Vijayadashami Pooja vidhana : ನಾಡ ಹಬ್ಬ ವಿಜಯದಶಮಿಯಂದು ಬನ್ನಿ ಮರವನ್ನು ಪೂಜಿಸುವುದು ಅನಾದಿ ಕಾಲದಿಂದಲೂ ಬಂದ ಸಂಪ್ರದಾಯ. ಬನ್ನಿ ಮರ ಎಂದು ಕರೆಯಲ್ಪಡುವ ಶಮೀ ವೃಕ್ಷವು ಪ್ರತಿ ದೇವಸ್ಥಾನದಲ್ಲಿ ಕಂಡುಬರುತ್ತದೆ. ಆದರೆ ಈ ಮರವನ್ನು ಪೂಜಿಸುವುದರ ಹಿಂದೆ ಹಲವು ಕಾರಣಗಳಿವೆ. ನಮ್ಮ ಪುರಾಣಗಳಲ್ಲಿಯೂ ಸಹ ಬನ್ನಿ ಮರದ ಉಲ್ಲೇಖ ಕಂಡು ಬರುತ್ತದೆ.. ಬನ್ನಿ ಮರದ ವಿಶೇಷತೆ ಏನು ಗೊತ್ತಾ? ಬನ್ನಿ ತಿಳಿದುಕೊಳ್ಳೋಣ.
ರುಗ್ವೇದ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಬನ್ನಿ ಮರದ ಉಲ್ಲೇಖವಿದೆ. ಅಂದು ಭಕ್ತರು ಸೇರಿ ಅಮೃತಕ್ಕಾಗಿ ಕ್ಷೀರ ಸಮುದ್ರ ಮಂಥನ ಮಾಡುತ್ತಿದ್ದಾಗ ಅನೇಕ ದೇವತಾ ವೃಕ್ಷಗಳು ಉದ್ಭವವಾದವು. ಅವುಗಳಲ್ಲಿ ಶಮಿ ವೃಕ್ಷವು ಒಂದಾಗಿದೆ. ಮೊದಲು ಈ ಮರವನ್ನು ಯಜ್ಞ ಯಾಗಾದಿಗಳಿಗೆ ಬೆಂಕಿಯನ್ನು ಉತ್ಪಾಧಿಸುವ ಸಾಧನವಾಗಿ ಬಳಸಲಾಗುತ್ತಿತ್ತು. ಆದ್ದರಿಂದ ಈ ಮರಕ್ಕೆ ಅರಣಿ ಎಂಬ ಇನ್ನೊಂದು ಹೆಸರಿದೆ. ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳಲು ಶ್ರೀರಾಮನ ಕಾಲದಿಂದಲೂ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ.
ಇದನ್ನೂ ಓದಿ:Navaratri Special: ನವರಾತ್ರಿಯಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು ಗೊತ್ತಾ?
ತ್ರೇತಾಯುಗದಲ್ಲಿ ಲಂಕಾವನ್ನು ಆಕ್ರಮಿಸುವ ಮೊದಲು, ಶ್ರೀರಾಮನು ಬನ್ನಿ ಮರವನ್ನು ಪೂಜಿಸುತ್ತಿದ್ದನು. ಆದ್ದರಿಂದಲೇ ರಾವಣನು ಎಲ್ಲಾ ರಾಕ್ಷಸರನ್ನು ಗೆಲ್ಲಲು ಸಾಧ್ಯವಾಯಿತು. ಹಾಗೆಯೇ ಮಹಾಭಾರತ ಕಾಲದಲ್ಲಿ, ವನವಾಸದ ಸಮಯದಲ್ಲಿ, ಪಾಂಡವರು ಶಮೀ ವೃಕ್ಷದ ಮೇಲೆ ತಮ್ಮ ಆಯುಧಗಳನ್ನು ಬಚ್ಚಿಟ್ಟಿದ್ದರು. ಅಲ್ಲದೆ, ಅವುಗಳನ್ನು ರಕ್ಷಿಸುವಂತೆ ಮರವನ್ನು ಪ್ರಾರ್ಥಿಸಿದ್ದರು.
ದುರ್ಯೋಧನನ ಸೈನ್ಯವು ಪಾಂಡವರನ್ನು ಮರೆಯಿಂದ ಹೊರಗೆ ತರಲು ಮಾಸ್ಯ ರಾಜ್ಯವನ್ನು ಕಪಟವಾಗಿ ಆಕ್ರಮಿಸುತ್ತದೆ. ಆಗ ಶಿಖಂಡಿ ವೇಷದಲ್ಲಿದ್ದ ಅರ್ಜುನ ಬನ್ನಿ ಮರವನ್ನು ಪೂಜಿಸಿ ಗಂಧವನ್ನು ಧರಿಸಿ ಯುದ್ಧಕ್ಕೆ ಹೋಗುತ್ತಾನೆ. ಹೀಗೆ ಅರ್ಜುನನು ಕೌರವರನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಇದು ವಿಜಯದಶಮಿಯ ದಿನದಂದು ಸಂಭವಿಸಿದ ಕಾರಣ, ಅಂದಿನಿಂದ ವಿಜಯದಶಮಿ ದಿನದಂದು ಶಮೀ ವೃಕ್ಷವನ್ನು ಪೂಜಿಸುವುದು ವಾಡಿಕೆಯಾಗಿದೆ.
ಇದನ್ನೂ ಓದಿ:ಈ ʼತ್ರಿನೇತ್ರ ಗಣೇಶʼನಿಗೆ ಪತ್ರ ಬರೆದ್ರೆ ನಿಮ್ಮ ಇಷ್ಟಾರ್ಥ ಸಿದ್ಧಿ, ಸಮಸ್ಯೆ ನಿವಾರಣೆ..! ಇಲ್ಲಿದೆ ʼವಿಳಾಸʼ
ಶಮೀ ಶಮಯತೇ ಪಾಪಂ ಶಮಿ ಶತ್ರು ವಿನಾಶಿನಿ
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯ ದರ್ಶನಮ್
ಈ ಸ್ಲೋಕವನ್ನು ಪಠಿಸಿ ಬನ್ನಿ ಮರದ ಸುತ್ತ ಪ್ರದಕ್ಷಿಣೆ ಮಾಡಿದ ನಂತರ ಆ ಮರದ ಎಲೆಗಳನ್ನು ತೆಗೆದುಕೊಂಡು ಮನೆ ಬೀರುವಿನಲ್ಲಿ ಇಡಲಾಗುತ್ತದೆ. ಅಲ್ಲದೆ ಈ ಮರವನ್ನು ಪೂಜಿಸುವುದರಿಂದ ಜೀವನದಲ್ಲಿ ಅನಾವಶ್ಯಕ ಅಡೆತಡೆಗಳು ದೂರವಾಗುತ್ತವೆ ಮತ್ತು ಯಶಸ್ಸು ಲಭಿಸುತ್ತದೆ ಎಂದು ನಂಬಲಾಗಿದೆ. ರೈತರು ತಮ್ಮ ಹೊಲಗಳನ್ನು ಹಸಿರಾಗಿಡಲು ಮತ್ತು ಜಾನುವಾರುಗಳು ಸುರಕ್ಷಿತವಾಗಿರಲು ವಿಜಯದಶಮಿಯಂದು ಜಮ್ಮಿ ಮರವನ್ನು ಪೂಜಿಸುತ್ತಾರೆ. ಈ ವಿಜಯದಶಮಿಯಂದು ನೀವು ಬನ್ನಿ ಮರವನ್ನು ಭಕ್ತಿಯಿಂದ ಪೂಜಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.