ಚಳಿಗಾಲದಲ್ಲಿ ನಿಮ್ಮ ಮೂಳೆಗಳನ್ನು ಬಳಪಡಿಸಲು ಈ 7 ಸೂಪರ್‌ಫುಡ್‌ಗಳನ್ನು ತಪ್ಪದೇ ಸೇವಿಸಿ

Superfoods For Bones: ಚಳಿಗಾಲದಲಿ ಅತಿಯಾದ ಶೀತದಿಂದಾಗಿ ದೇಹದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುವುದರಿಂದ, ಬೇರೆ ಋತುಮಾನಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ಮೂಳೆ ಮುರಿತದ ಅಪಾಯ ಹೆಚ್ಚಾಗಿರುತ್ತದೆ. 

Written by - Yashaswini V | Last Updated : Dec 7, 2023, 03:20 PM IST
  • ಚಳಿಗಾಲದಲ್ಲಿ ಮೂಳೆಗಳು ಬಲವಾಗಿರಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ.
  • ಅದರಲ್ಲೂ ಮುಖ್ಯವಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವುದು ಮೂಳೆಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
  • ಆರೋಗ್ಯ ತಜ್ಞರ ಪ್ರಕಾರ, ನಿಮ್ಮ ದೈನಂದಿನ ಆಹಾರದಲ್ಲಿ 7 ಸೂಪರ್‌ಫುಡ್‌ಗಳನ್ನು ಸೇರಿಸುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ ಎನ್ನಲಾಗುತ್ತದೆ.
ಚಳಿಗಾಲದಲ್ಲಿ  ನಿಮ್ಮ ಮೂಳೆಗಳನ್ನು ಬಳಪಡಿಸಲು ಈ 7 ಸೂಪರ್‌ಫುಡ್‌ಗಳನ್ನು ತಪ್ಪದೇ ಸೇವಿಸಿ  title=

Superfoods For Bones In Winter: ಚಳಿಗಾಲದಲ್ಲಿ ಶೀತ ವಾತಾವರಣದಿಂದಾಗಿ ದೇಹದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಇದು ಮೂಳೆಗಳು ದುರ್ಬಲಗೊಳ್ಳಲು ಪ್ರಮುಖ ಕರಣವಾಗಿದ್ದು, ಹಾಗಾಗಿಯೇ ಇತರ ಋತುಗಳಿಗೆ ಹೋಲಿಸಿದರೆ ಚಳಿಗಾಲದಲ್ಲಿ ಮೂಳೆ ಮುರಿತದ ಅಪಾಯ ಶೇ. 20ರಷ್ಟು ಹೆಚ್ಚು ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ನೀವು ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವುದರಿಂದ ಮೂಳೆಗಳನ್ನು ಬಲಿಷ್ಠಗೊಳಿಸಬಹುದು ಎನ್ನಲಾಗುತ್ತದೆ. 

ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಮೂಳೆಗಳನ್ನು ಬಲಗೊಳಿಸಲು ನಿಮ್ಮ ದೈನಂದಿನ ಆಹಾರಪದ್ದತಿಯಲ್ಲಿ ಏಳು ಆಹಾರಗಳನ್ನು ಸೂಪರ್‌ಫುಡ್‌ಗಳೆಂದು ಹೇಳಲಾಗುತ್ತದೆ. ಆ ಆಹಾರಗಳು ಯಾವುವು, ಅವುಗಳಿಂದ ಏನು ಪ್ರಯೋಜನ ಎಂದು ತಿಳಿಯೋಣ... 

ಚಳಿಗಾಲದಲ್ಲಿ ಮೂಳೆ ಮುರಿತ ತಪ್ಪಿಸಿ, ಮೂಳೆಗಳನ್ನು ಬಳಪಡಿಸಲು ನಿಮ್ಮ ಡಯಟ್ನಲ್ಲಿರಲಿ ಈ 7 ಸೂಪರ್‌ಫುಡ್‌ಗಳು: 
ಡೈರಿ ಉತ್ಪನ್ನಗಳು: 

ನಿಮಗೆಲ್ಲರಿಗೂ ತಿಳಿದಿರುವಂತೆ ಮೂಳೆಗಳು ಬಲಿಷ್ಠವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ. ಡೈರಿ ಉತ್ಪನ್ನಗಳಾದ ಹಾಲು, ಮೊಸರು ಮತ್ತು ಚೀಸ್ ಅನ್ನು ಕ್ಯಾಲ್ಸಿಯಂನ ಅತ್ಯುತ್ತಮ ಮೂಲ ಎಂದು ಪರಿಗಣಿಸಲಾಗಿದೆ. ಒಂದು ಕಪ್ ಹಾಲಿನಲ್ಲಿ ಸುಮಾರು 300 ಮಿಗ್ರಾಂ ಕ್ಯಾಲ್ಸಿಯಂ ಇದ್ದರೆ, ಮೊಸರಿನಲ್ಲಿ 400ಮಿಗ್ರಾಂ ಮತ್ತು ಒಂದು ಕಪ್ ಚೀಸ್‌ನಲ್ಲಿ ಸುಮಾರು 700 ಮಿಗ್ರಾಂ ಕ್ಯಾಲ್ಸಿಯಂ ಕಂಡು ಬರುತ್ತದೆ. 

ಇದನ್ನೂ ಓದಿ- ಪದೇ ಪದೇ ಒಂದೇ ಗ್ಲಾಸ್/ಬಾಟಲಿನಲ್ಲಿ ನೀರು ಕುಡಿಯುತ್ತೀರಾ? ಹೆಚ್ಚಾಗಬಹುದು ಈ ಸಮಸ್ಯೆ

ಹಸಿರು ಸೊಪ್ಪು-ತರಕಾರಿಗಳು: 
ಪಾಲಕ್ ಸೊಪ್ಪು, ಬ್ರೊಕೋಲಿ, ಕೋಸುಗಡ್ಡೆಯಂತಹ ಹಸಿರು ಸೊಪ್ಪು ತರಕಾರಿಗಳಲ್ಲಿ ಕ್ಯಾಲ್ಸಿಯಂ, ವಿಟಮಿನ್ ಕೆ ಮತ್ತು ಇತರ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತವೆ. ಇವುಗಳಲ್ಲಿರುವ ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಈ ಆಹಾರಗಳನ್ನು ಸೇವಿಸುವುದರಿಂದ ಬಲಿಷ್ಠ ಮೂಳೆಗಳನ್ನು ನಿಮ್ಮದಾಗಿಸಬಹುದು. 

ಸಾಲ್ಮನ್ ಮತ್ತು ಟ್ಯೂನ ಫಿಶ್: 
ನಿಮಗೆಲ್ಲರಿಗೂ ತಿಳಿದಿರುವಂತೆ ಸಾಲ್ಮನ್ ಮತ್ತು ಟ್ಯೂನ ಫಿಶ್ ಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮೂಳೆಗಳನ್ನು ಬಲಪಡಿಸಲು ತುಂಬಾ ಪ್ರಯೋಜನಕಾರಿ ಆಗಿವೆ. 

ನಟ್ಸ್: 
ಬಾದಾಮಿ, ವಾಲ್‌ನಟ್ಸ್ ನಂತಹ ಬೀಜಗಳು ಮತ್ತು ಎಳ್ಳಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಇತರ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತವೆ. ಇವುಗಳ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ. 

ಸೋಯಾ ಉತ್ಪನ್ನಗಳು: 
ಸೋಯಾ ಉತ್ಪನ್ನಗಳನ್ನು ಕ್ಯಾಲ್ಸಿಯಂನ ಉತ್ತಮ ಮೂಲಗಳೆಂದು ಪರಿಗಣಿಸಲಾಗುತ್ತದೆ. ದೈನಂದಿನ ಆಹಾರದಲ್ಲಿ ಇವುಗಳ ಬಳಕೆ ಮೂಳೆಗಳನ್ನು ಸದೃಢವಾಗಿಸುತ್ತದೆ.

ಇದನ್ನೂ ಓದಿ- Walking In Winter: ಈ 8 ಅದ್ಭುತ ಪ್ರಯೋಜನಗಳಿಗಾಗಿ ಚಳಿಗಾಲದಲ್ಲಿ ನಿತ್ಯ ವಾಕಿಂಗ್ ಮಾಡಿ

ಮೊಟ್ಟೆ: 
ಮೊಟ್ಟೆಗಳು ವಿಟಮಿನ್ ಡಿ ಯ ಉತ್ತಮ ಮೂಲವಾಗಿದ್ದು ವಿಟಮಿನ್ ಡಿ ಕ್ಯಾಲ್ಸಿಯಂ ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. 

ದ್ವಿದಳ ಧಾನ್ಯಗಳು: 
ಬೀನ್ಸ್, ಮಸೂರ ಮತ್ತು ಬಟಾಣಿಗಳಂತಹ ದ್ವಿದಳ ಧಾನ್ಯಗಳು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಇತರ ಪೋಷಕಾಂಶಗಳ ಸಮೃದ್ಧ ಮೂಲಗಳು. ಹಾಗಾಗಿ, ನಿಮ್ಮ ಡಯಟ್ನಲ್ಲಿ ಈ ಆಹಾರಗಳ ಬಳಕೆಯಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News