ಬೆಂಗಳೂರು : ದೇಶದಲ್ಲಿ ಬಹುತೇಕ ಮಂದಿ ದೂರ ಪ್ರಯಾಣಕ್ಕೆ ರೈಲನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ರೈಲು ಪ್ರಯಾಣ ಆರಾಮದಾಯಕವಾಗಿರುತ್ತದೆ ಎನ್ನುವುದೇ ಇದಕ್ಕೆ ಕಾರಣ. ಪುಟ್ಟ ಮಕ್ಕಳನ್ನು ಹಿಡಿದು ಪ್ರಯಾಣ ಬೆಳೆಸುವುದು, ಹಿರಿಯರೊಂದಿಗಿನ ಪ್ರಯಾಣ, ರೈಲಿನಲ್ಲಿ ಕಷ್ಟ ಎನಿಸುವುದಿಲ್ಲ. ಅಲ್ಲದೆ ಯಾವಾಗ ಬೇಕೋ ಆಗ ಊಟ ತಿಂಡಿ ಕೂಡಾ ಸಮಸ್ಯೆ ಇಲ್ಲದೆ ಪೂರೈಸಿಕೊಳ್ಳಬಹುದು. ಆದರೆ, ರೈಲು ಪ್ರಯಾಣದ ವೇಳೆ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ರಿಸರ್ವ್ ಬೋಗಿಯಲ್ಲಿ ವೈಟಿಂಗ್ ಲಿಸ್ಟ್ ಪ್ರಯಾಣಿಕರು ಬಂದು ಸೇರಿಕೊಳ್ಳುವುದು.
ಇ-ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿದ್ದರೆ ಅದು ಆಟೋಮ್ಯಾಟಿಕ್ ಆಗಿ ರದ್ದಾಗುತ್ತದೆ. ಆದರೆ, ಕೌಂಟರ್ನಿಂದ ಟಿಕೆಟ್ ಮಾಡಿಸಿದರೆ ಅದು ರದ್ದಾಗುವುದಿಲ್ಲ. ಈ ಕಾರಣದಿಂದಲೇ ವೈಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಕೊಂಡು ಜನರು ರಿಸರ್ವ್ದ್ ಬೋಗಿಯಲ್ಲಿ ಪ್ರಯಾಣಿಸಲು ಆರಂಭಿಸುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡುವುದು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : ವಾರದ ಎರಡನೇ ದಿನವೂ ಏರಿಕೆ ಕಂಡ ಬಂಗಾರ ! ಆಭರಣ ಪ್ರಿಯರಿಗೆ ಶಾಕ್ ಮೇಲೆ ಶಾಕ್
ರಿಸರ್ವ್ದ್ ಬೋಗಿಯಲ್ಲಿ ವೈಟಿಂಗ್ ಟಿಕೆಟ್ ಹಿಡಿದುಕೊಂಡು ಯಾರಾದರೂ ಪ್ರಯಾಣಿಸುತ್ತಿದ್ದರೆ, ಆ ಪ್ರಯಾಣಿಕರ ಬಗ್ಗೆ ಇದೀಗ ದೂರು ಸಲ್ಲಿಸಬಹುದಾಗಿದೆ. ಇದಕ್ಕಾಗಿ ಹೊಸ ಆಪ್ಲಿಕೆಶನ್ ತಯಾರಾಗುತ್ತಿದೆ. ಪ್ರಸ್ತುತ, ಈ ಅಪ್ಲಿಕೇಶನ್ನಲ್ಲಿ ಟೆಸ್ಟಿಂಗ್ ನಡೆಯುತ್ತಿದೆ. ಯಶಸ್ವಿ ಪ್ರಯೋಗದ ನಂತರ, ಪ್ರಯಾಣಿಕರು ಅದನ್ನು Google ಮತ್ತು Apple Play ಅಪ್ಲಿಕೇಶನ್ ಮೂಲಕ ಇಲ್ಲಿ ದೂರನ್ನು ದಾಖಲಿಸಬಹುದು. ರೈಲ್ವೇ ಮಂಡಳಿಯ ಪ್ರಕಾರ, ವೈಟಿಂಗ್ ಟಿಕೆಟ್ ಹೊಂದಿರುವವರು ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಾರೆ ಎಂಬ ದೂರುಗಳುಪದೇ ಪದೇ ಬರುತ್ತಿವೆ. ಇದರಿಂದಾಗಿ ಇತರ ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ಕೆಲ ಪ್ರಕರಣಗಳಲ್ಲಿ ದೂರು ನೀಡಿದರೂ ತಕ್ಷಣ ಪರಿಹಾರ ಸಿಗುತ್ತಿಲ್ಲ ಎಂದು ಹೇಳಲಾಗಿದೆ.
ಈಗ ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ ? :
ರೈಲು ನಿಲ್ದಾಣದಿಂದ ನಿರ್ಗಮಿಸಿದ ನಂತರ, ಟಿಟಿಇ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಆಸನಗಳ ಡೇಟಾವನ್ನು ಹ್ಯಾಂಡ್ ಹೆಲ್ಡ್ ಡಿವೈಸ್ ಮೂಲಕ ಫೀಡ್ ಮಾಡುತ್ತಾರೆ.
ಪ್ರಯಾಣಿಕರು ಆ್ಯಪ್ನಲ್ಲಿ ರೈಲು ಸಂಖ್ಯೆ ಮತ್ತು ಕೋಚ್ ಅನ್ನು ಫೀಡ್ ಮಾಡುತ್ತಾರೆ. ಇದರ ನಂತರ, ಬೋಗಿಯ ಸೀಟ್ ಬರ್ತ್ ರಿಸರ್ವೇಶನ್ ಲೇಔಟ್ ಕಾಣಿಸುತ್ತದೆ.
ಬೋಗಿಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಕಾಣಿಸಿಕೊಂಡರೆ, ಪ್ರಯಾಣಿಕರು ಆ್ಯಪ್ ಮೂಲಕ ದೂರು ನೀಡಲು ಸಾಧ್ಯವಾಗುತ್ತದೆ.
ಆಪ್ ನಲ್ಲಿ ದೂರು ದಾಖಲಾದ ತಕ್ಷಣ ಸಂಪೂರ್ಣ ಮಾಹಿತಿಯು ಸ್ವಯಂಚಾಲಿತವಾಗಿ ಸೆಂಟ್ರಲೈಸ್ಡ್ ಸಿಸ್ಟಮ್ ಗೆ ಹೋಗುತ್ತದೆ. ಇಲ್ಲಿಂದ TTEಗೆ ಅಲರ್ಟ್ ಬರುತ್ತದೆ.
ಇದನ್ನೂ ಓದಿ : ಈ ದಿನಾಂಕದಂದು ಖಾತೆಗೆ ಸೇರಲಿದೆ 18 ತಿಂಗಳ ಡಿಎ ಅರಿಯರ್ಸ್ : ಸರ್ಕಾರಿ ನೌಕರರ ಕೈ ಸೇರುವುದು 2 ಲಕ್ಷಕ್ಕೂ ಅಧಿಕ ಮೊತ್ತ
ದೂರನ್ನು ಸ್ವೀಕರಿಸಿದ ನಂತರ, ಟಿಟಿಇ ಟಿಕೆಟ್ ಇಲ್ಲದೆ ಪ್ರಯಾಣಿಸುವವರನ್ನು ಸಂಬಂಧಪಟ್ಟ ಕೋಚ್ನಲ್ಲಿರುವ ರಿಸರ್ವ್ ಕೋಚ್ನಿಂದ ಹೊರಗೆ ಕಳುಹಿಸುತ್ತಾರೆ. ಯಾವುದೇ ಸಮಸ್ಯೆ ಎದುರಾದರೆ ಅವರು ಆರ್ಪಿಎಫ್ನ ಸಹಾಯ ಪಡೆಯುತ್ತಾರೆ.
ಒಂದು PNR ನಲ್ಲಿ ವೈಟಿಂಗ್ ಮತ್ತು ಕನ್ಫರ್ಮ್ ಟಿಕೆಟ್ ಇದ್ದರೆ ಏನಾಗಬಹುದು? :
ಈಗ ಪ್ರಶ್ನೆಯೆಂದರೆ ಕೆಲವು ಟಿಕೆಟ್ಗಳು ಕನ್ಫರ್ಮ್ ಆಗಿದ್ದು, ಇನ್ನು ಕೆಲವು ಟಿಕೆಟ್ ಗಳು ಅದೆ ಪಿಎನ್ಆರ್ ನಂಬರ್ ನಲ್ಲಿ ವೈಟಿಂಗ್ ನಲ್ಲಿದ್ದರೆ, ಏನು ಮಾಡುವುದು ಎನ್ನುವುದು. ಅಂತಹ ಪರಿಸ್ಥಿತಿಯಲ್ಲಿ, ವೈಟಿಂಗ್ ಪ್ರಯಾಣಿಕರು ಅದೇ PNR ನ ಕನ್ಫರ್ಮ್ಡ್ ಸೀಟಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಪ್ರಯಾಣಿಕರು ಯಾವುದೇ ತೊಂದರೆಯಾಗದಂತೆ ಪ್ರಯಾಣಿಸುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರೈಲ್ವೆ ಹೇಳಿದೆ.
ಇದನ್ನೂ ಓದಿ : ನೌಕರಿಯಿಂದ ಬೇಸತ್ತು ಹೋಗಿರುವಿರಾ? ಬಿಸ್ನೆಸ್ ಆರಂಭಿಸಬೇಕೆ? ಕೈತುಂಬಾ ಸಂಪಾದನೆ ಕೊಡುವ 4 ಬಿಸ್ನೆಸ್ ಪರಿಕಲ್ಪನೆ ಕೇವಲ ನಿಮಗಾಗಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ