Stock Market: ಮಾರುಕಟ್ಟೆ ಕುಸಿತದ ನಡುವೆಯೂ ರಾಕೆಟ್‍ನಂತೆ ಏರಿಕೆ ಕಂಡ ಈ ಷೇರು, ಕಾರಣವೇನು ಗೊತ್ತಾ?

ಭಾರತೀಯ ಷೇರು ಮಾರುಕಟ್ಟೆ: NCC ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ವಿವಿಧ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. ಕಂಪನಿಯ ನಿರ್ಮಾಣ ಕಾರ್ಯಾಚರಣೆಗಳು ದೇಶದಾದ್ಯಂತ ಹರಡಿಕೊಂಡಿವೆ ಮತ್ತು ಕಟ್ಟಡ, ಸಾರಿಗೆ, ನೀರು ಮತ್ತು ಪರಿಸರ, ವಿದ್ಯುತ್ ಪ್ರಸರಣ ಮತ್ತು ವಿತರಣೆ, ನೀರಾವರಿ, ಗಣಿಗಾರಿಕೆ ಮತ್ತು ರೈಲ್ವೆ ಯೋಜನೆಗಳನ್ನು ಒಳಗೊಂಡಿದೆ.

Written by - Puttaraj K Alur | Last Updated : Oct 3, 2023, 10:53 PM IST
  • ಷೇರು ಮಾರುಕಟ್ಟೆ ಕುಸಿತದ ನಡುವೆಯೂ ಎನ್‌ಸಿಸಿ ಲಿಮಿಟೆಡ್‌ನ ಷೇರುಗಳಲ್ಲಿ ಏರಿಕೆ
  • ಕೇಂದ್ರ-ರಾಜ್ಯ ಸರ್ಕಾರಿ ಸಂಸ್ಥೆಗಳಿಂದ 4,205.94 ಕೋಟಿ ರೂ. ಮೌಲ್ಯದ 3 ಗುತ್ತಿಗೆ ಪಡೆದುಕೊಂಡಿರುವ ಕಂಪನಿ
  • ಮಂಗಳವಾರದ ವಹಿವಾಟಿ ಅಂತ್ಯಕ್ಕೆ ಶೇ. 3.77ರಷ್ಟು ಏರಿಕ ಕಂಡ ಎನ್‌ಸಿಸಿ ಲಿಮಿಟೆಡ್‌ನ ಷೇರು
Stock Market: ಮಾರುಕಟ್ಟೆ ಕುಸಿತದ ನಡುವೆಯೂ ರಾಕೆಟ್‍ನಂತೆ ಏರಿಕೆ ಕಂಡ ಈ ಷೇರು, ಕಾರಣವೇನು ಗೊತ್ತಾ? title=
NCC ಲಿಮಿಟೆಡ್ ಷೇರು

NCC Limited Share Price: ಷೇರು ಮಾರುಕಟ್ಟೆಯಲ್ಲಿ ನಿರಂತರ ಕುಸಿತದ ಹೊರತಾಗಿಯೂ ಮಂಗಳವಾರ ಎನ್‌ಸಿಸಿ ಲಿಮಿಟೆಡ್‌ನ ಷೇರುಗಳು ಏರಿಕೆ ಕಂಡಿದೆ. ಎನ್‌ಸಿಸಿ ಲಿಮಿಟೆಡ್ ಸೆಪ್ಟೆಂಬರ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಂದ 4,205.94 ಕೋಟಿ ರೂ. ಮೌಲ್ಯದ 3 ಗುತ್ತಿಗೆಗಳನ್ನು ಪಡೆದುಕೊಂಡಿದೆ. ಈ 3 ಒಪ್ಪಂದಗಳ ಪೈಕಿ 819.20 ಕೋಟಿ ರೂ.ಗಳ ಮೊತ್ತದ ಮೊದಲ ಒಪ್ಪಂದವು ಜಲ ವಿಭಾಗಕ್ಕೆ ಸಂಬಂಧಿಸಿದೆ ಎಂದು ಷೇರು ಮಾರುಕಟ್ಟೆಗೆ ನೀಡಿರುವ ಮಾಹಿತಿಯಲ್ಲಿ ಕಂಪನಿ ತಿಳಿಸಿದೆ. 173.19 ಕೋಟಿ ರೂ. ಮೌಲ್ಯದ 2ನೇ ಗುತ್ತಿಗೆ ಎಲೆಕ್ಟ್ರಿಕಲ್ ವಿಭಾಗಕ್ಕೆ ಮತ್ತು 3,213.55 ಕೋಟಿ ರೂ. ಮೌಲ್ಯದ 3ನೇ ಗುತ್ತಿಗೆ ಸಾರಿಗೆ ವಿಭಾಗಕ್ಕೆ ಸಂಬಂಧಿಸಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಿಂದ ಪಡೆದ ಗುತ್ತಿಗೆ

NCC ಲಿಮಿಟೆಡ್ ಪ್ರಕಾರ, ಈ ಗುತ್ತಿಗೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಿಂದ ಸ್ವೀಕರಿಸಲಾಗಿದೆ. ಇದರಲ್ಲಿ ಯಾವುದೇ ಆಂತರಿಕ ಒಪ್ಪಂದವಿಲ್ಲ. NCC ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ವಿವಿಧ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. ಕಂಪನಿಯ ನಿರ್ಮಾಣ ಕಾರ್ಯಾಚರಣೆಗಳು ದೇಶದಾದ್ಯಂತ ಹರಡಿಕೊಂಡಿವೆ ಮತ್ತು ಕಟ್ಟಡ, ಸಾರಿಗೆ, ನೀರು ಮತ್ತು ಪರಿಸರ, ವಿದ್ಯುತ್ ಪ್ರಸರಣ ಮತ್ತು ವಿತರಣೆ, ನೀರಾವರಿ, ಗಣಿಗಾರಿಕೆ ಮತ್ತು ರೈಲ್ವೆ ಯೋಜನೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಳೇ ಪಿಂಚಣಿ ಯೋಜನೆ ಮತ್ತು ಎನ್ ಪಿಎಸ್ ನಲ್ಲಿ ಯಾವುದು ಬೆಸ್ಟ್ ?

ಶೇ. 3.77ರಷ್ಟು ಏರಿಕೆ ಕಂಡ ಷೇರು

3 ಗುತ್ತಿಗೆ ಪಡೆದ ಸುದ್ದಿಯ ನಂತರ ಮಂಗಳವಾರ ಎನ್‍ಸಿಸಿ ಲಿಮಿಟೆಡ್ ಷೇರುಗಳಲ್ಲಿ ಶೇ. 3.77ರಷ್ಟು ಏರಿಕೆ ಕಂಡಿದೆ. ಪ್ರತಿ ಷೇರಿಗೆ 5.85 ರೂ. ಏರಿಕೆ ಕಂಡ ಈ ಷೇರು ದಿನ ವಹಿವಾಟಿನ ಅಂತ್ಯಕ್ಕೆ 160.90 ರೂ.ಗೆ ತಲುಪಿತ್ತು.  ಶುಕ್ರವಾರ(ಸೆ.29)155.10 ರೂ.ಗೆ ಮುಕ್ತಾಯಗೊಂಡಿದ್ದ ಈ ಷೇರಿನ ವಹಿವಾಟು, ಮಂಗಳವಾರದ ವಹಿವಾಟಿನ ಅವಧಿಯಲ್ಲಿ ಭರ್ಜರಿ ಏರಿಕೆ ಕಂಡಿತು. ಈ ಷೇರು ರೂ 161.40ರ ಗರಿಷ್ಠ ಮಟ್ಟ(52 Week High)ವನ್ನು ಮುಟ್ಟಿತು. ಈ ಅವಧಿಯಲ್ಲಿ ಅದು ಕನಿಷ್ಠ 155.60 ರೂ.ಗೆ ಇಳಿಕೆ ಕಂಡಿತ್ತು. ಎನ್‌ಸಿಸಿ ಲಿಮಿಟೆಡ್ ಷೇರುಗಳ 52 Week High 176.60 ರೂ. ಆಗಿದ್ದು, ಇದರ 52 ವಾರಗಳ ಕನಿಷ್ಠ ಮಟ್ಟವು 68.70 ರೂ. ಆಗಿದೆ.

ಮಂಗಳವಾರ ಬೆಳಗ್ಗೆಯಿಂದ ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಲ್ಲಿ ಕುಸಿತ ಕಂಡುಬಂದಿದೆ. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 65,828.41 ರೂ.ಗೆ ಕೊನೆಗೊಂಡರೆ, ಮಂಗಳವಾರ 316.32 ಅಂಕ(ಶೇ.0.48) ಕುಸಿತ ಕಾಣುವ ಮೂಲಕ 65,512.10ಗೆ ತಲುಪಿತು. ಅದೇ ರೀತಿ NIFTY 50 ಸೂಚ್ಯಂಕವು 109.50 ಅಂಕ(ಶೇ.0.56)ಗಳಷ್ಟು ಕುಸಿತ ಕಾಣುವ ಮೂಲಕ 19,528.80ಗೆ ತಲುಪಿತು.

ಇದನ್ನೂ ಓದಿ: ಸರ್ಕಾರಿ ನೌಕರರ ವೇತನದಲ್ಲಿ 44%ದಷ್ಟು ಹೆಚ್ಚಳ ? ಯಾವಾಗ ಸಿಗುವುದು ಅನುಮೋದನೆ ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News