ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಮುಜಾಹಿದ್ದಿನ್ ಹೆಸರಿನಲ್ಲಿ ಬಾಂದ್ ಬೆದರಿಕೆಯ ಇ-ಮೇಲ್ ಬಂದಿದೆ. ಕೆಲವು ಅಂತರರಾಷ್ಟ್ರೀಯ ವಿಚಾರಗಳನ್ನು ಪ್ರಸ್ತಾಪಿಸಲಾಗಿರುವ ಈ ಇ-ಮೇಲ್ನ ಮೂಲ ಹುಡುಕಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರಿನ ಪ್ರಮುಖ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು khariijites@beeble.com ಹೆಸರಿನಲ್ಲಿ ಇ-ಮೇಲ್ ಮಾಡಲಾಗಿದೆ. ಈ ಒಂದು ಮೇಲ್ನಲ್ಲಿ ಅನೇಕ ವಿಚಾರಗಳನ್ನು ಪಸ್ತಾಪಿಸಲಾಗಿದೆ. ಶಾಲೆ ಮತ್ತು ಮೈದಾನಗಳಲ್ಲಿ ಸ್ಫೋಟಕ ವಸ್ತುಗಳನ್ನು ಇಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳ ಹೆಸರುಗಳನ್ನು ಉಲ್ಲೇಖಿಸಿ ಬಾಂಬ್ ಬೆದರಿಕೆ ಹಾಕಲಾಗಿದೆ.
ಬೆಂಗಳೂರಿನ ಕೆಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಸದಾಶಿವ ನಗರದ ನೀವ್ ಸ್ಕೂಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಪೋಲಿಸ್ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದು ಸೂಕ್ತ ತನಿಖೆ ನಡೆಸಲು ಸೂಚಿಸಿದೆ. pic.twitter.com/MBxp1tA6i2
— DK Shivakumar (@DKShivakumar) December 1, 2023
ಬಾಂಬ್ ಬೆದರಿಕೆ ಹಿನ್ನೆಲೆ ಶಾಲಾ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ, ಅಲ್ಲದೇ ಪೋಷಕರ ಮೊಗದಲ್ಲಿ ಆತಂಕದ ಛಾಯೆ ಮೂಡಿದೆ. ಹೀಗಾಗಿ ಶಾಲೆಯ ಹತ್ತಿರ ಪೋಷಕರು ಸೇರಿದಂತೆ ಜನಸಾಮಾನ್ಯರು ಜಮಾಯಿಸಿದ್ದಾರೆ. ಈ ಬಾಂಬ್ ಬೆದರಿಕೆ ಮೇಲೆ ಎಲ್ಲಿಂದ ಬಂತು..? ಯಾರಿಂದ ಬಂತು? ಅನ್ನೋ ಪ್ರಶ್ನೆ ಕಾಡುತ್ತಿದೆ. ಬೆಂಗಳೂರು ಪೊಲೀಸರು ಸಹ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: "ಎರಡು ದಿನಗಳಲ್ಲಿ ವರದಿ ತಗೊಂಡು ಕ್ರಮ ತೆಗೆದುಕೊಳ್ಳುತ್ತೇವೆ"
‘ಜೀ ನ್ಯೂಸ್ ಕನ್ನಡ’ ತನಿಖೆಯಿಂದ ಇ-ಮೇಲ್ ಮೂಲ ಪತ್ತೆ..!
ಈಗ ಪೊಲೀಸರ ಕಣ್ಣು khariijites@beeble.com ಮೇಲೆ ನೆಟ್ಟಿದೆ. ಈ ಇ-ಮೇಲ್ ಮೂಲಕವೇ ಬೆಂಗಳೂರಿನ ಶಾಲೆಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ‘ಜೀ ನ್ಯೂಸ್ ಕನ್ನಡ’ ತನಿಖೆ ನಡೆಸಿದ್ದು, ಇ-ಮೇಲ್ ಬಂದಿರುವ ಮೂಲವನ್ನು ಪತ್ತೆ ಹಚ್ಚಿದೆ. ಹೌದು, ನಿಮ್ಮ ‘ಜೀ ಕನ್ನಡ ನ್ಯೂಸ್’ ನಡೆಸಿದ ತನಿಖೆಯಿಂದ ಈ ಅಪರಚಿತ ಇ-ಮೇಲ್ ಮೂಲ ಪತ್ತೆಯಾಗಿದೆ.
ಅಂದಹಾಗೆ ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕುವ ಮೂಲಕ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಆಡಳಿತ ಮಂಡಳಿ, ಪೊಲೀಸರು ಮತ್ತು ರಾಜಕೀಯ ನಾಯಕರಲ್ಲಿ ಆತಂಕವನ್ನುಂಟು ಮಾಡಿರುವ ಈ khariijites@beeble.com ಮೇಲ್ ಬಂದಿದ್ದು Unsecured ವೆಬ್ಸೈಟ್ನಿಂದ. ಹೌದು, ಇದನ್ನು ನೀವು ನಂಬಲೇಬೇಕು.
ಯಾರೂ ಬೇಕಾದರೂ ಈ ರೀತಿಯ ಮೇಲ್ ಮಾಡಬಹುದು!
ಹೌದು, ಈ ರೀತಿಯ ಮೇಲ್ ಅನ್ನು ಯಾರೂ ಬೇಕಾದರೂ, ಎಲ್ಲಿ ಕುಳಿತಾದರೂ ಮಾಡಬಹುದು. ಈ ರೀತಿಯ ಮೇಲ್ ಮಾಡಬೇಕಾದರೆ ನೀವು ಯಾವುದೇ ರೀತಿಯ ಮೊಬೈಲ್ ಸಂಖ್ಯೆ ಮತ್ತು ವೈಯಕ್ತಿಕ ಮಾಹಿತಿ ನೀಡುವ ಅಗತ್ಯವಿಲ್ಲ. https://beeble.com/ ಭೇಟಿ ನೀಡಿ, Create free account ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮಗೆ ವಿವಿಧ ರೀತಿಯ Free ಮತ್ತು Paid ಆಯ್ಕೆಗಳನ್ನು ನೀಡಲಾಗುತ್ತದೆ. ಇಲ್ಲಿ ನೀವು ಸಿಂಪಲ್ ಆಗಿ Free ಕ್ಲಿಕ್ ಮಾಡಬೇಕು.
ನಂತರ ನಿಮಗೆ ಇಷ್ಟ ಬಂದ ಹೆಸರಿನ ಮೇಲ್ ಹೆಸರನ್ನು ಟೈಪ್ ಮಾಡಬೇಕು. ಅಂದರೆ bond007 ರೀತಿ(ಆಗ ಅದು bond007@beeble.com ಆಗುತ್ತದೆ) ಟೈಪ್ ಮಾಡಬೇಕು. ಬಳಿಕ 2 ಬಾರಿ ಪಾಸ್ವರ್ಡ್ ನಮೂದಿಸಬೇಕು. ಈಗ ನಿಮಗೆ ಇಷ್ಟವಾದ display name ನಮೂದಿಸಬೇಕು. ನಂತರ Terms of serviceಗೆ agree ಮಾಡಿ Sign up ಆಗಬೇಕು. ಈಗ ನೀವು ಯಾರಿಗೆ ಬೇಕಾದರೂ ಮೇಲ್ ಮಾಡಬಹುದು. ಇದೇ ರೀತಿ ದುಷ್ಕರ್ಮಿಗಳು ಬೆಂಗಳೂರಿನ ವಿವಿಧ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಮಾಡಿದ್ದಾರೆ. ಇದನ್ನು ಬೆಂಗಳೂರಿನ ಪೊಲೀಸರು ವಿಶೇಷವಾಗಿ ಗಮನಹರಿಸಬೇಕಾಗಿದೆ.
ಇದನ್ನೂ ಓದಿ: "ಪಂಚರಾಜ್ಯಗಳ ಫಲಿತಾಂಶ ಬಿಜೆಪಿ ಪರವಾಗಿ ಬರಲಿದೆ"
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.