Lucky Animals: ಈ ಸಾಕುಪ್ರಾಣಿಗಳು ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತವೆ..!

Lucky Animals for wealth and prosperity: ಮನೆಯಲ್ಲಿ ಕೆಲವು ಪ್ರಾಣಿಗಳನ್ನು ಸಾಕುವುದು ಖಂಡಿತವಾಗಿಯೂ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ​

ಅದೃಷ್ಟದ ಪ್ರಾಣಿಗಳು: ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕುವ ಆಸಕ್ತಿ ಜನರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹವ್ಯಾಸದ ಜೊತೆಗೆ ಇದಕ್ಕೆ ಜ್ಯೋತಿಷ್ಯದ ಮಹತ್ವವೂ ಇದೆ ಎನ್ನಲಾಗಿದೆ. ಮನೆಯಲ್ಲಿ ಕೆಲವು ಪ್ರಾಣಿಗಳನ್ನು ಸಾಕುವುದು ಖಂಡಿತವಾಗಿಯೂ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ವ್ಯಕ್ತಿಯು ಸಂಪತ್ತನ್ನು ಪಡೆಯುತ್ತಾನೆ. ವಾಸ್ತು ಶಾಸ್ತ್ರದಲ್ಲಿ ಈ ಪ್ರಾಣಿಗಳನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಭವಿಷ್ಯವನ್ನು ಸಹ ಬದಲಾಯಿಸಬಹುದು. ವಾಸ್ತವವಾಗಿ ಈ ಪ್ರಾಣಿಗಳಲ್ಲಿ ವಿವಿಧ ದೇವ-ದೇವತೆಗಳು ವಾಸಿಸುತ್ತಾರೆಂಬ ನಂಬಿಕೆಯಿದೆ. ಆ ದೇವರು ವ್ಯಕ್ತಿಯ ಭವಿಷ್ಯವನ್ನೇ ಬದಲಾಯಿಸುತ್ತವಂತೆ. ಈ ಪ್ರಾಣಿಗಳನ್ನು ಇಷ್ಟವಿದ್ದರೆ ಸಾಕಬಹುದು, ಇಲ್ಲದಿದ್ರೆ ಅವುಗಳ ಚಿತ್ರಗಳನ್ನಾದರೂ ಮನೆಯಲ್ಲಿ ಹಾಕಬಹುದು. ಈ ಪ್ರಾಣಿಗಳನ್ನು ಸಾಕುವುದರಿಂದ ವ್ಯಕ್ತಿಯ ಅದೃಷ್ಟವು ಹೆಚ್ಚಾಗುತ್ತಿದ್ದರೆ, ಅವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಪ್ರಾಣಿಗಳ ಬಗ್ಗೆ ತಿಳಿಯಿರಿ.

2 /5

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೊಲವನ್ನು ಸಾಕುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮೊಲವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಮೂಲಕ ಧನಾತ್ಮಕ ಶಕ್ತಿಯನ್ನು ಹರಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಮೊಲವು ಕುಟುಂಬ ಸದಸ್ಯರನ್ನು ಒಟ್ಟಿಗಿರುವಂತೆ ಮಾಡುತ್ತದೆ. ಇದು ಕುಟುಂಬ ಸದಸ್ಯರ ನಡುವೆ ಪ್ರೀತಿ ಉಳಿಯಲು ಕಾರಣವಾಗಿದೆ.

3 /5

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಮೀನು ಇಡುವುದು ಒಳ್ಳೆಯದು. ವಾಸ್ತವವಾಗಿ ಮೀನು ವಿಷ್ಣುವಿನ ಮತ್ಸ್ಯ ಅವತಾರದೊಂದಿಗೆ ಸಂಬಂಧಿಸಿದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಮೀನು ಸಾಕಣೆ ಇಡೀ ಪರಿಸರಕ್ಕೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಅಷ್ಟೇ ಅಲ್ಲ ಮನೆಯಲ್ಲಿ ಮೀನು ಇದ್ದರೆ ಅದು ಎಲ್ಲಾ ತೊಂದರೆಗಳನ್ನು ತನ್ನ ಮೇಲೆ ತೆಗೆದುಕೊಳ್ಳುತ್ತದಂತೆ. ಆದ್ದರಿಂದ ಮನೆಯಲ್ಲಿ ಕಪ್ಪು ಮತ್ತು ಚಿನ್ನದ ಮೀನುಗಳನ್ನು ಇಡುವುದು ಮುಖ್ಯವಾಗಿದೆ.

4 /5

ಮನೆಯಲ್ಲಿ ಆಮೆಯನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜೀವಂತ ಆಮೆ ಬದಲು ನೀವು ಹಿತ್ತಾಳೆಯ ಆಮೆಯನ್ನೂ ಸಹ ಮನೆಯಲ್ಲಿ ಇಡುವುದು ಒಳ್ಳೆಯದು. ವಾಸ್ತವವಾಗಿ ಆಮೆ ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಸಂಬಂಧಿಸಿದೆ. ಅಷ್ಟೇ ಅಲ್ಲ ಆಮೆಯು ಯಾವುದೇ ಒಬ್ಬ ವ್ಯಕ್ತಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲು ಸಹಾಯ ಮಾಡುತ್ತದೆ.

5 /5

ಕುದುರೆಯನ್ನು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಮನೆಯಲ್ಲಿ ಕುದುರೆಯ ಚಿತ್ರವನ್ನು ಸಹ ಹಾಕಬಹುದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕುದುರೆಯ ಪ್ರತಿಮೆ ಅಥವಾ ಚಿತ್ರವನ್ನು ಇರಿಸುವ ಮೂಲಕ ಗುರಿಯನ್ನು ಸಾಧಿಸಲಾಗುತ್ತದೆ.