2025 ರವರೆಗೆ ಈ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಸಲಿದ್ದಾರೆ ಶನಿ-ರಾಹು-ಗುರು ! ಎಳ್ಳಷ್ಟೂ ಕಷ್ಟ ಸೋಕದಂತೆ ಮುನ್ನಡೆಸುತ್ತಾರೆ

Shani Rahu Guru Positive Effect:2024 ಮತ್ತು 2025 ರಲ್ಲಿ ಈ ರಾಶಿಯವರು ಬಹಳಷ್ಟು ಸಂಪತ್ತು, ಯಶಸ್ಸು ಮತ್ತು ಸಂತೋಷವನ್ನು ಪಡೆಯುತ್ತಾರೆ. 2024-25 ರವರೆಗೆ ಗುರು, ಶನಿ ಮತ್ತು ರಾಹು ಯಾವ ರಾಶಿಯವರ ಮೇಲೆ ದಯೆ ತೋರುತ್ತಾರೆ ನೋಡೋಣ. 

Written by - Ranjitha R K | Last Updated : Dec 7, 2023, 01:53 PM IST
  • 2024-25ನೇ ಸಾಲಿನಲ್ಲಿ ಬೆಳಗಲಿದೆ ಈ ರಾಶಿಯವರ ಅದೃಷ್ಟ
  • ಎಲ್ಲಾ 12 ರಾಶಿಯ ಜನರ ಮೇಲೆ ಪರಿಣಾಮ
  • ಬದಲಾಗಲಿದೆ ಈ ರಾಶಿಯವರ ಅದೃಷ್ಟ
2025 ರವರೆಗೆ ಈ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಸಲಿದ್ದಾರೆ ಶನಿ-ರಾಹು-ಗುರು ! ಎಳ್ಳಷ್ಟೂ ಕಷ್ಟ ಸೋಕದಂತೆ ಮುನ್ನಡೆಸುತ್ತಾರೆ  title=

Shani Rahu Guru Positive Effect : ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಅದರ ಪರಿಣಾಮವು ಎಲ್ಲಾ 12 ರಾಶಿಯ ಜನರ ಮೇಲೆ ಆಗುತ್ತದೆ. 2024 ರಲ್ಲಿ, ಕೆಲವು ರಾಶಿಯವರಿಗೆ ಶನಿ, ರಾಹು ಮತ್ತು ಗುರುಗಳ ಸ್ಥಾನವು ಉತ್ತಮವಾಗಿರುತ್ತದೆ. 3 ಅದೃಷ್ಟ ರಾಶಿಯ ಜನರು 2024 ರಲ್ಲಿ ಮಾತ್ರವಲ್ಲದೆ 2025 ರವರೆಗೆ ಈ ಶುಭ ಫಲವನ್ನೇ ಪಡೆಯುತ್ತಾರೆ. ಈ ಜನರು 2024 ಮತ್ತು 2025 ರಲ್ಲಿ ಬಹಳಷ್ಟು ಸಂಪತ್ತು, ಯಶಸ್ಸು ಮತ್ತು ಸಂತೋಷವನ್ನು ಪಡೆಯುತ್ತಾರೆ. 2024-25 ರವರೆಗೆ ಗುರು, ಶನಿ ಮತ್ತು ರಾಹು ಯಾವ ರಾಶಿಯವರ ಮೇಲೆ ದಯೆ ತೋರುತ್ತಾರೆ ನೋಡೋಣ. 

2024-25ನೇ ಸಾಲಿನಲ್ಲಿ ಬೆಳಗಲಿದೆ ಈ ರಾಶಿಯವರ ಅದೃಷ್ಟ  : 
ಮೇಷ ರಾಶಿ : ಈ ಮೂರು ಗ್ರಹಗಳ ಶುಭ ಸ್ಥಾನವು ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. 2024 ರಲ್ಲಿ, ಗುರುವು ಮೇಷ ರಾಶಿಯಿಂದ ಹೊರಬಂದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಮೂಲಕ ಮೇಷ ರಾಶಿಯವರ ಅದೃಷ್ಟವೂ ಬೆಳಗುತ್ತದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಆದಾಯ ಹೆಚ್ಚಲಿದೆ. ಹಣದ ಒಳಹರಿವಿನ ಹೊಸ ಮಾರ್ಗಗಳು ಸೃಷ್ಟಿಯಾಗಲಿವೆ. ವ್ಯಾಪಾರದಲ್ಲಿ ಭಾರೀ ಲಾಭವಾಗಲಿದೆ. ವಿದೇಶ ಪ್ರವಾಸಕ್ಕೆ ಹೋಗಬಹುದು.

ಇದನ್ನೂ ಓದಿ : ಈ ರಾಶಿಯವರ ಎಲ್ಲಾ ರೀತಿಯ ಕಷ್ಟಗಳಿಗೆ ಬೀಳುವುದು ತೆರೆ ! ಇನ್ನೊಂದು ವಾರದಲ್ಲಿ ಸೂರ್ಯನಂತೆ ಬೆಳಗುವುದು ಅದೃಷ್ಟ !

ವೃಷಭ ರಾಶಿ : 2025ರ ವೇಳೆಗೆ, ವೃಷಭ ರಾಶಿಯ ಜನರು ಸಹ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಶನಿದೇವನು ವೃತ್ತಿಜೀವನದಲ್ಲಿ ಒಂದರ ನಂತರ ಒಂದರಂತೆ ದೊಡ್ಡ ಮಟ್ಟದ ಪ್ರಗತಿಯನ್ನೇ ನೀಡುತ್ತಾನೆ. ನೀವು ಅನೇಕ ದೊಡ್ಡ ಜವಾಬ್ದಾರಿಗಳನ್ನು ಪಡೆಯಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಹಠಾತ್ ಆರ್ಥಿಕ ಲಾಭವಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ಲಾಭವಾಗುವುದು. ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗುವುದು. 

ಸಿಂಹ ರಾಶಿ : ಸಿಂಹ ರಾಶಿಯ ಜನರು 2024 ಮತ್ತು 2025 ರಲ್ಲಿ ಪ್ರಯೋಜನಗಳನ್ನು ಪಡೆಯಬಹುದು. ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಇದ್ದ ಸಮಸ್ಯೆಗಳು ಈಗ ಬಗೆಹರಿಯುತ್ತವೆ. ಆದಾಯ ಹೆಚ್ಚಲಿದೆ. ಸಾಲದಿಂದ ಮುಕ್ತಿ ಸಿಗಲಿದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗುತ್ತದೆ. ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ವಿದೇಶ ಪ್ರವಾಸಕ್ಕೂ ಅವಕಾಶವಿದೆ. ಅವಿವಾಹಿತರಿಗೆ ವಿವಾಹ  ಭಾಗಿ ಕೂಡಿ ಬರಬಹುದು. 

ಇದನ್ನೂ ಓದಿ : ಆದಿತ್ಯ-ಮಂಗಳ ರಾಜಯೋಗ: ಹೊಸ ವರ್ಷದಲ್ಲಿ ಈ ಮೂರು ರಾಶಿಯವರಿಗೆ ಭಾರೀ ಅದೃಷ್ಟ

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News