Makar Sankranti 2023: ಮಕರ ಸಂಕ್ರಾಂತಿ ಹಬ್ಬ, ಯಾವ ರಾಜ್ಯಗಳಲ್ಲಿ ಯಾವ ರೀತಿ ಆಚರಿಸಲಾಗುತ್ತದೆ?

Makar Sankranti Festival 2023: ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Makar Sankranti 2023: ‘ವಿವಿಧತೆಯಲ್ಲಿ ಏಕತೆ’ಯನ್ನು ಹೊಂದಿರುವ ಭಾರತದಲ್ಲಿ ವಿವಿಧ ಹಬ್ಬಗಳನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ ಹಬ್ಬವೆಂದೇ ಕರೆಯಲಾಗುವ ಮಕರ ಸಂಕ್ರಾಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಎಳ್ಳು-ಬೆಲ್ಲ ಹಂಚಿ ಜೀವನದಲ್ಲಿ ಸಿಹಿ-ಕಹಿ ಸಮವಾಗಿರಲಿ ಎಂದು ಹಾರೈಸುತ್ತಾರೆ. ಈ ಹಬ್ಬವನ್ನು ಭಾರತ ಮಾತ್ರವಲ್ಲದೇ ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಕಾಂಬೋಡಿಯಾದಲ್ಲೂ ಆಚರಿಸಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಈ ಹಬ್ಬವನ್ನು ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ತಮಿಳುನಾಡಿನಲ್ಲಿ ಆಚರಿಸಲಾಗುವ ಪೊಂಗಲ್ ಭಗವಾನ್ ಇಂದ್ರನಿಗೆ ಗೌರವ ಸಲ್ಲಿಸುವ 4 ದಿನಗಳ ಆಚರಣೆಯಾಗಿದೆ. ಸಮೃದ್ಧ ಮಳೆ, ಫಲವತ್ತಾದ ಭೂಮಿ ಮತ್ತು ಉತ್ತಮ ಇಳುವರಿಗಾಗಿ ಇಂದ್ರನಿಗೆ ಧನ್ಯವಾದ ಹೇಳಲು ಈ ಹಬ್ಬ ಆಚರಿಸಲಾಗುತ್ತದೆ. ತಮಿಳುನಾಡು ಸೇರಿದಂತೆ ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಜನವರಿ 15ರಿಂದ 18ರವರೆಗೆ ಪೊಂಗಲ್ ಆಚರಿಸಲಾಗುತ್ತದೆ. ಪೊಂಗಲ್ ಅನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ.

2 /4

ಈ ವರ್ಷ ಜನವರಿ 14 ಮತ್ತು 15ರಂದು ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಸುಗ್ಗಿಯ ಋತುವಿನ ಆರಂಭ  ಗುರುತಿಸಲು ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಮನೆಳಲ್ಲಿಯೂ ಎಳ್ಳು-ಬೆಲ್ಲ ತಯಾರಿಸಿ ನೆರೆಹೊರೆಯರಿಗೆ ಹಂಚಲಾಗುತ್ತದೆ. ಜೊತೆಗೆ ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಪುರಾಣಗಳ ಪ್ರಕಾರ ಋಷಿ ವಿಶ್ವಾಮಿತ್ರನು ಈ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದ ಅಂತಾ ಹೇಳಲಾಗುತ್ತದೆ. ಈ ದಿನ ಸೂರ್ಯ ದೇವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.

3 /4

ಈ ವರ್ಷ ಜನವರಿ 13ರಂದು ಲೋಹ್ರಿ ಹಬ್ಬವು ಬರುತ್ತದೆ. ಮಕರ ಸಂಕ್ರಾಂತಿ ಹಬ್ಬದ ಹಿಂದಿನ ದಿನ ಲೋಹ್ರಿಯನ್ನು ಆಚರಿಸಲಾಗುತ್ತದೆ. ಈ ಹಬ್ಬದೊಂದಿಗೆ ಅನೇಕ ಸಾಮಾಜಿಕ-ಸಾಂಸ್ಕೃತಿಕ ಮತ್ತು ಜಾನಪದ ದಂತಕಥೆಗಳಿವೆ. ಈ ಹಬ್ಬವು ಸಂಜೆಯ ದೀಪೋತ್ಸವಗಳಿಗೆ ಹೆಸರಾಗಿದೆ. ಹಬ್ಬದ ವೇಳೆ ಕಡಲೆಕಾಯಿ, ಎಳ್ಳು, ಬೆಲ್ಲ ಮತ್ತು ಪಾಪ್‌ಕಾರ್ನ್‌ಗಳನ್ನು ಸೇವಿಸಲಾಗುತ್ತದೆ. ಪೂಜಾ ವಿಧಿಯ ಭಾಗವಾಗಿ ಈ ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ಪವಿತ್ರ ಅಗ್ನಿಗೆ ಅರ್ಪಿಸಲಾಗುತ್ತದೆ.

4 /4

ಅಸ್ಸಾಂನಲ್ಲಿ ಬಿಹು ಸುಗ್ಗಿಯ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತದ ಅತ್ಯಂತ ಸುಂದರ ರಾಜ್ಯಗಳಲ್ಲಿ ಒಂದಾಗಿರುವ ಅಸ್ಸಾಂನಲ್ಲಿ ಈ ಹಬ್ಬವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವುದು ವಾಡಿಕೆ. ಒಂದೇ ವರ್ಷದಲ್ಲಿ ಅಸ್ಸಾಮಿಗಳು 3 ವಿಭಿನ್ನ ರೀತಿಯ ಬಿಹು ಹಬ್ಬವನ್ನು ಆಚರಿಸುತ್ತಾರೆ. ಏಪ್ರಿಲ್ ತಿಂಗಳ ಮಧ್ಯದಲ್ಲಿ ಬೋಹಾಗ್ ಬಿಹು, ಜನವರಿ ತಿಂಗಳ ಮಧ್ಯದಲ್ಲಿ ಮಾಗ್ ಬಿಹು ಮತ್ತು ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಕಾಟಿ ಬಿಹು ಎಂದು ಆಚರಿಸುತ್ತಾರೆ.