ಹೊಸ ಸೌರಮಂಡಲ ಪತ್ತೆಹಚ್ಚಿದ ನಾಸಾ..!

    

Last Updated : Dec 15, 2017, 02:20 PM IST
  • ಪತ್ತೆ ಹಚ್ಚಿರುವ ಸೌರವ್ಯವಸ್ಥೆಯಲ್ಲಿ ಕೆಪ್ಲರ್-90i ನ್ನು ಸಣ್ಣ ಗ್ರಹ ಎಂದು ಹೇಳಲಾಗುತ್ತಿದೆ.
  • ನಮ್ಮ ಭೂಮಿಗಿಂತಲೂ ಶೇಕಡಾ 30 ರಷ್ಟು ದೊಡ್ಡದಿದೆ,ಆದರೆ ಭೂಮಿಯ ಹಾಗೆ ಜೀವಿಸಲು ಯೋಗ್ಯವಲ್ಲ.
  • 2009ರಿಂದ ಈ ಕೆಪ್ಲರ್ ಟೆಲಿಸ್ಕೋಪ್ ನಮ್ಮ ಸೌರಮಂಡಲದ ಆಚೆಗೂ ಇರುವ ಹಲವಾರು ಖಗೋಳಿಕ ಅಂಶಗಳನ್ನು ಪತ್ತೆ ಹಚ್ಚುವಲ್ಲಿ ಗಮನಾರ್ಹ ಪಾತ್ರವನ್ನು ವಹಿಸಿದೆ ಎಂದು ಹೇಳಿದೆ.
ಹೊಸ ಸೌರಮಂಡಲ ಪತ್ತೆಹಚ್ಚಿದ ನಾಸಾ..! title=
ಫೋಟೋ:ನಾಸಾ

ವಾಷಿಂಗ್ಟನ್: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ನಮ್ಮ ಸೌರಮಂಡಲದ ರೀತಿಯಲ್ಲೇ ಹೊಸ ಎಂಟು ಗ್ರಹಗಳಿರುವ ಸೌರವ್ಯೂಹವನ್ನು ಪತ್ತೆ ಹಚ್ಚಿದೆ.

ಈ ಕುರಿತಾಗಿ ಗುರುವಾರದಂದು ಹೇಳಿಕೆ ನೀಡಿರುವ ನಾಸಾ ತನ್ನ ಕೆಪ್ಲರ್ ಬಾಹ್ಯಾಕಾಶ ಟೆಲಿಸ್ಕೋಪ್ ಮೂಲಕ ಎಂಟು ಗ್ರಹಗಳಿರುವ ನೂತನ ಸೌರವ್ಯೂಹವನ್ನು ಪತ್ತೆ ಹಚ್ಚಿದೆ. ಆ ಮೂಲಕ ಈಗಿರುವ ಜಗತ್ತಿನಂತೆ ಅದು ಕೂಡಾ ಹಲವಾರು ಜಗತ್ತುಗಳನ್ನು ಹೊಂದಿದೆ ಮತ್ತು ಸೂರ್ಯನಂತೆ ಹಲವು ನಕ್ಷತ್ರಗಳು ಇರುವುದರಿಂದ ಅದರ ಸುತ್ತಲು ಗ್ರಹಗಳ ಚಲನೆಯನ್ನು ಹೊಂದಿವೆ ಎನ್ನುವ ಅಂಶವನ್ನು ಕೆಪ್ಲರ್ ಟೆಲಿಸ್ಕೋಪ್ ಮೂಲಕ ಕಂಡುಕೊಳ್ಳಲಾಗಿದೆ. ಗೂಗಲ್ ಕೃತಕ ಬುದ್ದಿಮತೆಯ ತಂತ್ರಜ್ಞಾನವನ್ನು ಉಪಯೋಗಿಸಿ  ಕೆಪ್ಲರ್ ಹೊಸ ಸೌರಮಂಡಲವನ್ನು ಪತ್ತೆ ಹಚ್ಚಿದೆ ಎಂದು ನಾಸಾ ಹೇಳಿದೆ. 

ಈಗ ಪತ್ತೆ ಹಚ್ಚಿರುವ ಸೌರವ್ಯವಸ್ಥೆಯಲ್ಲಿ ಕೆಪ್ಲರ್-90i ನ್ನು ಸಣ್ಣ ಗ್ರಹ ಎಂದು ಹೇಳಲಾಗುತ್ತಿದೆ. ಅದು ನಮ್ಮ ಭೂಮಿಗಿಂತಲೂ ಶೇಕಡಾ 30 ರಷ್ಟು ದೊಡ್ಡದಿದೆ,ಆದರೆ ಭೂಮಿಯ ಹಾಗೆ ಜೀವಿಸಲು ಯೋಗ್ಯವಲ್ಲ ಎಂದು  ಟೆಕ್ಸಾಸ್ ವಿವಿಯಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿರುವ ಆಂಡ್ರೂ ವ್ಯಾಂಡರ್ ಬರ್ಗ್ ಅಭಿಪ್ರಾಯಪಟ್ಟಿದ್ದಾರೆ. 2009ರಿಂದ ಈ ಕೆಪ್ಲರ್ ಟೆಲಿಸ್ಕೋಪ್ ನಮ್ಮ ಸೌರಮಂಡಲದ ಆಚೆಗೂ ಇರುವ  ಹಲವಾರು ಖಗೋಳಿಕ ಅಂಶಗಳನ್ನು ಪತ್ತೆ ಹಚ್ಚುವಲ್ಲಿ ಗಮನಾರ್ಹ ಪಾತ್ರವನ್ನು ವಹಿಸಿದೆ ಎಂದು ಹೇಳಿದೆ. 

Trending News