Tamannah: ತಮನ್ನಾ ಮದುವೆ.. ಚಿತ್ರರಂಗ ಬಿಡುವ ಸುಳಿವು ಕೊಟ್ರಾ ಮಿಲ್ಕಿ ಬ್ಯೂಟಿ?

Tamannnah Marriage: ನಟಿ ತಮನ್ನಾ ಬಾಲಿವುಡ್ ನ ಜನಪ್ರಿಯ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಅವರು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.   

Written by - Savita M B | Last Updated : Nov 16, 2023, 10:22 AM IST
  • 18 ವರ್ಷಕ್ಕೂ ಹೆಚ್ಚು ಕಾಲ ನಾಯಕಿಯಾಗಿ ನಟಿಸುತ್ತಿರುವ ನಟಿ ತಮನ್ನಾ
  • ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು
  • ಇದೀಗ ಮದುವೆ ನಂತರ ಸೌತ್‌ ಬ್ಯೂಟಿ ಸಿನಿಮಾಗಳಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ
Tamannah: ತಮನ್ನಾ ಮದುವೆ.. ಚಿತ್ರರಂಗ ಬಿಡುವ ಸುಳಿವು ಕೊಟ್ರಾ ಮಿಲ್ಕಿ ಬ್ಯೂಟಿ? title=

South Actress: ತಮಿಳು ಚಿತ್ರರಂಗದಲ್ಲಿ ನಯನತಾರಾ - ತ್ರಿಷಾ ನಂತರ 18 ವರ್ಷಕ್ಕೂ ಹೆಚ್ಚು ಕಾಲ ನಾಯಕಿಯಾಗಿ ನಟಿಸುತ್ತಿರುವ ನಟಿ ತಮನ್ನಾ 2005 ರಲ್ಲಿ 'ಕೆಡಿ' ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರ ನಂತರ, ಅವರು ನಟಿಸಿದ ಹ್ಯಾಪಿ ಡೇಸ್ ಚಿತ್ರವು ವಿಮರ್ಶಾತ್ಮಕವಾಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಅದರಲ್ಲೂ ನಟ ಧನುಷ್ ಜೊತೆ ನಟಿಸಿದ ‘ಪಡಿಕಧವನ್’ ಸಿನಿಮಾ ಅವರ ಸಿನಿಮಾ ಕೆರಿಯರ್ ಗೆ ದೊಡ್ಡ ತಿರುವು ನೀಡಿತು.

ಈ ಚಿತ್ರದ ಯಶಸ್ಸಿನ ನಂತರ, ತಮನ್ನಾ ವಿಜಯ್, ಅಜಿತ್, ಸೂರ್ಯ ಸೇರಿದಂತೆ ಅನೇಕ ಪ್ರಮುಖ ನಟರ ಎದುರು ನಟಿಸಿದರು. ಅದೇ ರೀತಿ ತೆಲುಗಿನಲ್ಲಿ ಹಲವು ನಾಯಕ ನಟರ ಎದುರು ನಟಿಸಿ ಫೇಮಸ್ ಆದರು.

ಇದನ್ನೂ ಓದಿ- BBK10: ಸಂಗೀತಾ ʼಐ ಲವ್‌ ಯುʼ ಅಂತ ಡ್ರೋನ್‌ಗೆ ಪ್ರಪೋಸ್:‌ ನಾಚಿ ನಿರಾದ ಪ್ರತಾಪ್!‌

ಒಂದು ಹಂತದಲ್ಲಿ ತಮನ್ನಾಗೆ ಸಿನಿಮಾ ಅವಕಾಶಗಳು ಕಡಿಮೆಯಾಗತೊಡಗಿದವು. ಆ ಸಮಯದಲ್ಲೇ ಪ್ರಭಾಸ್ ಎದುರು ತಮನ್ನಾ ನಟಿಸಿದ್ದ ‘ಬಾಹುಬಲಿ’ ಸಿನಿಮಾ ತೆರೆಕಂಡು ಮತ್ತೆ ಅವರನ್ನು ಲೈಮ್ ಲೈಟ್ ಗೆ ತಂದಿತ್ತು. ಚಿತ್ರದ ಯಶಸ್ಸಿನ ನಂತರ ನಯನತಾರಾ ಹೆಚ್ಚು ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಲು ಆಯ್ಕೆ ಮಾಡಿಕೊಳ್ಳ ತೊಡಗಿದರು. 

ಚಲನಚಿತ್ರಗಳ ಹೊರತಾಗಿ, ವೆಬ್ ಸರಣಿಯತ್ತ ಗಮನ ಹರಿಸುತ್ತಿರುವ ತಮನ್ನಾ, ಲಸ್ಟ್ ಸ್ಟೋರಿ 2 ವೆಬ್ ಸರಣಿಯಲ್ಲಿ ನಟಿಸಿದಾಗ ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಇದಾದ ಬಳಿಕ ಇತ್ತೀಚೆಗಷ್ಟೇ ಅವರ ಪೋಷಕರು ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ವರ್ಷ ಇವರಿಬ್ಬರ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿರುವ ತಮನ್ನಾ ಮದುವೆಯ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ಹೊರಗುಳಿಯುವ ಅನುಮಾನ ಮೂಡಿಸಿದ್ದಾರೆ.

ಇದನ್ನೂ ಓದಿ-ಪಂಚಭಾಷಾ ನಟ ಸುಮನ್ ಅಭಿನಯದ "ತ್ರಿಷ" ಚಿತ್ರಕ್ಕೆ ಮುಹೂರ್ತ

ಈ ಸಂದರ್ಶನದಲ್ಲಿ ಅವರು "ನಾನು ನಟಿಸಲು ಪ್ರಾರಂಭಿಸಿದಾಗ ಹತ್ತು ವರ್ಷ ಸಿನಿಮಾದಲ್ಲಿ ನಟಿಸಿದರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದೆ. ಹೇಗಾದರೂ ಮಾಡಿ 30ನೇ ವಯಸ್ಸಿನಲ್ಲಿ ಮದುವೆಯಾಗಿ ಮಗುವನ್ನು ಪಡೆಯುತ್ತೇನೆ ಎಂದು ಭಾವಿಸಿದ್ದೆ. ಆದರೆ ಈಗ 30 ವರ್ಷ ದಾಟಿದರೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ.

ಮದುವೆಗೆ ಕೆಲವು ಜವಾಬ್ದಾರಿಗಳು ಬೇಕಾಗುತ್ತವೆ. ನಾವು ಅದಕ್ಕೆ ಸಿದ್ಧರಾಗಿರಬೇಕು. ಹಾಗಾಗಿ ಯಾವಾಗ ನಾನು ಮದುವೆಗೆ ಸಿದ್ಧ ಎಂದು ಅನಿಸುತ್ತದೋ ಆಗ ಖಂಡಿತ ಮದುವೆಯಾಗುತ್ತೇನೆ ಎಂದಿದ್ದಾರೆ. ತಮನ್ನಾ ಈಗ ಮದುವೆಯಾಗುವ ಹುಮ್ಮಸ್ಸಿನಲ್ಲಿದ್ದಾರೆ, ಹಾಗಾಗಿ ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದು ಮಗು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News