ಬೆಂಗಳೂರು: ಬಂಡಾಯ ಶಾಸಕರು ಮನವೊಲಿಸಲು ಕಳೆದ ವಾರ ಮುಂಬೈಗೆ ತೆರಳಿದ್ದ ಸಚಿವ ಡಿ.ಕೆ.ಶಿವಕುಮಾರ್ ಈಗ ತಮ್ಮ ಸಹೋದ್ಯೋಗಿಗಳು ಹಿಂತಿರುಗಿ ಸರ್ಕಾರವನ್ನು ಉಳಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.ಇದೇ ವೇಳೆ ಅವರು ವಿಶ್ವಾಸ ಮತದ ವಿರುದ್ಧವಾಗಿ ಮತ ಚಲಾಯಿಸುವುವರಿಗೆ ಎಚ್ಚರಿಕೆ ಮಾತನನ್ನು ಕೂಡ ರವಾನಿಸಿದ್ದಾರೆ.
DK Shivakumar,Congress:At the time of Confidence Motion, they're also well-equipped with law. Law is very clear. If they vote against Confidence Motion,they'll lose their membership. Congress party is ready to settle their demands. We're getting signals that they'll save our govt https://t.co/rE4Nv4e47V
— ANI (@ANI) July 14, 2019
"ನಮ್ಮ ಎಲ್ಲ ಶಾಸಕರ ಮೇಲೆ ನನಗೆ ವಿಶ್ವಾಸವಿದೆ. ಅವರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದಾರೆ ಮತ್ತು ಅವರು ಬಹಳ ಸಮಯದಿಂದ ಪಕ್ಷದಲ್ಲಿ ಇದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಹುಲಿಗಳಂತೆ ಹೋರಾಡಿದ್ದಾರೆ. ಕೆಲವು ಉತ್ತಮ ನಡತೆಗಳು ಮೇಲುಗೈ ಸಾಧಿಸುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಎಎನ್ಐ ಗೆ ಹೇಳಿದ್ದಾರೆ
"ವಿಶ್ವಾಸ ಮತದ ವಿರುದ್ಧ ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ಕಾನೂನು ಸ್ಪಷ್ಟವಾಗಿದೆ.ನಮ್ಮ ಶಾಸಕರು ಸಹ ಕಾನೂನನ್ನು ತಿಳಿದವರಾಗಿದ್ದಾರೆ. ಒಂದು ವೇಳೆ ವಿಶ್ವಾಸ ಮತದ ವಿರುದ್ಧ ಮತ ಚಲಾಯಿಸಿದರೆ ಅವರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಅವರು ಪಕ್ಷವನ್ನು ಬಿಳಿಸಲು ಎಂದು ಪ್ರಯತ್ನಿಸುವುದಿಲ್ಲ' ಎಂದು ಹೇಳಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಾರ್ಹ ಮತ ಚಲಾಯಿಸುವುದಾಗಿ ಘೋಷಿಸಿದ ನಂತರ ಮತ್ತು ಸಮಯವನ್ನು ನಿಗದಿಪಡಿಸುವಂತೆ ಸ್ಪೀಕರ್ ಅವರನ್ನು ಕೇಳಿದ ನಂತರ ಡಿಕೆ ಶಿವಕುಮಾರ್ ಅವರ ಅಭಿಪ್ರಾಯ ಹೊರಬಿದ್ದಿದೆ.