Nobel Peace Prize 2023: ಈ ದೇಶದ ಜೈಲಿನಲ್ಲಿ ಸೆರೆಯಾಗಿರುವ ನರೆಗೀಸ್ ಮೊಹಮ್ಮದಿಗೆ 2023ರ ನೋಬೆಲ್ ಶಾಂತಿ ಪುರಸ್ಕಾರ

Nobel Peace Prize 2023: ನರ್ಗೀಸ್ ಮೊಹಮ್ಮದಿ ಮಹಿಳಾ ಸ್ವಾತಂತ್ರ್ಯ ಮತ್ತು ಅವರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಒಪ್ಪಿಕೊಂಡಿದೆ. ಅವರು 13 ಬಾರಿ ಸೆರೆವಾಸ ಅನುಭವಿಸಿದ್ದಾರೆ ಮತ್ತು ಇರಾನ್‌ನಲ್ಲಿ ಪ್ರಸ್ತುತ ಇನ್ನೂ ಜೈಲಿನಲ್ಲಿದ್ದಾರೆ. (World News In Kannada)  

Written by - Nitin Tabib | Last Updated : Oct 6, 2023, 04:11 PM IST
  • 1901 ರಲ್ಲಿ ಸ್ಥಾಪನೆಯಾದಾಗಿನಿಂದ, ನೊಬೆಲ್ ಶಾಂತಿ ಪ್ರಶಸ್ತಿಯನ್ನು 110 ವ್ಯಕ್ತಿಗಳು ಮತ್ತು 30 ಸಂಸ್ಥೆಗಳಿಗೆ ನೀಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
  • ಹಿಂದಿನ ವಿಜೇತರಲ್ಲಿ ಮಲಾಲಾ ಯೂಸುಫ್‌ಜಾಯ್ ಮತ್ತು ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಶಾಮಿಲಾಗಿದ್ದಾರೆ.
  • ಕೆಲವು ಸಂಸ್ಥೆಗಳು ಹಲವಾರು ಬಾರಿ ಪ್ರಶಸ್ತಿಯನ್ನು ಪಡೆದಿವೆ, ರೆಡ್‌ಕ್ರಾಸ್‌ನ ಅಂತರಾಷ್ಟ್ರೀಯ ಸಮಿತಿಯು ಪ್ರಶಸ್ತಿಯನ್ನು ಮೂರು ಬಾರಿ ಗೆದ್ದಿದೆ,
Nobel Peace Prize 2023: ಈ ದೇಶದ ಜೈಲಿನಲ್ಲಿ ಸೆರೆಯಾಗಿರುವ ನರೆಗೀಸ್ ಮೊಹಮ್ಮದಿಗೆ 2023ರ ನೋಬೆಲ್ ಶಾಂತಿ ಪುರಸ್ಕಾರ title=

Nobel Peace Prize 2023: ಇರಾನ್‌ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಿ ಜೈಲು ಪಾಲಾದ ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಲಾಗಿದೆ. ನಾರ್ವೇಯನ್ ನೊಬೆಲ್ ಸಮಿತಿಯ ಅಧ್ಯಕ್ಷ ಬೆರಿಟ್ ರೈಸ್-ಆಂಡರ್ಸನ್ ಅವರು ಶುಕ್ರವಾರ ಓಸ್ಲೋದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಿದ್ದಾರೆ. 51ರ ಹರೆಯದ ನರ್ಗಿಸ್ ಇರಾನ್‌ನಲ್ಲಿ ಇನ್ನೂ ಸೆರೆವಾಸದಲ್ಲಿದ್ದಾರೆ. ಅವರಿಗೆ 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಲಾಗಿದೆ. ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿದ ಆರೋಪದ ಮೇಲೆ ಇರಾನ್ ಅವರನ್ನು ಬಂಧಿಸಿದೆ.

ಮಾನವ ಹಕ್ಕುಗಳು ಮತ್ತು ಮಹಿಳಾ ಸ್ವಾತಂತ್ರ್ಯಕ್ಕಾಗಿ ಹೋರಾಟ
ಶುಕ್ರವಾರ, 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇರಾನ್‌ನಲ್ಲಿ ಮಹಿಳಾ ದಬ್ಬಾಳಿಕೆಯ ವಿರುದ್ಧ ಹೋರಾಡಲು ಮತ್ತು ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ಮಹಿಳೆ ನರ್ಗಿಸ್ ಮೊಹಮ್ಮದಿ ಅವರಿಗೆ ನೀಡಲಾಗಿದೆ. ಓಸ್ಲೋದಲ್ಲಿರುವ ನಾರ್ವೆಯನ್ ನೊಬೆಲ್ ಸಂಸ್ಥೆ ಈ ಘೋಷಣೆ ಮಾಡಿದೆ. ಈ ವರ್ಷದ ಶಾಂತಿ ಪ್ರಶಸ್ತಿಯು ಕಳೆದ ವರ್ಷ ಇರಾನ್‌ನ ಧಾರ್ಮಿಕ ಆಡಳಿತದ ಮಹಿಳೆಯರನ್ನು ಗುರಿಯಾಗಿಸುವ ತಾರತಮ್ಯ ಮತ್ತು ದಬ್ಬಾಳಿಕೆಯ ನೀತಿಗಳ ವಿರುದ್ಧ ಪ್ರದರ್ಶಿಸಿದ ಲಕ್ಷಾಂತರ ಜನರನ್ನು ಗೌರವಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ-Nobel Prize For Literature: ಜಾನ್ ಫಾಸ್ಸೆ ಅವರಿಗೆ ಈ ಬಾರಿಯ ನೋಬೆಲ್ ಸಾಹಿತ್ಯ ಪುರಸ್ಕಾರ

ಈ ಸ್ಪರ್ಧೆಯಲ್ಲಿ 350ಕ್ಕೂ ಹೆಚ್ಚು ಮಂದಿ 
ಈ ವರ್ಷ ನಾಮನಿರ್ದೇಶನಗೊಂಡವರ ಹೆಸರನ್ನು ಗೌಪ್ಯವಾಗಿಡಲಾಗಿದೆ ಎಂದು ಹೇಳಲಾಗಿದೆ, ಆದರೆ 350 ಕ್ಕೂ ಹೆಚ್ಚು ಜನರು ರೇಸ್‌ನಲ್ಲಿದ್ದರು ಎಂದೂ ಕೂಡ ಹೇಳಲಾಗಿದೆ. ಕಳೆದ ವರ್ಷ, ರಷ್ಯಾದ ಮಾನವ ಹಕ್ಕುಗಳ ಗುಂಪು ಸ್ಮಾರಕ, ಉಕ್ರೇನ್‌ನ ಸಿವಿಲ್ ಲಿಬರ್ಟೀಸ್ ಕೇಂದ್ರ ಮತ್ತು ಜೈಲು ಶಿಕ್ಷೆಗೆ ಒಳಗಾದ ಬೆಲರೂಸಿಯನ್ ಹಕ್ಕುಗಳ ವಕೀಲ ಅಲೆಸ್ ಬಿಲಿಯಾಟ್ಸ್ಕಿಗೆ ಜಂಟಿಯಾಗಿ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ಉಕ್ರೇನ್‌ನ ಮೇಲೆ ರಷ್ಯಾ ನಡೆಯುತ್ತಿರುವ ಆಕ್ರಮಣದ ಹಿನ್ನೆಲೆಯಲ್ಲಿ 'ಶಾಂತಿಯನ್ನು ಉತ್ತೇಜಿಸಲು'  ಈ ಪ್ರಶಸ್ತಿ ಎಂದು ಹೇಳಲಾಗಿತ್ತು.

ಇದನ್ನೂ ಓದಿ-ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್‌ಗೆ ವೈದ್ಯಕೀಯ ಶಾಸ್ತ್ರದ ನೋಬೆಲ್ ಪ್ರಶಸ್ತಿ!

ಇಲ್ಲಿಯವರೆಗೆ ವಿಜೇತರು - 110 ವ್ಯಕ್ತಿಗಳು, 30 ಸಂಸ್ಥೆಗಳು
1901 ರಲ್ಲಿ ಸ್ಥಾಪನೆಯಾದಾಗಿನಿಂದ, ನೊಬೆಲ್ ಶಾಂತಿ ಪ್ರಶಸ್ತಿಯನ್ನು 110 ವ್ಯಕ್ತಿಗಳು ಮತ್ತು 30 ಸಂಸ್ಥೆಗಳಿಗೆ ನೀಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.  ಹಿಂದಿನ ವಿಜೇತರಲ್ಲಿ ಮಲಾಲಾ ಯೂಸುಫ್‌ಜಾಯ್ ಮತ್ತು ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಶಾಮಿಲಾಗಿದ್ದಾರೆ. ಕೆಲವು ಸಂಸ್ಥೆಗಳು ಹಲವಾರು ಬಾರಿ ಪ್ರಶಸ್ತಿಯನ್ನು ಪಡೆದಿವೆ, ರೆಡ್‌ಕ್ರಾಸ್‌ನ ಅಂತರಾಷ್ಟ್ರೀಯ ಸಮಿತಿಯು ಪ್ರಶಸ್ತಿಯನ್ನು ಮೂರು ಬಾರಿ ಗೆದ್ದಿದೆ, ಆದರೆ ನಿರಾಶ್ರಿತರಿಗಾಗಿ ಸೇವೆ ಸಲ್ಲಿಸಿದ ವಿಶ್ವಸಂಸ್ಥೆಯ ಹೈ ಕಮಿಷನರ್ ಕಚೇರಿಯು ಎರಡು ಬಾರಿ ಪ್ರಶಸ್ತಿಯನ್ನು ಪಡೆದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News