ವಿಜಯಪುರ: ಶಾಲೆಗೆ ತೆರಳುತ್ತಿದ್ದ ಒಂಭತ್ತನೇ ತರಗತಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಜಯಪುರ ಬಂದ್ ಗೆ ಕರೆ ನೀಡಲಾಗಿದೆ.
ಈ ಪ್ರಕರಣವನ್ನು ಸಂಬಂಧ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 8.5 ಲಕ್ಷ ರೂ. ಪರಿಹಾರವನ್ನು ನೀಡಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಬಾಲಕಿಯ ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆದರೂ ಸಮಾಧಾನಗೊಳ್ಳದ ಬಾಲಕಿಯ ಪೋಷಕರು ಮತ್ತು ವಿವಿಧ ದಲಿತ ಪರ ಸಂಘಟನೆಗಳು 'ಕೇವಲ ಪರಿಹಾರಧನ ಬೇಡ, ನ್ಯಾಯ ಒದಗಿಸಿ' ಎಂದು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದು, ಇಂದಿಗೂ ಶವ ಮುಂದಿಟ್ಟು ಪ್ರತಿಭಟನೆ ಮುಂದುವರಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ವಿಜಯಪುರದ ಬಾಲಕಿ ನಿವಾಸಕ್ಕೆ ಮುಖ್ಯಮಂತ್ರಿ @siddaramaiah ಅವರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ ಸರ್ಕಾರದ ವತಿಯಿಂದ ಎಂಟೂವರೆ ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಿದರು.— CM of Karnataka (@CMofKarnataka) December 20, 2017
ವಿಜಯಪುರದ ಮಂಜುನಾಥ ನಗರದ ಮಲ್ಲಿಕಾರ್ಜುನ್ ಸ್ಕೂಲ್ ಬಳಿ ಅಪ್ರಾಪ್ತ ಬಾಲಕಿ ತೆರಳುತ್ತಿದ್ದಾಗ ಮೂವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕುತ್ತಿಗೆ ಹಿಸುಕಿ ಕೊಲೆಗೈದಿದ್ದರು. ಹತ್ಯೆಗೀಡಾದ ಬಾಲಕಿ ದಾನೇಶ್ವರಿ ದಲಿತ ಸಮುದಾಯಕ್ಕೆ ಸೇರಿದವಳೆನ್ನಲಾಗಿದೆ.
ಕೈಲಾಶ್, ಸಾಗರ್ ಮೋರೆ, ದೀಪಕ್ ಇನ್ನೂ ಇಬ್ಬರು ಈ ಪ್ರಕರಣದ ಆರೋಪಿಗಳಾಗಿದ್ದು, ಕೈಲಾಸ್ ಮತ್ತು ಸಾಗರ್ ನನ್ನು ಆದರ್ಶನಗರ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.
ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಅನೇಕ ಯುವಕರು, ಸಂಘಟನೆಗಳ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿದ್ದಾರೆ.
ದಾನೇಶ್ವರಿಯನ್ನು ಅತ್ಯಾಚಾರ ಮಾಡಿ ಕೊಂದಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಭಾಗ್ಯವೇ ಇಲ್ಲದಂತಾಗಿದೆ. ವಿಜಯಪುರದಲ್ಲೇ ಇದ್ದರೂ ಮುಖ್ಯಮಂತ್ರಿ ಹೋಗಿ ಸಾಂತ್ವನ ಹೇಳದಿರುವುದು ಬಡವರ ಬಗೆಗಿನ ಅವರ ಧೋರಣೆ ತೋರುತ್ತದೆ. ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸಬೇಕು.
— B.S. Yeddyurappa (@BSYBJP) December 20, 2017
Karnataka CM was in Vijayapura when he learnt the incident of Gang rape but still he didn’t visit the Victim's family,clearly shows his arrogance,this is congress culture, they wrench electorates with caste politics,but never focus on real agenda of law n order #CongressMustGo pic.twitter.com/bQDoENbzWf
— Shilpa Ganesh (@ShilpaaGanesh) December 20, 2017
Pained by the incident in #Vijayapura.Will meet the parents of Dhaneshwari once I'm back from Delhi.Will fight till justice is delivered!!! #CongressMustGo pic.twitter.com/wu3v0OHGJI
— Shobha Karandlaje (@ShobhaBJP) December 20, 2017