'ಅತೃಪ್ತ ಶಾಸಕರು' ಹಿಂದಿರುಗಿ ಸರ್ಕಾರ ಉಳಿಸಿದರೆ ಎಚ್.ಡಿ. ರೇವಣ್ಣ ರಾಜೀನಾಮೆಗೆ ಪ್ರಯತ್ನಿಸುವೆ: ಜೆಡಿಎಸ್ ಶಾಸಕ

ರಾಜ್ಯ ರಾಜಕಾರಣದ ಈ ಸ್ಥಿತಿಗೆ ಎಚ್‌.ಡಿ. ರೇವಣ್ಣ ಅವರೇ ಕಾರಣ ಎಂದು ಭಾವಿಸಿ ಶಾಸಕರು ರಾಜೀನಾಮೆ ನೀಡಿದ್ದರೆ, ನಾವೆಲ್ಲಾ ವಾಪಸ್‌ ಬಂದು ಮೈತ್ರಿ ಸರ್ಕಾರಕ್ಕೆ ಬೆಂಬಲಿಸುತ್ತೇವೆ ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಲಿ, ನಾನೇ ಎಚ್.ಡಿ. ರೇವಣ್ಣ ಅವರ ರಾಜೀನಾಮೆಗೆ ಮನವೊಲಿಸುವೆ- ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ

Last Updated : Jul 16, 2019, 11:57 AM IST
'ಅತೃಪ್ತ ಶಾಸಕರು' ಹಿಂದಿರುಗಿ ಸರ್ಕಾರ ಉಳಿಸಿದರೆ ಎಚ್.ಡಿ. ರೇವಣ್ಣ ರಾಜೀನಾಮೆಗೆ ಪ್ರಯತ್ನಿಸುವೆ: ಜೆಡಿಎಸ್ ಶಾಸಕ title=

ಹೊಳೆನರಸೀಪುರ: 'ಅತೃಪ್ತ ಶಾಸಕರು' ಹಿಂದಿರುಗಿ ಬಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉಳಿಸಿದರೆ ಎಚ್.ಡಿ. ರೇವಣ್ಣ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಪ್ರಯತ್ನಿಸುವೇ ಎಂದು ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಹೇಳಿದ್ದಾರೆ.

ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ಎ.ಟಿ. ರಾಮಸ್ವಾಮಿ, ರಾಜ್ಯ ರಾಜಕಾರಣದ ಈ ಸ್ಥಿತಿಗೆ ಎಚ್‌.ಡಿ. ರೇವಣ್ಣ ಅವರೇ ಕಾರಣ ಎಂದು ಭಾವಿಸಿ ಶಾಸಕರು ರಾಜೀನಾಮೆ ನೀಡಿದ್ದರೆ, ನಾವೆಲ್ಲಾ ವಾಪಸ್‌ ಬಂದು ಮೈತ್ರಿ ಸರ್ಕಾರಕ್ಕೆ ಬೆಂಬಲಿಸುತ್ತೇವೆ ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಲಿ, ನಾನೇ ಎಚ್.ಡಿ. ರೇವಣ್ಣ ಅವರ ರಾಜೀನಾಮೆಗೆ ಮನವೊಲಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ನ್ಯೂನತೆಗಳಿರುವುದು ಸಹಜ. ಕೆಲಸ ಮಾಡುವ ಸಂದರ್ಭದಲ್ಲಿ ಕೆಲ ತಪ್ಪುಗಳೂ ಆಗಿರಬಹುದು. ಆದರೆ ಸರ್ಕಾರದ ಈ ಪರಿಸ್ಥಿತಿಗೆ ರೇವಣ್ಣ ಒಬ್ಬರೇ ಕಾರಣರಲ್ಲ. ಒಂದು ವೇಳೆ ಶಾಸಕರ ರಾಜೀನಾಮೆಗೆ ರೇವಣ್ಣ ಅವರೇ ಕಾರಣ ಎಂದು ಅತೃಪ್ತರು ಭಾವಿಸಿದ್ದರೆ, ರೇವಣ್ಣ ಅವರಿಂದ ರಾಜೀನಾಮೆ ಕೊಡಿಸಲು ನಾನೇ ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
 

Trending News