/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Bank Balance: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ. ಸ್ಮಾರ್ಟ್‌ಫೋನ್‌ ಸಹಾಯದಿಂದ ನಾವು ಕುಳಿತಲ್ಲಿಯೇ ಎಲೆಕ್ಟ್ರಿಕ್ ಬಿಲ್ ಕಟ್ಟುವುದರಿಂದ ಹಿಡಿದು ಬ್ಯಾಂಕಿಂಗ್ ಕೆಲಸಗಳವರೆಗೆ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಬಹುದು. ಆದರೆ, ಫೀಚರ್ ಫೋನ್‌ಗಳಲ್ಲಿ ಇಷ್ಟೆಲ್ಲಾ ಸೌಲಭ್ಯಗಳು ಲಭ್ಯವಿರುವುದಿಲ್ಲ. ಆದಾಗ್ಯೂ, ನಿಮ್ಮ ಬಳಿ ಅಕೌಂಟ್ ನಂಬರ್ ಇಲ್ಲದಿದ್ದರೂ ನೀವು ಈ ನಿಮ್ಮ ಫೀಚರ್ ಫೋನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅದು ಹೇಗೆ ಸಾಧ್ಯ ಎಂದು ತಿಳಿಯಲು ಮುಂದೆ ಓದಿ... 

ವಾಸ್ತವವಾಗಿ, ಫೀಚರ್ ಫೋನ್‌ಗಳು ಎಲ್ಲಾ ಅಪ್ಲಿಕೇಶನ್ ಗಳಿಗೆ ಬೆಂಬಲ ಲಭ್ಯವಿಲ್ಲದ ಕಾರಣ ಬ್ಯಾಂಕಿಂಗ್ ಸಂಬಂಧಿತ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ನೀವು ನಿಮ್ಮ ಅಕೌಂಟ್ ನಂಬರ್ ಮರೆತಿದ್ದರೂ ಸಹ ಆಧಾರ್ ಕಾರ್ಡ್ ಸಹಾಯದಿಂದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಅದೂ ಕೂಡ ಕೆಲವೇ ನಿಮಿಷಗಳಲ್ಲಿ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. 

ಇದನ್ನೂ ಓದಿ- ಎಚ್‌ಡಿಎಫ್‌ಸಿ ಹಾಗೂ ಬ್ಯಾಂಕ್ ಆಫ್ ಅಮೇರಿಕಾಗೆ ಆರ್‌ಬಿಐನಿಂದ ದಂಡ: ಇಲ್ಲಿದೆ ಅಸಲಿ ಕಾರಣ!

ಫೀಚರ್ ಫೋನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು ಈ ಹಂತಗಳನ್ನು ಅನುಸರಿಸಿ:- 
* ಆಧಾರ್ ಕಾರ್ಡ್‌ನ ಸಹಾಯದಿಂದ ನಿಮ್ಮ ಫೀಚರ್ ಫೋನ್‌ನಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ನೀವು ಬಯಸಿದರೆ ಇದಕ್ಕಾಗಿ ಮೊದಲು ನಿಮ್ಮ ಫೋನ್‌ನಿಂದ *99*99*1# ಅನ್ನು ಡಯಲ್ ಮಾಡಬೇಕು.
* ನಂತರ ನೀವು ನಿಮ್ಮ ಆಧಾರ್ ಕಾರ್ಡ್‌ನ 12 ಅಂಕೆಗಳನ್ನು ನಮೂದಿಸಬೇಕು. 
* ಕರೆಯಲ್ಲಿ ನೀವು ನಿಮ್ಮ ಆಧಾರ್‌ನ 12 ಅಂಕೆಗಳ ಕೋಡ್ ಅನ್ನು ನೀವು ಟೈಪ್ ಮಾಡುವಂತೆ ಸೂಚಿಸಿದ ತಕ್ಷಣ, ನೀವು ಈ 12 ಅಂಕಿಯ ಕೋಡ್ ಅನ್ನು ನಮೂದಿಸಬೇಕು. 
* ಇದರಿಂದ ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. 
* ಕೆಲವೇ ಕ್ಷಣಗಳಲ್ಲಿ, ನಿಮ್ಮ ಫೀಚರ್ ಫೋನ್‌ನ ಡಿಸ್‌ಪ್ಲೇಯಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಗೋಚರಿಸುವ ಸಂದೇಶವು ಗೋಚರಿಸುತ್ತದೆ.

ಇದನ್ನೂ ಓದಿ- Ration Card: ಹೊಸ ‘BPL, APL ಕಾರ್ಡ್’ಗೆ ಅರ್ಜಿ ಸಲ್ಲಿಕೆಗೆ ನಾಳೆ ಒಂದೇ ದಿನ ಅವಕಾಶ!

ಬ್ಯಾಂಕ್ ಬ್ಯಾಲೆನ್ಸ್ ತಿಳಿಯಲು ಇದೊಂದು ತುಂಬಾ ಸುಲಭ ಪ್ರಕ್ರಿಯೆಯಾಗಿದೆ. ಆದರೆ, ಇದಕ್ಕಾಗಿ ನೀವು ನಿಮ್ಮ ಫೋನ್ ಸಂಖ್ಯೆಯನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿರಬೇಕು. ಅಷ್ಟೇ ಅಲ್ಲ, ಅದೇ ಫೋನ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಗೂ ಲಿಂಕ್ ಆಗಿರಬೇಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Section: 
English Title: 
Easy way to check bank balance without account number on feature phone
News Source: 
Home Title: 

ಅಕೌಂಟ್ ನಂಬರ್ ಇಲ್ಲದೆಯೇ ಫೀಚರ್ ಫೋನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವ ಸುಲಭ ವಿಧಾನ

ಅಕೌಂಟ್ ನಂಬರ್ ಇಲ್ಲದೆಯೇ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ಫೀಚರ್ ಫೋನ್‌ನಲ್ಲಿಯೂ ತಿಳಿಯಬಹುದು!
Yes
Is Blog?: 
No
Tags: 
Facebook Instant Article: 
Yes
Highlights: 

ಫೀಚರ್ ಫೋನ್‌ಗಳು ಎಲ್ಲಾ ಅಪ್ಲಿಕೇಶನ್ ಗಳಿಗೆ ಬೆಂಬಲ ಲಭ್ಯವಿರುವುದಿಲ್ಲ

ಹಾಗಾಗಿ ಸ್ಮಾರ್ಟ್‌ಫೋನ್‌ನಂತೆ ಫೀಚರ್ ಫೋನ್‌ನಲ್ಲಿ ಬ್ಯಾಂಕಿಂಗ್ ಸಂಬಂಧಿತ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. 

ಆದರೆ, ನೀವು ನಿಮ್ಮ ಅಕೌಂಟ್ ನಂಬರ್ ಮರೆತಿದ್ದರೂ ಸಹ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. 

Mobile Title: 
ಅಕೌಂಟ್ ನಂಬರ್ ಇಲ್ಲದೆಯೇ ಫೀಚರ್ ಫೋನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವ ಸುಲಭ ವಿಧಾನ
Yashaswini V
Publish Later: 
No
Publish At: 
Wednesday, December 6, 2023 - 14:22
Created By: 
Yashaswini V
Updated By: 
Yashaswini V
Published By: 
Yashaswini V
Request Count: 
1
Is Breaking News: 
No
Word Count: 
261