ಬೆಂಗಳೂರು : ನಮ್ಮಲ್ಲಿ ಅನೇಕರು ತೂಕ ಇಳಿಸಿಕೊಳ್ಳಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಅದರಲ್ಲೂ ದೇಹದಲ್ಲಿ ಸಂಗ್ರಹವಾಗಿ ಕುಳಿತಿರುವ ಹಠಮಾರಿ ಬೊಜ್ಜು ಕರಗಿಸಲು ಜಿಮ್ಗೆ ಹೋಗಿ ಕಠಿಣ ವ್ಯಾಯಾಮ ಮಾಡುತ್ತಾರೆ. ಕೆಲವರು ಆಹಾರಗಳಲ್ಲಿ ನಿರ್ಬಂಧ ತಂದು ಕೊಳ್ಳುತ್ತಾರೆ. ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅನೇಕ ಜನರು ತಾವು ನಿರೀಕ್ಷಿಸಿದ ರಿಸಲ್ಟ್ ಪಡೆಯುವುದು ಸಾಧ್ಯವಾಗುವುದಿಲ್ಲ. ಇನ್ನು ಕೆಲವರದ್ದು ಗಂಟೆಗಟ್ಟಲೆ ವ್ಯಾಯಾಮ. ಆದರೆ ಆಹಾರ ಕ್ರಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಡುತ್ತಾರೆ. ಈ ರೀತಿಯ ಕ್ರಮ ಕೂಡಾ ಬಹಳ ತಪ್ಪು. ಆದ್ದರಿಂದ, ತೂಕ ಇಳಿಸಿಕೊಳ್ಳಬೇಕಾದರೆ ಮೊದಲು ನಾವು ಯಾವ ಆಹಾರ ಸೇವಿಸುತ್ತೇವೆ ಎನ್ನುವುದರ ಮೇಲೆ ಗಮನ ಹರಿಸುವುದು ಬಹಳ ಮುಖ್ಯ.
ನಾವು ಬೆಳಿಗ್ಗೆ ಸೇವಿಸುವ ಆಹಾರವು ತೂಕವನ್ನು ಕಳೆದುಕೊಳ್ಳುವ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳುವ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೊಟ್ಟೆ ತುಂಬಾ ಹೊತ್ತು ತುಂಬಿರುವ ಆಹಾರಗಳನ್ನು ಬೆಳಗ್ಗೆ ತಿನ್ನಬೇಕು.
ಇದನ್ನೂ ಓದಿ : Diabetes Control Tips: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ನಿಮ್ಮ ಡಯಟ್ನಲ್ಲಿರಲಿ ಈ 4 ಮಸಾಲೆಗಳು
ತೂಕ ನಷ್ಟಕ್ಕೆ ಚಿಯಾ ಬೀಜಗಳು:
ತೂಕ ನಷ್ಟಕ್ಕೆ ಉಪಹಾರಗಳ ಪಟ್ಟಿಯಲ್ಲಿ ಚಿಯಾ ಬೀಜಗಳು ಪ್ರಮುಖ ಪಾತ್ರವಹಿಸುತ್ತವೆ. ಚಿಯಾ ಬೀಜಗಳಲ್ಲಿರುವ ನಾರಿನಂಶವು ನಿಮ್ಮ ಹೊಟ್ಟೆಯನ್ನು ಹೆಚ್ಚು ಕಾಲ ತುಂಬಿಟ್ಟಿರುವಂತೆ ಮಾಡುತ್ತದೆ. ಚಿಯಾ ಬೀಜಗಳು ಕೆಲವೇ ದಿನಗಳಲ್ಲಿ ನಿಮ್ಮ ತೂಕವನ್ನು ನಿಯಂತ್ರಣಕ್ಕೆ ತರುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ತೂಕ ನಷ್ಟಕ್ಕೆ ಚಿಯಾ ಬೀಜಗಳು ಹೇಗೆ ಉಪಯುಕ್ತವಾಗಿವೆ ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ಕಾಣಬಹುದು.
ಚಿಯಾ ಬೀಜಗಳ ಪ್ರಯೋಜನಗಳು :
ಚಿಯಾ ಬೀಜಗಳು ಫೈಬರ್ ನಲ್ಲಿ ಸಮೃದ್ಧವಾಗಿವೆ. ನೀವು ಇದನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಸೇರಿಸಿದರೆ, ಬೇಗನೆ ತೂಕವನ್ನು ಕಳೆದುಕೊಳ್ಳಬಹುದು. ಚಿಯಾ ಬೀಜಗಳ ಸೇವನೆಯು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ರಕ್ತದಲ್ಲಿ ಗ್ಲೂಕೋಸ್ ಬಿಡುಗಡೆಯನ್ನು ಕೂಡಾ ನಿಧಾನವಾಗಿಸುತ್ತದೆ. ಚಿಯಾ ಬೀಜಗಳು ದೇಹದ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತವೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ತೂಕವನ್ನು ನಿಯಂತ್ರಿಸಲು ಇದು ತುಂಬಾ ಉಪಯುಕ್ತವಾಗಿದೆ.
ಇದನ್ನೂ ಓದಿ : ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ 7 ದಿನದಲ್ಲಿ ಹೊಟ್ಟೆಯ ಬೊಜ್ಜು ಕರಗಿ ತೂಕ ಇಳಿಯುತ್ತೆ!
ತೂಕವನ್ನು ಕಳೆದುಕೊಳ್ಳಲು ಚಿಯಾ ಬೀಜಗಳನ್ನು ಹೇಗೆ ಸೇವಿಸುವುದು? :
ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ಮೊದಲು 1 ಟೀಚಮಚ ಚಿಯಾ ಬೀಜಗಳನ್ನು 1 ಗ್ಲಾಸ್ ನೀರಿನಲ್ಲಿ ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಅಥವಾ ರಾತ್ರಿಯಿಡೀ ಈ ಬೀಜಗಳನ್ನು ಹಾಗೆಯೇ ಬಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಇದರೊಂದಿಗೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದ ತೂಕದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಬೇಕಾದರೆ ಈ ಪಾನೀಯಕ್ಕೆ ನಿಂಬೆ ಅಥವಾ ಜೇನುತುಪ್ಪವನ್ನು ಕೂಡಾ ಸೇರಿಸಬಹುದು. ಇದು ನಿಮಗೆ ಇನ್ನೂ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.
ತೂಕವನ್ನು ತ್ವರಿತವಾಗಿ ಕಳೆದುಕೊಳ್ಳುವಲ್ಲಿ ಚಿಯಾ ಬೀಜಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದರೆ ಈ ಬೀಜಗಳನ್ನು ಸೇವಿಸುವುದರೊಂದಿಗೆ ವ್ಯಾಯಾಮ, ವಾಕಿಂಗ್, ಇತರ ಆಹಾರ ಕ್ರಮದ ಬಗ್ಗೆಯೂ ಗಮನ ಹರಿಸಬೇಕು.
ಇದನ್ನೂ ಓದಿ : ನಿಜವಾಗಿಯೂ ನಿತ್ಯ ಕಪ್ಪು ಚಹಾ ಸೇವನೆ ಮಾಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತಾ!
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ