Viral News: ಭಿಕ್ಷಾಟನೆಗಾಗಿ ವಿಮಾನದಲ್ಲಿ ಸೌದಿಗೆ ತೆರಳುತ್ತಿದ್ದ 16 ಪಾಕಿಸ್ತಾನಿ ಭಿಕ್ಷುಕರ ಬಂಧನ!

Pakistan beggars Arrested: ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿ ಭಿಕ್ಷುಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಈ ಭಿಕ್ಷುಕರೆಲ್ಲ ಯಾತ್ರಾರ್ಥಿಗಳ ಸೋಗಿನಲ್ಲಿ ಸೌದಿ ಅರೇಬಿಯಾಕ್ಕೆ ಹೋಗುತ್ತಿದ್ದರು.

Written by - Puttaraj K Alur | Last Updated : Oct 1, 2023, 10:05 PM IST
  • ಭಿಕ್ಷಾಟನೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುತ್ತಿದ್ದ 16 ಪಾಕಿಸ್ತಾನದ ಭಿಕ್ಷುಕರ ಬಂಧನ
  • ಯಾತ್ರಿಕರ ವೇಷದಲ್ಲಿದ್ದ ಪಾಕಿಸ್ತಾನದ ಭಿಕ್ಷುಕರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು
  • ಪಾಕಿಸ್ತಾನದ ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಭಿಕ್ಷುಕರನ್ನು ವಶಕ್ಕೆ ಪಡೆದ ಅಧಿಕಾರಿಗಳು
Viral News: ಭಿಕ್ಷಾಟನೆಗಾಗಿ ವಿಮಾನದಲ್ಲಿ ಸೌದಿಗೆ ತೆರಳುತ್ತಿದ್ದ 16 ಪಾಕಿಸ್ತಾನಿ ಭಿಕ್ಷುಕರ ಬಂಧನ! title=
16 ಪಾಕಿಸ್ತಾನದ ಭಿಕ್ಷುಕರ ಬಂಧನ!

ಪಾಕಿಸ್ಥಾನದ ಭಿಕ್ಷುಕರ ಬಂಧನ: ಬಡಪಾಯಿ ಪಾಕಿಸ್ಥಾನದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ಭಿಕ್ಷಾಟನೆಗಾಗಿ ವಿಮಾನದಲ್ಲಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಪಾಕಿಸ್ತಾನದ ಭಿಕ್ಷುಕರನ್ನು ಬಂಧಿಸಲಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಪಾಕ್  ಭಿಕ್ಷುಕರು ಸಿಕ್ಕಿಬಿದ್ದಿದ್ದಾರೆ. ಯಾತ್ರಾರ್ಥಿಗಳ ವೇಷದಲ್ಲಿ ಸೌದಿ ಅರೇಬಿಯಾವನ್ನು ತಲುಪಲು ಅವರು ಬಯಸಿದ್ದರು. ಅವರೆಲ್ಲರನ್ನೂ ಗುರುತಿಸಿ ವಿಮಾನದಿಂದ ಕೆಳಗಿಳಿಸಲಾಗಿದೆ. ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (FIA) 2 ದಿನಗಳ ಹಿಂದೆ ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಈ ಕ್ರಮ ಕೈಗೊಂಡಿದೆ.

ಈ ಎಲ್ಲಾ ಪಾಕಿಸ್ತಾನಿ ಭಿಕ್ಷುಕರು ಸೌದಿ ಅರೇಬಿಯಾಕ್ಕೆ ತೆರಳಲು ವಿಮಾನದಲ್ಲಿ ಉಮ್ರಾ ಯಾತ್ರಿಕರ ವೇಷ ಧರಿಸಿದ್ದರು. ಎಫ್‌ಐಎ ಪ್ರಕಾರ, ಉಮ್ರಾ ವೀಸಾದಲ್ಲಿ ಪ್ರಯಾಣಿಸುತ್ತಿದ್ದ ಒಂದು ಮಗು, 11 ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ 16 ಜನರನ್ನು ಬಂಧಿಸಲಾಗಿದೆ. ವಲಸೆ ಪ್ರಕ್ರಿಯೆಯಲ್ಲಿ ಎಫ್‌ಐಎ ಅಧಿಕಾರಿಗಳು ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಅವರು ಸೌದಿಗೆ ಭಿಕ್ಷೆ ಬೇಡಲು ಹೋಗುತ್ತಿದ್ದೇವೆ ಎಂದು ಒಪ್ಪಿಕೊಂಡರು.

ಇದನ್ನೂ ಓದಿ: ಭಾರತೀಯ ಸೈನಿಕರ ಈ ಹೆಜ್ಜೆಯಿಂದ ವಿಶ್ವದಲ್ಲಿ ಭಾರತದ ಘನತೆ ಹೆಚ್ಚಿದೆ: ಸೇನಾ ಮುಖ್ಯಸ್ಥ ಮನೋಜ್ ಪಾಂಡೆ

ಭಿಕ್ಷಾಟನೆಯಿಂದ ಬರುವ ಆದಾಯದ ಅರ್ಧದಷ್ಟು ಹಣವನ್ನು ತಮಗೆ ಪ್ರಯಾಣದ ವ್ಯವಸ್ಥೆ ಮಾಡಿರುವ ಏಜೆಂಟರಿಗೆ ನೀಡಬೇಕೆಂಬ ಒಪ್ಪಂದವಾಗಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಉಮ್ರಾ ವೀಸಾ ಅವಧಿ ಮುಗಿದ ನಂತರ ಈ ಭಿಕ್ಷುಕರು ಪಾಕಿಸ್ತಾನಕ್ಕೆ ಮರಳಬೇಕಾಗಿತ್ತು. FIA ಮುಲ್ತಾನ್ ಸರ್ಕಲ್ ಪ್ರಯಾಣಿಕರನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತು ಕಾನೂನು ಕ್ರಮಕ್ಕಾಗಿ ಬಂಧಿಸಿದೆ.

ಸಾಗರೋತ್ತರ ಪಾಕಿಸ್ತಾನಿಗಳ ಸಚಿವಾಲಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸಾಗರೋತ್ತರ ಪಾಕಿಸ್ತಾನಿಗಳ ಮೇಲಿನ ಸೆನೆಟ್ ಸಮಿತಿಗೆ ಭಿಕ್ಷುಕರಲ್ಲಿ ಗಮನಾರ್ಹ ಭಾಗವು ಅಕ್ರಮ ಮಾರ್ಗಗಳ ಮೂಲಕ ವಿದೇಶಕ್ಕೆ ಸಾಗಾಣಿಕೆಯಾಗುತ್ತಿದೆ ಎಂದು ಬಹಿರಂಗಪಡಿಸಿದ ಒಂದು ದಿನದ ನಂತರ ಈ ಬಂಧನ ನಡೆದಿದೆ. ವಿದೇಶದಲ್ಲಿ ಸಿಕ್ಕಿಬಿದ್ದಿರುವ ಶೇ.90 ಭಿಕ್ಷುಕರು ಪಾಕಿಸ್ತಾನದವರಾಗಿದ್ದಾರೆ ಎಂದು ಸಚಿವಾಲಯದ ಕಾರ್ಯದರ್ಶಿ ಸೆನೆಟ್ ಸಮಿತಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Akash air : ಬಾಂಬ್‌ ಬೆದರಿಕೆಯಿಂದಾಗಿ ವಾರಣಾಸಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ

‘ಪಾಕಿಸ್ತಾನಿ ಭಿಕ್ಷುಕರ ಬಂಧನದಿಂದಾಗಿ ಇರಾಕ್ ಮತ್ತು ಸೌದಿ ಅರೇಬಿಯಾದ ಜೈಲುಗಳು ತುಂಬಿ ಹೋಗಿವೆ’ ಎಂದು ಅಲ್ಲಿನ ರಾಯಭಾರಿಗಳು ತಿಳಿಸಿದ್ದಾರೆ. ಮುಸ್ಲಿಂ ರಾಷ್ಟ್ರಗಳಲ್ಲಿ 90 ಪ್ರತಿಶತದಷ್ಟು ಭಿಕ್ಷುಕರು ಪಾಕಿಸ್ತಾನದಿಂದ ಬಂದವರು. ಸೌದಿ ಅರೇಬಿಯಾ ಮತ್ತು ಇತರ ದೇಶಗಳು ಈ ವಿಷಯದ ಬಗ್ಗೆ ಪಾಕಿಸ್ತಾನಕ್ಕೆ ಸೂಚನೆಗಳನ್ನು ನೀಡಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News