ಐನೂರು ವರ್ಷಗಳ ಬಳಿಕ ಮೂರು ರಾಶಿಗಳ ಗೋಚರ ಜಾತಕದಲ್ಲಿ ನಾಲ್ಕು ರಾಜಯೋಗಗಳ ರಚನೆ, ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯೋಗ!

Rajlakshmi-Ruchak-Malavya-Budhaditya Rajyogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ ಐನೂರು ವರ್ಷಗಳ ಬಳಿಕ ಮೂರು ರಾಶಿಗಳ ಗೋಚರ ಜಾತಕದಲ್ಲಿ ನಾಲ್ಕು ರಾಜಯೋಗಗಳು ರಚನೆಯಾಗುತ್ತಿವೆ. ಇದರಿಂದ ಈ ರಾಶಿಗಳಿಗೆ ಸಂಬಂಧಿಸಿದ ಜನರ ಜೀವನದಲ್ಲಿ ಅಪಾರ ಧನಲಾಭ ಹರಿದು ಬರಲಿದ್ದು, ಜೀವನದಲ್ಲಿ ಭಾಗ್ಯೋದಯದ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಐನೂರು ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೂರು ರಾಶಿಯವರ ಗೋಚರ ಜಾತಕದಲ್ಲಿ 4 ರಾಜಯೋಗಗಳು ರೂಪುಗೊಳ್ಳುತ್ತಿವೆ. ಇವುಗಳ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ಉಂಟಾಗಲಿದೆ. ಡಿಸೆಂಬರ್ 16, 2023 ರಂದು ಸೂರ್ಯನ ಧನು ರಾಶಿ ಗೋಚಾರದ ಮೂಲಕ ಬುಧಾದಿತ್ಯ ರಾಜಯೋಗ ರೂಪುಗೊಳ್ಳಲಿದೆ. ಸೂರ್ಯನ ಈ ಗೋಚರದ ಅವಧಿಯಲ್ಲಿ ಆತನ ನವಮ ದೃಷ್ಟಿ ಮೇಷ ರಾಶಿಯಲ್ಲಿರುವ ಗುರುವಿನ ಮೇಲಿರಲಿದೆ. ಇದರಿಂದ ರಾಜಲಕ್ಷ್ಮಿ ಯೋಗ ರಚನೆಯಾಗುತ್ತಿದೆ. ಇನ್ನೊಂದೆಡೆ ಮಂಗಳ ತನ್ನ ಸ್ವರಾಶಿಯಲ್ಲಿ  ಗೋಚರಿಸುವ ಮೂಲಕ ರುಚಕ ರಾಜಯೋಗ ನಿರ್ಮಿಸಲಿದ್ದಾನೆ. ಇದರ ಜೊತೆಗೆ ಶುಕ್ರ ತನ್ನ ಸ್ವರಾಶಿಯ ಮೂಲಕ ಮಾಲವ್ಯ ರಾಜಯೋಗ ರೂಪಿಸುತ್ತಿದ್ದಾನೆ, ಐನೂರು ವರ್ಷಗಳ ಸುದೀರ್ಘ ಅವಧಿಯ ನಂತರ ಈ ನಾಲ್ಕು ರಾಜಯೋಗಗಳು ರೂಪುಗೊಳ್ಳುತ್ತಿದ್ದು, ಇದರಿಂದ ಹಲವು ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.  ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

 

ಇದನ್ನೂ ಓದಿ-ಹತ್ತು ವರ್ಷಗಳ ಬಳಿಕ ಗುರು-ಶುಕ್ರರಿಂದ 'ನವಪಂಚಮ ರಾಜಯೋಗ' ನಿರ್ಮಾಣ, ಹೊಸ ವರ್ಷದಲ್ಲಿ ಈ ಜನರಿಗೆ ಭಾರಿ ಧನಲಾಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Rajlakshmi-Ruchak-Malavya-Budhaditya Rajyogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ ಐನೂರು ವರ್ಷಗಳ ಬಳಿಕ ಮೂರು ರಾಶಿಗಳ ಗೋಚರ ಜಾತಕದಲ್ಲಿ ನಾಲ್ಕು ರಾಜಯೋಗಗಳು ರಚನೆಯಾಗುತ್ತಿವೆ. ಇದರಿಂದ ಈ ರಾಶಿಗಳಿಗೆ ಸಂಬಂಧಿಸಿದ ಜನರ ಜೀವನದಲ್ಲಿ ಅಪಾರ ಧನಲಾಭ ಹರಿದು ಬರಲಿದ್ದು, ಜೀವನದಲ್ಲಿ ಭಾಗ್ಯೋದಯದ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)

2 /5

ಮೇಷ ರಾಶಿ: ನಾಲ್ಕು ರಾಜಯೋಗಗಳ ರಚನೆ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿಯಾಗಲಿದೆ. ಸೂರ್ಯನ ಆಶೀರ್ವಾದದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಧನ-ಸಂಪತ್ತಿನ ವಿಷಯದಲ್ಲಿ ನಿಮಗೆ ವಿಶೇಷ ಲಾಭ ಇರಲಿದೆ. ವೃತ್ತಿಜೀವನದಲ್ಲಿ ಉನ್ನತಿಯ ಯೋಗವಿದೆ. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ. ವಿದ್ಯಾರ್ಥಿಗಳ ಪಾಲಿಗೆ ಈ ಗೋಚರ ವಿಶೇಷವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗುವ ಸಾಧ್ಯತೆ ಇದ್ದು, ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಬಯಸುವವರಿಗೆ ಈ ಯೋಗಗಗಳು ಯಶಸ್ಸನ್ನು ನೀಡಲಿವೆ.  ವಿದೇಶಕ್ಕೆ ಹೋಗಿ ನೌಕರಿ ಮಾಡಬಯಸುವವರ ಆಸೆ ಕೂಡ ಈಡೇರಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿಯೂ ಕೂಡ ಅಪಾರ ಹೆಚ್ಚಳ ಸಂಭವಿಸಲಿದೆ. 

3 /5

ಸಿಂಹ ರಾಶಿ: ಈ ನಾಲ್ಕು ರಾಜಯೋಗಗಳ ರಚನೆ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿವೆ. ಈ ಅವಧಿಯಲ್ಲಿ ನಿಮ್ಮ ಸ್ಥಾನಮಾನ ಪ್ರತಿಸ್ಥೆ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ನಿಮಗೆ ಪ್ರಮೋಷನ್ ಕಾದಿದೆ. ಹೊಸ ನೌಕರಿಯ ಪ್ರಸ್ತಾವನೆ ಕೂಡ ನಿಮಗೆ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದ್ದು, ಈ ಯಾತ್ರೆಗಳು ನಿಮಗೆ ಶುಭ ಫಲಗಳನ್ನು ನೀಡಲಿವೆ. ಇದರ ಜೊತೆಗೆ ನಿಮ್ಮ ದೈನಂದಿನ ಆದಾಯದಲ್ಲಿ ಕೂಡ ಹೆಚ್ಚಳ ಸಂಭವಿಸಲಿದೆ. ಈ ಅವಧಿಯಲ್ಲಿ ನೀವು ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದಲ್ಲದೆ ನಿಮಗೆ ಹೂಡಿಕೆಯಿಂದಲೂ ಕೂಡ ಅಪಾರ ಲಾಭ ಹರಿದುಬರಲಿದೆ. 

4 /5

ತುಲಾ ರಾಶಿ: ನಾಲ್ಕು ರಾಜಯೋಗಗಳ ರಚನೆ ನಿಮ್ಮ ಪಾಳಿಗೂ ಕೂಡ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿವೆ. ವೃತ್ತಿ ಜೀವನದಲ್ಲಿ ಉನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ಹಣಗಳಿಕೆಯ ವಿಪುಲ ಅವಕಾಶಗಳು ನಿಮಗೆ ಸಿಗಲಿವೆ. ಸ್ಥಾನಮಾನ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡ ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಿಷ್ಠವಾಗಲಿದೆ ಮತ್ತು ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ಸನ್ನು ಕಾಣುವಿರಿ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)