ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕಳಪೆ ಸಾಧನೆ ತೋರಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ರಾಹುಲ್ ಗಾಂಧಿಗೆ ಯಶವಂತ್ ಸಿನ್ಹಾ ಸಲಹೆಯನ್ನು ನೀಡಿದ್ದಾರೆ. ಅದೇನೆಂದರೆ ರಾಹುಲ್ ಗಾಂಧೀ ತಮ್ಮ ರಾಜಿನಾಮೆ ನಿರ್ಧಾರಕ್ಕೆ ಕಟಿ ಬದ್ದರಾಗಬೇಕು ಇಲ್ಲದೆ ಹೋದಲ್ಲಿ ಅವರು ಜನರ ವಿಶ್ವಾಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
If Rahul Gandhi does not stand firm on his resignation, he will lose further in public estimation. Let the party be run by a presidium or any other arrangement at least for some time.
— Yashwant Sinha (@YashwantSinha) May 30, 2019
ಈ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ " ಒಂದು ವೇಳೆ ರಾಹುಲ್ ಗಾಂಧೀ ತಮ್ಮ ರಾಜಿನಾಮೆ ನಿರ್ಧಾರಕ್ಕೆ ಬದ್ದರಾಗದೆ ಹೋದಲ್ಲಿ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ.ಆದ್ದರಿಂದ ಕೆಲವು ಅವಧಿಯವರೆಗೆ ಬೇರೆಯವರಿಗೆ ಅಧ್ಯಕ್ಷ ಸ್ಥಾನದ ಅವಕಾಶವನ್ನು ನೀಡಬೇಕು" ಎಂದು ಹೇಳಿದರು. ಮಾರ್ಚ್ ತಿಂಗಳಲ್ಲಿ ಸಿನ್ಹಾ ಅವರು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಹಾರ್,ಜಾರ್ಖಂಡ್, ದೆಹಲಿ ಹಾಗೂ ಇತರ ಪ್ರದೇಶಗಳಲ್ಲಿ ಮೈತ್ರಿಯನ್ನು ಅಂತಿಮ ಗೊಳಿಸಿ ಈಗಾಗಲೇ ಸಾಕಷ್ಟು ವಿಳಂಭವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದರು.
2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 52 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದು 2014 ರ ಚುನಾವಣಾ ಫಲಿತಾಂಶಕ್ಕಿಂತಲೂ ಉತ್ತಮವಾಗಿತ್ತು. ಇನ್ನೊಂದೆಡೆ ಪ್ರಧಾನಿ ಮೋದಿ 1971 ರ ನಂತರ ಮೊದಲ ಬಾರಿಗೆ ಸತತ ಎರಡು ಬಾರಿಗೆ ಬಹುಮತ ಪಡೆದ ಸಾಧನೆ ಮಾಡಿದರು. ಬಿಜೆಪಿ ಈ ಬಾರಿ 303 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಸಾರ್ವಕಾಲಿಕ ಉತ್ತಮ ಪ್ರದರ್ಶನವನ್ನು ನೀಡಿತು.
ಯಶ್ವಂತ್ ಸಿನ್ಹಾ 1998 ರಿಂದ 2004 ರವರೆಗೆ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಹಣಕಾಸು ಮತ್ತು ವಿದೇಶಾಂಗ ವ್ಯವಹಾರ ಹುದ್ದೆಗಳನ್ನು ನಿರ್ವಹಿಸಿದ್ದರು.