ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳನ್ನು ಈ ರೀತಿ ಬಳಸಿ!!

Remedies for Hair fall : ಕೂದಲು ಉದುರುವುದು ಇಂದು ಅನೇಕ ಜನರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಅನೇಕ ಜನರು ಕೂದಲು ಉದುರುವಿಕೆಯ ಬಗ್ಗೆ ಚಿಂತಿತರಾಗಿದ್ದಾರೆ. ಇದಕ್ಕಾಗಿ ಎಷ್ಟೇ ಪ್ರಯತ್ನ ಮಾಡಿದರೂ ಫಲ ಸಿಗುತ್ತಿಲ್ಲ ಎಂದು ಬೇಸರಿಸುತ್ತಾರೆ. ಅಂತವರು ಈ ಮನೆಮದ್ದನ್ನು ಬಳಸಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿಕೊಳ್ಳಬಹುದು.  

Written by - Savita M B | Last Updated : Sep 11, 2023, 10:19 AM IST
  • ಕೂದಲು ಸದೃಢವಾಗಿರಲು ಪೋಷಕಾಂಶಗಳು ಅತ್ಯಗತ್ಯ.
  • ಕೂದಲು ಉದುರುವುದನ್ನು ತಡೆಯಲು ಹಲವಾರು ಹೇರ್ ಪ್ಯಾಕ್‌ಗಳಿವೆ.
  • ನಾವು ನೈಸರ್ಗಿಕವಾಗಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಬಹುದು.
ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳನ್ನು ಈ ರೀತಿ ಬಳಸಿ!!  title=

Hair Fall Remedies : ಕೂದಲು ಸದೃಢವಾಗಿರಲು ಪೋಷಕಾಂಶಗಳು ಅತ್ಯಗತ್ಯ. ಪೋಷಕಾಂಶಗಳು ಕೂದಲಿನ ಕಿರುಚೀಲಗಳಿಗೆ ತಲುಪದಿದ್ದಾಗ, ಅತಿಯಾದ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ಕೂದಲು ಉದುರುವುದನ್ನು ತಡೆಯಲು ಹಲವಾರು ಹೇರ್ ಪ್ಯಾಕ್‌ಗಳಿವೆ. ಇವುಗಳು ತಕ್ಷಣದ ಫಲಿತಾಂಶವನ್ನು ನೀಡದಿದ್ದರೂ, ಕೂದಲು ಉದುರುವುದು ಮಾತ್ರ ಹೆಚ್ಚಾಗುತ್ತದೆ. ಇಂತಹ ಸ್ಥಿತಿಯಲ್ಲಿ ನಾವು ನೈಸರ್ಗಿಕವಾಗಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಬಹುದು. ಅದಕ್ಕೆ ನಿಮ್ಮ ಹಿತ್ತಲಿನಲ್ಲಿರುವ ಕರಿಬೇವಿನ ಎಲೆಗಳು ಸಹಾಯ ಮಾಡುತ್ತವೆ. ಹೌದು ಈ ಎಲೆಯ ರಸವನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. 

ಕರಿಬೇವಿನ ಎಲೆಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ ಅನೇಕ ಆಹಾರಗಳಲ್ಲಿ ಕಬ್ಬಿಣಾಂಶವಿದೆ. ಅದಕ್ಕಾಗಿಯೇ ನಮ್ಮ ಪೂರ್ವಜರು ಕೂದಲು ಬೆಳೆಯಲು ಕರಿಬೇವಿನ ಎಲೆಗಳನ್ನು ತಿನ್ನಲು ಹೇಳುತ್ತಿದ್ದರು. ಕರಿಬೇವಿನ ಪುಡಿಯನ್ನು ಆಹಾರದಲ್ಲಿ ಸೇರಿಸಿದರೆ ಕೂದಲು ಗಟ್ಟಿಯಾಗಿ ದಟ್ಟವಾಗಿ ಬೆಳೆಯುತ್ತವೆ. 

ಕರಿಬೇವಿನ ಎಲೆಗಳನ್ನು ತಿನ್ನುವುದು ಹೇಗೆ? 
ನಿಮ್ಮ ದೈನಂದಿನ ಆಹಾರದಲ್ಲಿ ಹೆಚ್ಚು ಕರಿಬೇವಿನ ಎಲೆಗಳನ್ನು ಸೇವಿಸಿ. ಇದು ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸುತ್ತದೆ. ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ. ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಮತ್ತೊಂದು ಉತ್ತಮ ವಿಧಾನವೆಂದರೆ ಕರಿಬೇವಿನ ರಸ. ಕರಿಬೇವಿನ ಎಲೆಯ ಜೂಸಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಹೌದು, ಕರಿಬೇವಿನ ಎಲೆಗಳಿಂದ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.

ಇದನ್ನೂ ಓದಿ-ಮನೆಯಲ್ಲಿ ನಾಯಿ ಸಾಕುವದರಿಂದ ಒಳ್ಳೆಯದಾಗತ್ತಾ..? ಜ್ಯೋತಿಷ್ಯದಲ್ಲಿದೆ ಇದಕ್ಕೆ ಉತ್ತರ

ಕರಿಬೇವಿನ ಜ್ಯೂಸ್ ಮಾಡಲು ಬೇಕಾಗುವ ಸಾಮಾಗ್ರಿಗಳು:
* ಕರಿಬೇವಿನ ಸೊಪ್ಪು - 1 ಹಿಡಿ 
* ಜೀರಿಗೆ - 1/4 ಚಮಚ 
* ಮೊಸರು - 3 ಚಮಚ 
* ಉಪ್ಪು - ಅಗತ್ಯವಿದ್ದಷ್ಟು
* ಅರಿಶಿನ ಪುಡಿ - 2 ಚಿಟಿಕೆ 
* ಇಂಗು ಪುಡಿ - 2 ಚಿಟಿಕೆ 

ತಯಾರಿಸುವ ವಿಧಾನ: 
* ಮೊದಲು ಕರಿಬೇವನ್ನು ಮಿಕ್ಸಿ ಜಾರ್‌ನಲ್ಲಿ ನೀರು ಹಾಕಿ ಮಿಕ್ಸ್‌ ಮಾಡಿ 
* ನಂತರ ಜೀರಿಗೆ, ಮೊಸರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. 
* ರುಬ್ಬಿದ ಮಿಶ್ರಣಕ್ಕೆ ನೀರು, ಅರಿಶಿನ ಮತ್ತು ಇಂಗು ಹಾಕಿ ಕರಿಬೇವಿನ ರಸವನ್ನು ತಯಾರಿಸಿ. 
* ಹೀಗೆ ಜ್ಯೂಸ್ ಮಾಡಿ ಕುಡಿದರೆ ಕಹಿ ಇರುವುದಿಲ್ಲ ಮತ್ತು ಅದು ಆರೋಗ್ಯಕ್ಕೂ ಒಳ್ಳೆಯದು

ಕೂದಲಿನ ಬೆಳವಣಿಗೆಯ ಜೊತೆಗೆ ಕರಿಬೇವಿನ ರಸದ ಇತರ ಪ್ರಯೋಜನಗಳು:
* ದೇಹದಲ್ಲಿರುವ ಕೆಟ್ಟ ಕೊಬ್ಬು ಕರಗುತ್ತದೆ.
* ಎದೆಯಲ್ಲಿ ಕಟ್ಟಿದ ಕಫ ಕರಗಿ ಹೋಗುತ್ತದೆ
* ರಕ್ತದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗಿ ರಕ್ತ ಶುದ್ಧವಾಗುತ್ತದೆ. 
* ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ನೆತ್ತಿಯಲ್ಲಿ ರಕ್ತ ಪರಿಚಲನೆಯು ಕ್ರಮಬದ್ಧವಾಗಿರುತ್ತದೆ, ಕೂದಲು ಉದುರುವುದು ಕಡಿಮೆಯಾಗುತ್ತದೆ.
* ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಇನ್ನು ಈ ಕರಿಬೇವಿನ ರಸವನ್ನು 10 ದಿನಗಳ ಕಾಲ ಕುಡಿಯುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ನಿಮ್ಮ ಕೂದಲು ದಪ್ಪವಾಗಿ ಬೆಳೆಯುತ್ತವೆ. 

ಇದನ್ನೂ ಓದಿ-ಕೂದಲು ಉದುರುವಿಕೆ ಸಮಸ್ಯೆಗೆ ಇಲ್ಲಿವೆ ಆಯುರ್ವೇದ ಪರಿಹಾರಗಳು!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News