ನವದೆಹಲಿ: ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ಮಾರಕ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್ ಶ್ರೀಲಂಕಾ ಕೇವಲ 50 ರನ್‍ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ. ಟೀಂ ಇಂಡಿಯಾದ ಬೆಂಕಿ ಬೌಲಿಂಗ್‍ಗೆ ರನ್ ಗಳಿಸಲು ಪರದಾಡಿದ ಲಂಕಾ ಕೇವಲ 15.2 ಓವರ್‌ಗಳಲ್ಲಿ 50 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿದೆ.
ಲಂಕಾಗೆ ಜಸ್ಪ್ರೀತ್ ಬೂಮ್ರಾ ಆರಂಭಿಕ ಆಘಾತ ನೀಡಿದ್ರೆ, ಮೊಹಮ್ಮದ್ ಸಿರಾಜ್ ಲಂಕಾ ತಂಡದ ಬ್ಯಾಟಿಂಗ್‍ನ ಬೆನ್ನುಮೂಳೆಯನ್ನೇ ಮುರಿದರು. ತಮ್ಮ 4ನೇ ಓವರ್ನಲ್ಲಿ ಸಿರಾಜ್ ಬರೊಬ್ಬರಿ 4 ವಿಕೆಟ್ ಕಬಳಿಸುವ ಮೂಲಕ ಲಂಕಾ ತಂಡಕ್ಕೆ ದೊಡ್ಡ ಆಘಾತ ನೀಡಿದರು. ಸಿರಾಜ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಶ್ರೀಲಂಕಾ ಚೇತರಿಸಿಕೊಳ್ಳಲು ಸಾಧ್ಯವಾಗದೆ ಅಲ್ಪಮೊತ್ತಕ್ಕೆ ಕುಸಿತ ಕಂಡಿತು. ಮೊದಲ ಓವರ್‍ನ 2ನೇ ಎಸೆತದಲ್ಲಿಯೇ ಕುಸಾಲ್ ಪೆರೆರಾ ವಿಕೆಟ್ ಪಡೆಯುವ ಮೂಲಕ ಬೂಮ್ರಾ ಲಂಕಾಗೆ ಆಘಾತ ನೀಡಿದರು. ಪಂದ್ಯದ 4ನೇ ಓವರ್ನಲ್ಲಿ ಸಿರಾಜ್ ಲಂಕಾ ಬ್ಯಾಟ್ಸ್‍ಮನ್‍ಗಳನ್ನು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಹಾದಿ ಹಿಡಿಸಿದರು.
ಇದನ್ನೂ ಓದಿ: ಇಂದು ಏಷ್ಯಾಕಪ್ 2023ರ ಕೊನೆಯ ಪಂದ್ಯ
ಒಂದೇ ಓವರ್‌ನಲ್ಲಿ ಲಂಕಾ ತಂಡದ ನಾಲ್ವರು ಆಟಗಾರರ ಬಲಿ ಪಡೆಯುವ ಮೂಲಕ ಸಿರಾಜ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ಪರ ಕುಸಾಲ್ ಮೆಂಡಿಸ್(17) ಮತ್ತು ದುಶನ್ ಹೇಮಂತ (13) ಮಾತ್ರ ಎರಡಂಕಿ ದಾಟಿದರು. ಇನ್ನುಳಿದ ಆಟಗಾರರು ಭಾರತದ ಬೌಲಿಂಗ್ ದಾಳಿಗೆ ಸಿಲುಕಿ ತರಗಲೆಯಂತೆ ವಿಕೆಟ್ ಒಪ್ಪಿಸಿದರು. ಪರಿಣಾಮ ಶ್ರೀಲಂಕಾ 15.2 ಓವರ್‍ಗಳಲ್ಲಿ ಕೇವಲ 50 ರನ್‍ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
Hardik Pandya wraps up the innings with the final two wickets! 👏👏
Sri Lanka are all out for 50 in the first innings.
Scorecard ▶️ https://t.co/xrKl5d85dN#TeamIndia | #INDvSL | @hardikpandya7 pic.twitter.com/BBNXmebIel
— BCCI (@BCCI) September 17, 2023
ಭಾರತ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್ 1 ಮೆಡಿನ್ ಸಹಿತ 7 ಓವರ್ ಬೌಲಿಂಗ್ ಮಾಡಿದ್ದು, 21 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 2.2 ಓವರ್‍ಗಳಿಗೆ 3 ರನ್ ನೀಡಿ 3 ವಿಕೆಟ್ ಪಡೆದರು. ಜಸ್ಪ್ರೀತ್ ಬೂಮ್ರಾ 1 ಮೆಡಿನ್ ಸಹಿತ ಓವರ್ ಬೌಲಿಂಗ್ ಮಾಡಿ 23 ರನ್ ನೀಡಿ 1 ವಿಕೆಟ್ ಗಳಿಸಿದರು. ಭಾರತಕ್ಕೆ ಲಂಕಾ 51 ರನ್‍ಗಳ ಟಾರ್ಗೆಟ್ ನೀಡಿದೆ.
ಇದನ್ನೂ ಓದಿ: Asia Cup Final 2023 ಪಂದ್ಯದ ಆರಂಭದಲ್ಲಿಯೇ ಭಾರಿ ವಿಧ್ವಂಸ ಸೃಷ್ಟಿಸಿದ ಮಹಮ್ಮದ್ ಸಿರಾಜ್ !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.