dec 16, 2023, 10:44 AM IST
  • ಶಾರುಖ್ ಖಾನ್- ಗೌರಿ ಖಾನ್ ಚಿತ್ರರಂಗದ ಅತ್ಯಂತ ಸುಂದರ ಜೋಡಿ
  • ಸುಮಾರು 33 ವರ್ಷಗಳಿಂದ ಪರಸ್ಪರ ಹೊಂದಿಕೊಂಡು ಅನ್ಯೂನ್ಯವಾಗಿ ಬಾಳುತ್ತಿರುವ ಬೆಸ್ಟ್‌ ಕಪಲ್‌
  • ಆದರೆ ಬಾಲಿವುಡ್‌ನಲ್ಲಿ ಬಾದ್ ಷಾ ಆಗಿ ಮುಂದುವರಿಯುತ್ತಿರುವ ಶಾರುಖ್‌ಗೆ ಗೌರಿ ಖಾನ್ ಮನೆಯಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿದ್ದಾರೆ
ಶಾರುಖ್ ಖಾನ್‌ ಅವರನ್ನು ಹಿಡಿತದಲ್ಲಿಟ್ಟಿದ್ದಾರಂತೆ ಗೌರಿ ಖಾನ್.. ಯಾವ ವಿಚಾರದಲ್ಲಿ ಗೊತ್ತಾ..?  title=

Shahrukh Khan: ಶಾರುಖ್ ಖಾನ್- ಗೌರಿ ಖಾನ್ ಚಿತ್ರರಂಗದ ಅತ್ಯಂತ ಸುಂದರ ಜೋಡಿ... ಸುಮಾರು 33 ವರ್ಷಗಳಿಂದ ಪರಸ್ಪರ ಹೊಂದಿಕೊಂಡು ಅನ್ಯೂನ್ಯವಾಗಿ ಬಾಳುತ್ತಿರುವ ಬೆಸ್ಟ್‌ ಕಪಲ್.. ಅಷ್ಟೇ ಅಲ್ಲ..ಸಿನಿಮಾ. ವ್ಯಾಪಾರ ಮತ್ತು ಕುಟುಂಬವನ್ನು ಸಮತೋಲನದಲ್ಲಿಟ್ಟುಕೊಂಡು, ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುವ ಜೋಡಿಗಳಲ್ಲಿ ಒಬ್ಬರು, ಆದರೆ ಬಾಲಿವುಡ್‌ನಲ್ಲಿ ಬಾದ್ ಷಾ ಆಗಿ ಮುಂದುವರಿಯುತ್ತಿರುವ ಶಾರುಖ್‌ಗೆ ಗೌರಿ ಖಾನ್ ಮನೆಯಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿದ್ದಾರೆ. ಹಾಗಾದರೆ ಆಕೆ ಕೊಟ್ಟ ನಿಯಮ ಏನು ಗೊತ್ತಾ? 

ಈ ಬಗ್ಗೆ ಗೌರಿ ಖಾನ್ ಸಂದರ್ಶನದಲ್ಲಿ ಹೇಳಿದ್ದು... "ಶಾರುಖ್ ಖಾನ್ ಅವರು ಹೊರಗಡೆ ಏನಾದರೂ ತಿನ್ನಬೇಕಿದ್ದರೆ... ಅಥವಾ ಯಾವುದೇ ರೆಸ್ಟೊರೆಂಟ್‌ಗೆ ಹೋಗಬೇಕಿದ್ದರೆ ಅದು ನಾನು ವಿನ್ಯಾಸಗೊಳಿಸಿದ ರೆಸ್ಟೋರೆಂಟ್‌ಗೆ ಮಾತ್ರ ಹೋಗಬೇಕು" ಎಂಬ ನಿಯಮವನ್ನು ಹಾಕಿದ್ದಾರೆ. 

ಇದನ್ನೂ ಓದಿ-“ನನಗೆ ‘ಅದು’ ಬೇಕು… ಆದ್ರೆ ನನ್ನ ಗಂಡ ಸಹಕರಿಸುತ್ತಿಲ್ಲ…”-ಪುಷ್ಪಾ ನಟಿ ಅನಸೂಯ ಬೇಸರ

ಶಾರುಖ್ ಖಾನ್ ಪತ್ನಿ ವೃತ್ತಿಪರ ಇಂಟೀರಿಯರ್ ಡಿಸೈನರ್ ಎಂಬುದು ಗೊತ್ತೇ ಇದೆ. ಅವರು ಮುಂಬೈನಲ್ಲಿ ಅನೇಕ ದೊಡ್ಡ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ನೂರಾರು ರೆಸ್ಟೋರೆಂಟ್ ಗಳ ಒಳಾಂಗಣ ವಿನ್ಯಾಸವನ್ನೂ ಗೌರಿ ಖಾನ್ ಮಾಡಿದ್ದಾರೆ. ಗೌರಿ ಖಾನ್ ಇತ್ತೀಚೆಗೆ ಮುಂಬೈನ ಬಾಂದ್ರಾದ ಉಪನಗರದಲ್ಲಿ ಮೆಕ್ಸಿಕನ್ ರೆಸ್ಟೋರೆಂಟ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಅಷ್ಟೇ ಅಲ್ಲ, ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭಕ್ಕೂ ದಂಪತಿ ತೆರಳಿದ್ದರು. 

ಇದನ್ನೂ ಓದಿ-ಸಿಲ್ಕ್ ಸ್ಮಿತಾ ಮೈಯನ್ನು ಸಿಗರೇಟ್ ನಿಂದ ಸುಡುತ್ತಿದ್ದ ಖ್ಯಾತ ನಟ ಯಾರು?

ಇದಲ್ಲದೇ ಗೌರಿ ಖಾನ್ ಇಂಟೀರಿಯರ್ ಡಿಸೈನರ್ ಆಗಿ ಬಾಲಿವುಡ್‌ನ ಅನೇಕ ಸೆಲೆಬ್ರಿಟಿ ಮನೆಗಳಲ್ಲಿ ಕೆಲಸ ಮಾಡಿದ್ದಾರೆ. ಅನನ್ಯಾ ಪಾಂಡೆ, ಶೇನ್, ಫಲ್ಗುಣಿ ಪೀಕಾಕ್, ರಣಬೀರ್ ಕಪೂರ್, ಆಲಿಯಾ ಭಟ್ ಮುಂತಾದವರು ಸೆಲೆಬ್ರಿಟಿಗಳ ಮನೆ ಮತ್ತು ವಾಣಿಜ್ಯ ಕಟ್ಟಡಗಳ ಒಳಾಂಗಣವನ್ನು ವಿನ್ಯಾಸ ಮಾಡಿದ್ದಾರೆ.. 

ಇನ್ನು ಶಾರುಖ್ ಖಾನ್ ವಿಚಾರಕ್ಕೆ ಬಂದರೆ... ಲಾಂಗ್ ಗ್ಯಾಪ್ ತೆಗೆದುಕೊಂಡಿರುವ ಶಾರುಖ್ ಸದ್ಯ ಸಾಲು ಸಾಲು ಸಿನಿಮಾಗಳ ಮೂಲಕ ಮಾಸ್‌ ಆಗಿ ಅಬ್ಬರಿಸಿದ ಅವರ ಪಠಾಣ್ ಮತ್ತು ಜವಾನ್ ಚಿತ್ರಗಳು 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News