ನವದೆಹಲಿ: ನೀವು ಎಂದಾದರೂ ಬಾಳೆಹಣ್ಣು ತಿಂದಿದ್ದೀರಾ? ಬಾಳೆಹಣ್ಣನ್ನು ಯಾರು ತಾನೇ ತಿಂದಿರೋಲ್ಲ. ಅದೇನು ಕಬ್ಬಿಣದ ಕಡಲೆಯೇ ಎಂದು ಯೋಚಿಸುತ್ತಿದ್ದೀರಾ... ನಿಸ್ಸಂಶಯವಾಗಿ, ಅದರ ಬಗ್ಗೆ ಯೋಚಿಸಲು ಕಾರಣವಿದೆ. ಬಾಳೆಹಣ್ಣಿನ ಬೆಲೆ ಈ ಮೊದಲಿಗಿಂತ ಹೆಚ್ಚಾಗಿರುವುದೇನೋ ನಿಜ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿರ್ ಅದನ್ನು ಕೊಂಡು ತಿನ್ನಲೂ ಸಾಧ್ಯವಿಲ್ಲ ಎಂಬಷ್ಟೇನು ದುಬಾರಿಯಿಲ್ಲ. ಹಲವು ನಗರಗಳಲ್ಲಿ ಅದರ ಬೆಲೆ ಬೇರೆ ಇರಬಹುದು. ಒಂದು ಡಜನ್ ಬಾಳೆಹಣ್ಣು 40 ರಿಂದ 60 ರೂಪಾಯಿಗಳಷ್ಟು ಆಗಿರಬಹುದು ಅಥವಾ ಒಂದು ಡಜನ್ ಬಾಳೆಹಣ್ಣಿನ ಬೆಲೆ 100 ರೂ. ಎಂದೇ ಭಾವಿಸೋಣ. ಆದರೆ ಪಂಚತಾರಾ ಹೋಟೆಲ್‌ನಲ್ಲಿ, ಎರಡೇ ಎರಡು ಬಾಳೆಹಣ್ಣು ತಿಂದ ವ್ಯಕ್ತಿ ಅದರ ಬಿಲ್ ಕಂಡು ಗಾಬರಿಯಾಗಿದ್ದಾರೆ.
ಹೌದು, ಪಂಚತಾರಾ ಹೋಟೆಲ್‌ನಲ್ಲಿ ಎರಡು ಬಾಳೆಹಣ್ಣು ತಿಂದ ವ್ಯಕ್ತಿ ಬಿಲ್ ನೋಡಿ ಬೆರಗಾಗಿದ್ದಾರೆ. ಅಸಲಿಗೆ ಬಾಲಿವುಡ್ ನಟ ಮತ್ತು ನಿರ್ದೇಶಕ ರಾಹುಲ್ ಬೋಸ್ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ತಾವು ಹೋಟೆಲ್‌ಗೆ ಹೋಗಿ ಅಲ್ಲಿ ಎರಡು ಬಾಳೆಹಣ್ಣು ತಿಂದಿರುವುದಾಗಿ ಹೇಳಿದರು. ಆದರೆ ಆ ಬಾಳೆಹಣ್ಣಿನ ಬಿಲ್ ನೋಡಿದಾಗ ಇಂದ್ರಿಯಗಳಲ್ಲಿ ಗಾಳಿ ಹೊಗೆ ಬರಲಾರಂಭಿಸಿತು ಎಂದಿದ್ದಾರೆ.
'ಆ ಬಗ್ಗೆ ನಂಬಿಕೆ ಬರಲು ನೀವೂ ಕೂಡ ಆ ಬಿಲ್ ನೋಡಬೇಕು. ಹಣ್ಣು ನಿಮಗೆ ಹಾನಿಕಾರಕವಲ್ಲ ಎಂದು ಹೇಳುತ್ತಾರೆ' ಎಂಬ ಶೀರ್ಷಿಕೆಯಡಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಬೋಸ್, ಈ ವಿಡಿಯೋದಲ್ಲಿ ಬಾಳೆಹಣ್ಣಿನ ಚಿತ್ರ ತೋರಿಸಿ, ಬಿಲ್ ಪ್ರತಿಯನ್ನೂ ತೋರಿಸಿದ್ದಾರೆ.
ವೀಡಿಯೊ ವೀಕ್ಷಿಸಿ ...
You have to see this to believe it. Who said fruit wasn’t harmful to your existence? Ask the wonderful folks at @JWMarriottChd #goingbananas #howtogetfitandgobroke #potassiumforkings pic.twitter.com/SNJvecHvZB
— Rahul Bose (@RahulBose1) July 22, 2019
ರಾಹುಲ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ, ಹೋಟಲ್ ಬಿಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ವೀಡಿಯೊದ ಬಗ್ಗೆ ತಮಾಷೆ ಮಾಡುವಾಗ, ಒಂದು ವೇಳೆ ನೀವು ಬನಾನಾ(ಬಾಳೆಹಣ್ಣು) ಶೇಕ್ ಕೇಳಿದರೆ ಅದರ ದರ ಐಫೋನ್‌ಗೆ ಇರುವ ಬೆಲೆ ಇದ್ದಿರಬಹುದು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.