World Cup: ಟೀಮ್ ಇಂಡಿಯಾಗೆ ಶಾಕ್! ಗಾಯದಿಂದಾಗಿ ಈ ಆಟಗಾರ ಮುಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ

Hardik Pandya Injury: ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವಾಗ ಗಾಯಗೊಂಡಿದ್ದರು. ಪರಿಣಾಮವಾಗಿ ಅವರು ಬಾಂಗ್ಲಾದೇಶದ ವಿರುದ್ಧ ಪುಣೆಯಲ್ಲಿ ನಡೆದ ಮ್ಯಾಚ್ ಅನ್ನು ಮಿಸ್ ಮಾಡಿಕೊಳ್ಳಬೇಕಾಯಿತು. ಪಾಂಡ್ಯ ಇನ್ನೂ‌ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿಲ್ಲದೇ‌ ಇರುವುದರಿಂದ ಮುಂದಿನ‌ ಪಂದ್ಯಗಳಲ್ಲೂ ಮೈದಾನದ ಹೊರಗೆ ಕಳೆಯಬೇಕಾಗಬಹುದು.

Written by - Yashaswini V | Last Updated : Oct 20, 2023, 10:37 AM IST
  • ಈ‌ ಬಾರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದಂತೆ ನ್ಯೂಜಿಲೆಂಡ್‌ ತಂಡ ಕೂಡ ಬಲಿಷ್ಠ ತಂಡ ಎಂದು‌ ಹೇಳಲಾಗುತ್ತಿದೆ.
  • ನ್ಯೂಜಿಲೆಂಡ್ ಈ ಬಾರಿ ಕಪ್ ಗೆಲ್ಲುವ ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿದೆ.
  • ಇಂತಹ‌ ತಂಡದ ವಿರುದ್ಧ ಸೆಣೆಸಲು ಭಾರತದ 11ರ ಬಳಗ ಸಮರ್ಥವೇ ಆಗಿರಬೇಕು.
World Cup: ಟೀಮ್ ಇಂಡಿಯಾಗೆ ಶಾಕ್! ಗಾಯದಿಂದಾಗಿ ಈ ಆಟಗಾರ ಮುಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ  title=

Hardik Pandya Injury: ಪ್ರಸಕ್ತ ವಿಶ್ವಕಪ್ ಕ್ರಿಕೆಟ್ ಟೂರ್ನಿ (World Cup)ಯಲ್ಲಿ‌  ಟೀಮ್ ಇಂಡಿಯಾ (Team India) ಸಾಧನೆ ಉತ್ತಮವಾಗಿಯೇ‌ ಇದೆ. ಬಾಂಗ್ಲಾದೇಶ ವಿರುದ್ಧ ನಡೆದ ಹಿಂದಿನ ಪಂದ್ಯವನ್ನೂ ಸಮರ್ಥವಾಗಿ ಎದುರಿಸಿ ಅರ್ಹ ಜಯ ಸಾಧಿಸಿದೆ. ಆದರೂ ಗೆಲುವಿನ ಓಟವನ್ನು ಹೀಗೆ ಮುಂದುವರಿಸಲು ಭಾನುವಾರ ಧರ್ಮಶಾಲಾದಲ್ಲಿ ಬಲಿಷ್ಠ ನ್ಯೂಜಿಲೆಂಡ್‌ ತಂಡವನ್ನು  ಎದುರಿಸುವ ಬಗ್ಗೆ ತುಸು ಆತಂಕದಲ್ಲಿದೆ. ಕಾರಣ ಭಾರತದ ಭರವಸೆಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಮಾಡುವಾಗ ಗಾಯಗೊಂಡು ಈಗ ತಂಡಕ್ಕೆ ಅಲಭ್ಯವಾಗಿರುವುದು.

ಈ‌ ಬಾರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದಂತೆ ನ್ಯೂಜಿಲೆಂಡ್‌ ತಂಡ ಕೂಡ ಬಲಿಷ್ಠ ತಂಡ ಎಂದು‌ ಹೇಳಲಾಗುತ್ತಿದೆ. ನ್ಯೂಜಿಲೆಂಡ್ ಈ ಬಾರಿ ಕಪ್ ಗೆಲ್ಲುವ ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿದೆ. ಇಂತಹ‌ ತಂಡದ ವಿರುದ್ಧ ಸೆಣೆಸಲು ಭಾರತದ 11ರ ಬಳಗ ಸಮರ್ಥವೇ ಆಗಿರಬೇಕು. ಟೀಮ್ ಇಂಡಿಯಾ ಈಗ ಎಲ್ಲಾ ವಿಭಾಗಗಳಲ್ಲೂ ಫಿಟ್ ಅಂಡ್ ಫೈನ್ ಆಗಿದೆ. ಆದರೂ ಆಲ್‌ರೌಂಡರ್ ಅಗತ್ಯದ ಬಗ್ಗೆ ಮಾತ್ರ ಸ್ವಲ್ಪ ಯೋಚನೆ ಮಾಡಬೇಕಾಗಿದೆ. ಹಾಗಾಗಿಯೇ  ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಆತಂಕವಾಗಿ ಮಾರ್ಪಟ್ಟಿದೆ.

ಭಾರತದ ಭರವಸೆಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವಾಗ ಗಾಯಗೊಂಡಿದ್ದರು. ಆಟದ ಒಂಬತ್ತನೇ ಓವರ್‌ನಲ್ಲಿ ಲಿಟ್ಟನ್ ದಾಸ್ ಚೆಂಡನ್ನು ಬಲವಾಗಿ ಮತ್ತು ನೇರವಾಗಿ ಹೊಡೆದಾಗ ಹಾರ್ದಿಕ್ ಅವರ ಬಲ ಪಾದಕ್ಕೆ ಪೆಟ್ಟಾಯಿತು. ಆನಂತರ ‌ಅವರು ಮೈದಾನವನ್ನು ತೊರೆಯಲೇಬೇಕಾಯಿತು.‌ ಆಗ ವಿರಾಟ್ ಕೊಹ್ಲಿ ಓವರ್ ಪೂರ್ಣಗೊಳಿಸಿದರು.

ಇದನ್ನೂ ಓದಿ- IND vs BAN: ಶತಕ ಸಿಡಿಸಿ ಸಚಿನ್ ಅವರ ಮೂರು ದಾಖಲೆಗಳನ್ನು ಮುರಿದ ವಿರಾಟ್ ಕೊಹ್ಲಿ

ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶದ ವಿರುದ್ಧ ಪುಣೆಯಲ್ಲಿ ನಡೆದ ಮ್ಯಾಚ್ ವೇಳೆಗೂ ಗುಣಮುಖರಾಗಲಿಲ್ಲ. ಪುಣೆಯ ಪಂದ್ಯವನ್ನೂ ಅವರು ಮಿಸ್ ಮಾಡಿಕೊಳ್ಳಬೇಕಾಯಿತು. ಬಲ ಪಾದದಲ್ಲಿ ಬಲವಾಗಿ ಆಗಿರುವ ಪೆಟ್ಟು ಇನ್ನೂ‌ ಸುಧಾರಿಸಿಲ್ಲದ ಕಾರಣ ಮುಂದಿನ‌ ಪಂದ್ಯಗಳಲ್ಲೂ ಮೈದಾನದ ಹೊರಗೆ ಕಳೆಯಬೇಕಾಗಬಹುದು ಎನ್ನುವ ಪರಿಸ್ಥಿತಿ ಇದೆ. ಪುಣೆ ಪಂದ್ಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, 'ಹಾರ್ದಿಕ್ ಪಂಡ್ಯಾ ಅವರನ್ನು ಸ್ಕ್ಯಾನ್ ಮಾಡಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚು ಚಿಂತಿಸಬೇಕಾಗಿಲ್ಲ' ಎಂದು ಹೇಳಿದ್ದರು. 

ಅಂದು ಹಾರ್ದಿಕ್ ಪಾಂಡ್ಯ ಗಾಯ ಗುಣಮುಖವಾಗುವ ಬಗ್ಗೆ ಅಪಾರವಾದ ವಿಶ್ವಾಸ ವ್ಯಕ್ತಪಡಿಸಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ, 'ಹಾರ್ದಿಕ್ ಪಾಂಡ್ಯಗೆ ಸ್ವಲ್ಪ ನೋವಿದೆಯಷ್ಡೇ. ಚಿಂತೆ ಮಾಡಲು ನಿಜವಾಗಿಯೂ ಏನೂ ಇಲ್ಲ. ನಾಳೆ ಬೆಳಿಗ್ಗೆಯೇ ಅವರು ಹೇಗೆ ಚೇತರಿಸಿಕೊಂಡಿರುತ್ತಾರೆ ಎಂಬುದನ್ನು ನಾವು ನೋಡುತ್ತೇವೆ.‌ ಅದಾದ ಮೇಲೆ ಅವರನ್ನು ಹೇಗೆ ಮುಂದುವರೆಸಬೇಕೆಂದು ಯೋಜಿಸುತ್ತೇವೆ' ಎಂದು ಹೇಳಿದ್ದರು. ಆದರೆ ಈಗ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯ ಚಿಂತೆ ಕಾಡತೊಡಗಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಅವರ 48ನೇ ಏಕದಿನ ಶತಕದ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತ್ತು.  ಇದಾದ ಬಳಿಕ ಭಾರತ ತಂಡವೂ ಇನ್ನೂ 51 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿ ಗೆಲುವು ಸಾಧಿಸಿತ್ತು.

ಇದನ್ನೂ ಓದಿ- ಶುಬ್ಮನ್ ಗಿಲ್ ಸಿಡಿಸಿದ ಸಿಕ್ಸರ್‌ಗೆ ಸಂಭ್ರಮಿಸಿದ ಸಾರಾ ತೆಂಡೂಲ್ಕರ್..‌ ವಿಡಿಯೋ ವೈರಲ್‌

ಮುಂದೆ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಲಭ್ಯವಾಗದಿದ್ದರೆ ಅವರ ಸ್ಥಾನವನ್ನು ಯಾರಿಗೆ ಕೊಡಬೇಕು ಎಂಬುದು ಕ್ಯಾಪ್ಟನ್ ರೋಹಿತ್ ಶರ್ಮಾಗೆ ತಲೆಬಿಸಿಯಾಗಿದೆ.‌ ಅಭಿಮಾನಿಗಳಿಗೆ ಹಾರ್ದಿಕ್ ಪಾಂಡ್ಯ ಆಡುತ್ತಾರೋ ಅಥವಾ ಅವರ ಮತ್ಯಾರು ಕಣಕ್ಕಿಳಿಯುತ್ತಾರೋ ಎಂಬ ಕುತೂಹಲ ಮನೆಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News