Zodiac sign: ನಮ್ಮಲ್ಲಿ ಕೆಲವರನ್ನು ನೋಡಿರಬಹುದು… ಮುಂಭಾಗದಲ್ಲಿ ಸ್ನೇಹಿತರ ಅಥವಾ ಇತರರ ಯಶಸ್ಸನ್ನು ಸಂಭ್ರಮಿಸಿದರೂ, ಮನಸ್ಸಿನ ಒಳಗಡೆ ಅಸೂಯೆ, ಹೊಟ್ಟೆಕಿಚ್ಚು ಪಡುವುದನ್ನೂ ಮಾಡುತ್ತಿರುತ್ತಾರೆ. ಕೆಲವೇ ಕೆಲವಷ್ಟು ಜನರು ಮಾತ್ರ ಇತರರ ಸಂಭ್ರಮದಲ್ಲಿ ತಮ್ಮ ಖುಷಿಯನ್ನು ಕಾಣುತ್ತಾರೆ.
ಇದನ್ನೂ ಓದಿ: ಈ ಬಾರಿ ವಿಶ್ವಕಪ್ ಟ್ರೋಫಿ ಗೆಲ್ಲೋದು ಈ ತಂಡವೆಂದು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ
ಇಂದು ನಾವು ಈ ಲೇಖನದಲ್ಲಿ ಇತರರ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಟಾಪ್ 5 ರಾಶಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆದರೆ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಜ್ಯೋತಿಷ್ಯವು ವ್ಯಕ್ತಿಯ ವ್ಯಕ್ತಿತ್ವದ ಊಹೆ ಮಾಡುತ್ತಿದೆಯೇ ಹೊರತು ನಿಖರ ಸ್ವಭಾವದ ಬಗ್ಗೆ ಹೇಳಲಾಗುವುದಿಲ್ಲ.
ಮೇಷ ರಾಶಿ: ಮೇಷ ರಾಶಿ ಜನರು ಸ್ಪರ್ಧಾತ್ಮಕ ಮನೋಭಾವ ಹೊಂದಿರುವವರು. ಹೀಗಾಗಿ ಗೆಲುವೆಲ್ಲಾ ತಮ್ಮದೇ ಆಗಿರಬೇಕೆಂದು ಆಸೆಪಡುತ್ತಾರೆ. ಒಂದು ವೇಳೆ ಆ ಬೇಡಿಕೆ ಈಡೇರಿಲ್ಲ ಎಂದಾದರೆ ಇತರರ ಮೇಲೆ ಅಸೂಯೆ ಪಟ್ಟುಕೊಳ್ಳುತ್ತಾರೆ.
ಸಿಂಹ ರಾಶಿ: ಸಿಂಹ ರಾಶಿಯ ಜನರು ವರ್ಚಸ್ವಿ, ಆತ್ಮವಿಶ್ವಾಸಕ್ಕೆ ಹೆಸರುವಾಸಿ, ಆದರೆ ಈ ಜನರಿಗೆ ಬೇರೆಯವರು ಯಶಸ್ಸು ಪಡೆಯುವುದನ್ನು ನೋಡಲು ಆಗೋದಿಲ್ಲ. ಅಷ್ಟೇ ಅಲ್ಲದೆ, ಇವರ ಮುಂದೆ ಬೇರೆಯವರನ್ನು ಹೊಗಳಿದರೆ ಹೊಟ್ಟೆಕಿಚ್ಚು ಪಡುತ್ತಾರೆ.
ಇದನ್ನೂ ಓದಿ: Karwa Chauth 2023: ಕರ್ವಾ ಚೌತ್ನಲ್ಲಿ ಚಂದ್ರ ಮತ್ತು ಬೆಳ್ಳಿಯ ಪೂಜೆಗೆ ವಿಶೇಷ ಮಹತ್ವವಿದೆ
ವೃಶ್ಚಿಕ ರಾಶಿ: ಈ ರಾಶಿಯ ಕೆಲ ಜನರಿಗೆ ಇತರರ ಯಶಸ್ಸನ್ನು ಕಂಡಾಗ ಹೊಟ್ಟೆಕಿಚ್ಚಾಗುತ್ತದೆಯಂತೆ. ಇನ್ನು ಇವರು ಭಾವೋದ್ರಿಕ್ತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರಿಗೆ ಉನ್ನತ ಸ್ಥಾನದಲ್ಲಿರಬೇಕೆಂಬ ಆಸೆ ಹೆಚ್ಚಾಗಿರುತ್ತದೆ. ಆದರೆ ತಮಗೆ ಯಾವಾಗ ಯಶಸ್ಸು ಸಿಗುವುದಿಲ್ಲವೋ ಆಗ ಇತರರ ಬಗ್ಗೆ ಅಸೂಯೆ ಪಟ್ಟುಕೊಳ್ಳುತ್ತಾರೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.