ನಟಿ ಸಾಯಿ ಪಲ್ಲವಿ ಗುಟ್ಟಾಗಿ ಮದುವೆಯಾದ್ರಾ..? ವೈರಲ್ ಫೋಟೋದ ಸತ್ಯ ಇಲ್ಲಿದೆ

Sai Pallavi marriage photos : ನಟಿ ಸಾಯಿ ಪಲ್ಲವಿ ತಮಿಳು ಚಲನಚಿತ್ರ ನಿರ್ಮಾಪಕರೊಂದಿಗೆ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ಕುರಿತು ಫೋಟೋ ಒಂದು ವೈರಲ್‌ ಆಗಿದೆ. ಈ ವೈರಲ್‌ ಚಿತ್ರದ ಹಿಂದಿರುವ ಸತ್ಯದ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ..

Written by - Krishna N K | Last Updated : Sep 21, 2023, 01:45 PM IST
  • ನಟಿ ಸಾಯಿ ಪಲ್ಲವಿ ಮದುವೆ ಫೋಟೋಸ್‌ ವೈರಲ್‌
  • ನಿರ್ದೇಶಕ ರಾಜಕುಮಾರ ಜೊತೆಗಿರುವ ಫೋಟೋ
  • ಗುಟ್ಟಾಗಿ ಮದುವೆಯಾದ್ರಾ ರಾಜಕುಮಾರ-ಸಾಯಿಪಲ್ಲವಿ
ನಟಿ ಸಾಯಿ ಪಲ್ಲವಿ ಗುಟ್ಟಾಗಿ ಮದುವೆಯಾದ್ರಾ..? ವೈರಲ್ ಫೋಟೋದ ಸತ್ಯ ಇಲ್ಲಿದೆ title=

Sai Pallavi : ತಮಿಳು, ತೆಲುಗು, ಮಲಯಾಳಂ ಹಾಗೂ ಇತರೆ ಭಾಷೆಯ ಚಿತ್ರಗಳಲ್ಲಿ ವಿಶೇಷ ಸ್ಥಾನ ಗಳಿಸಿರುವ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಅದರಲ್ಲೂ ತಮಿಳುನಾಡಿನಲ್ಲಿ ಈ ನಟಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಡ್ಯಾನ್ಸ್‌ ರಿಯಾಲಿಟಿ ಶೋ ಮೂಲಕ ಕಿರುತೆಯಲ್ಲಿ ಮಿಂಚಿ, ಇದೀಗ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡುತ್ತಿದ್ದಾರೆ. ಸಧ್ಯ ಸಾಯಿ ಪಲ್ಲವಿ ಮದುವೆಗೆ ಸಂಬಂಧಿಸಿದ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ನಟಿ ಸಾಯಿ ಪಲ್ಲವಿ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಜನಿಸಿದರು, ಕೊಯಮತ್ತೂರಿನಲ್ಲಿ ಬೆಳೆದರು. ಜಾರ್ಜಿಯಾದಿಂದ ವೈದ್ಯಕೀಯದಲ್ಲಿ ಪದವಿ ಪಡೆದಿದ್ದಾರೆ. ಆದರೆ ತಾಯಿಗೆ ನೃತ್ಯದ ಮೇಲಿನ ಆಸಕ್ತಿಯಿಂದ ವೈದ್ಯೆಯಾಗಿ ಕೆಲಸ ಮಾಡದೆ ಟಿವಿ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಇದನ್ನೂ ಓದಿ:ರಣಬೀರ್‌ ಕಪೂರ್‌ ನಟನೆಯ ʼಅನಿಮಲ್‌ʼ ಚಿತ್ರದ ಟೀಸರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್‌

ಸಾಯಿ ಪಲ್ಲವಿ 2015ರ ಮಲಯಾಳಂ ಬ್ಲಾಕ್ಬಸ್ಟರ್ ʼಪ್ರೇಮಂʼ ಸಿನಿಮಾದ ಮೂಲಕ ಖ್ಯಾತಿ ಪಡೆದರು. ಪ್ರೇಮಂನಲ್ಲಿ ಮಲರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ತಮಿಳುನಾಡಿನಲ್ಲಿ 200 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡು, ದಾಖಲೆ ನಿರ್ಮಿಸಿತ್ತು. ಅನೇಕ ಜನರು ಸಾಯಿ ಪಲ್ಲವಿಯನ್ನು ಮಲರ್ ಟೀಚರ್ ಎಂದೇ ಕರೆಯಲು ಪ್ರಾರಂಭಿಸಿದರು. 

ನಂತರ ಅವರು 2016 ರ ʼಕಲಿʼ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದರು. 2017 ರಲ್ಲಿ ವರುಣ್ ತೇಜ್‌ ನಟನೆಯ ರೊಮ್ಯಾಂಟಿಕ್ ಚಿತ್ರ ʼಫಿದಾʼ ಮೂಲಕ ತೆಲುಗು ಸಿನಿರಂಗಕ್ಕೆ ಪಲ್ಲವಿ ಪಾದಾರ್ಪಣೆ ಮಾಡಿದರು. ಇದುವರೆಗೆ 15 ಚಿತ್ರಗಳಲ್ಲಿ ನಟಿಸಿರುವ ಸಾಯಿ ಪಲ್ಲವಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ ನಟಿಯರಲ್ಲಿ ಒಬ್ಬರು.

ಇದನ್ನೂ ಓದಿ: ಗೌರಿ ಗಣೇಶ ಹಬ್ಬಕ್ಕೆ 'ಕೆಂದಾವರೆ' ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್..!

ಈ ಮಧ್ಯೆ ನಟಿ ಸಾಯಿ ಪಲ್ಲವಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ, ಈ ಕುರಿತ ಫೋಟೋ ಒಂದು ವೈರಲ್‌ ಆಗಿದೆ. ನೆಟ್ಟಿಗರು ಸಾಯಿ ಪಲ್ಲವಿ ಮದುವೆಯಾಗಿದ್ದಾರೆ ಅಂತ ವದಂತಿ ಹಬ್ಬಿಸುತ್ತಿದ್ದಾರೆ. ಆದ್ರೆ ಇದು ಶುದ್ಧ ಸುಳ್ಳು, ವೈರಲ್‌ ಆಗಿರುವ ಫೋಟೋ ನಟ ಶಿವಕಾರ್ತಿಕೇಯನ್‌ ಮುಂಬರುವ ಸಿನಿಮಾ SK21 ಚಿತ್ರದ ಮುಹೂರ್ತ ಸಮಯದಲ್ಲಿ ತೆಗೆಯಲಾದ ಫೋಟೋ ಎಂದು ತಿಳಿದು ಬಂದಿದೆ.

ಪ್ರಸ್ತುತ ಶಿವಕಾರ್ತಿಕೇಯನ್ ಅಭಿನಯದ SK21 ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಟ ಕಮಲ್ ಹಾಸನ್ ನಿರ್ಮಿಸಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ. ಇದಲ್ಲದೆ, ಅವರು ಗೀತಾ ಆರ್ಟ್ಸ್ ಅಡಿಯಲ್ಲಿ ಅಲ್ಲು ಅರವಿಂದ್ ನಿರ್ಮಿಸುತ್ತಿರುವ ಸಂಧು ಮೊಂಡೆಡಿ ನಿರ್ದೇಶನದ ನಾಗ ಚೈತನ್ಯ ನಟಿಸಿರುವ NC23 ಸಿನಿಮಾದಲ್ಲಿ ನಟಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News