ನವದೆಹಲಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ 2019 ರ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಾಗ ನ್ಯೂಜಿಲೆಂಡ್ 46.1 ಓವರ್ಗಳಲ್ಲಿ 211-5 ಮೊತ್ತವನ್ನು ಗಳಿಸಿದೆ. ನ್ಯೂಜಿಲೆಂಡ್ ತಂಡ ಪರವಾಗಿ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಕ್ರಮವಾಗಿ 95 ಮತ್ತು 85 ಎಸೆತಗಳಲ್ಲಿ 67 ರನ್ ಗಳಿಸಿದ್ದಾರೆ.
ಒಂದು ವೇಳೆ ಇದೇ ಮುಂದುವರೆದಲ್ಲಿ ಆಗ ನ್ಯೂಜಿಲೆಂಡ್ ತಂಡವು ಮತ್ತೆ ಬ್ಯಾಟಿಂಗ್ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಒಂದು ವೇಳೆ ಅದು ಹಾಗಾದಲ್ಲಿ ಭಾರತ ತಂಡವು ಈ ಕೆಳಗಿನಂತೆ ರನ್ ಗಳನ್ನು ಗಳಿಸಬೇಕಾಗುತ್ತದೆ.
In case New Zealand doesn't bat again, India's target in
46 overs will be 237
40 overs will be 223
35 overs will be 209
30 overs will be 192
25 overs will be 172
20 overs will be 148#IndvNZ #NZvInd#CWC19 #CWC2019— Mohandas Menon (@mohanstatsman) July 9, 2019
46 ಓವರ್ 237 ರನ್
40 ಓವರ್ 223 ರನ್
35 ಓವರ್ 209 ರನ್
30 ಓವರ್ 192 ರನ್
25 ಓವರ್ 172 ರನ್
20 ಓವರ್ 148 ರನ್
ಭಾರತ ಒಂದು ವೇಳೆ ಬ್ಯಾಟಿಂಗ್ ಆರಂಭಿಸಿದಲ್ಲಿ ಈ ಮೇಲೆ ನಿಗದಿ ಪಡಿಸಿದ ಮೊತ್ತವನ್ನು ನಿಗದಿತ ಓವರ್ ಗಳಲ್ಲಿ ಗಳಿಸಬೇಕಾಗುತ್ತದೆ. ಇನ್ನೊಂದು ಒಳ್ಳೆಯ ಸುದ್ದಿ ಏನೆಂದರೆ, ಐಸಿಸಿ ಸೆಮಿಫೈನಲ್ ಮತ್ತು ಫೈನಲ್ಗಾಗಿ ಮೀಸಲು ದಿನವನ್ನು ಇಟ್ಟುಕೊಂಡಿದೆ, ಆದ್ದರಿಂದ ಮಂಗಳವಾರ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಪಂದ್ಯ ಎಲ್ಲಿಗೆ ಸ್ಥಗಿತವಾಗಿರುತ್ತದೆಯೋ ಅಲ್ಲಿಂದ ಪಂದ್ಯವನ್ನು ಮತ್ತೆ ಆರಂಭಿಸಲಾಗುತ್ತದೆ.ಹವಾಮಾನ ಇಲಾಖೆ ಬುಧವಾರ ಕೂಡ ಭಾರಿ ಮಳೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಳೆಯಿಂದಾಗಿ ಬುಧವಾರವೂ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಭಾರತವು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯುತ್ತದೆ ಏಕೆಂದರೆ ಲೀಗ್ ಹಂತದಲ್ಲಿ ಭಾರತವು ನ್ಯೂಜಿಲೆಂಡ್ (11) ಗಿಂತ ಹೆಚ್ಚಿನ ಅಂಕಗಳನ್ನು (15) ಹೊಂದಿದೆ.