Ambareesh helped Dhoni : ಕೂಲ್ ಕ್ಯಾಪ್ಟನ್ ಎಂದೇ ಖ್ಯಾತರಾದ ಕ್ರಿಕೆಟ್ ದಿಗ್ಗಜ ಎಂ.ಎಸ್ ಧೋನಿ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದು ಹರಿದಾಡುತ್ತಿದೆ. ಕಷ್ಟ ಎಂದು ಬಂದವರಿಗೆ ಸದಾ ಸಹಾಯ ಹಸ್ತ ಚಾಚುತ್ತಿದ್ದ ಅಂಬರೀಶ್ ಅವರನ್ನು ಅಭಿಮಾನಿಗಳು ಕಲಿಯುಗದ ಕರ್ಣ ಎಂದೇ ಕರೆಯುತ್ತಿದ್ದರು. ಸ್ಯಾಂಡಲ್ವುಡ್ನ ರೆಬೆಲ್ ಸ್ಟಾರ್ ಅಂಬರೀಶ್ ಧೋನಿಗೆ ಸಹಾಯ ಮಾಡಿದ್ದರಂತೆ ಎಂಬ ಸಂಗತಿ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಅಂಬರೀಶ್ ಅವರ ಪತ್ನಿ ಸಂಸದೆ ಸುಮಲತಾ ಅವರೇ ಹೇಳಿಕೊಂಡಿದ್ದಾರೆ.
ಸುಮಲತಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಂಬರೀಶ್ - ಧೋನಿ ಫೋಟೋವನ್ನು ಹಂಚಿಕೊಂಡಿದ್ದಾರೆ. "ಬೆಲೆ ಕಟ್ಟಲಾಗದ ಫೋಟೋ ಇಂದು ನನಗೆ ಸಿಕ್ಕಿದೆ" ಎಂದು ಬರೆದಿದ್ದಾರೆ. ಅಲ್ಲದೇ "2006 ರಲ್ಲಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂಬರೀಶ್ ಅವರು 2 ಲಕ್ಷ ರೂಗಳ ಚೆಕ್ ಅನ್ನು ಅಂದಿನ ಉದಯೋನ್ಮುಖ ಪ್ರತಿಭೆ ಎಂ.ಎಸ್ ಧೋನಿ ಅವರಿಗೆ ನೀಡಿದ್ದರು" ಎಂದು ಫೋಟೋ ಜೊತೆಗೆ ಸುಮಲತಾ ಬರೆದು, ಶೇರ್ ಮಾಡಿದ್ದಾರೆ.
Found this priceless treasure of a pic today !
2006 , when Ambareesh presented a cheque of 2 lakhs at KSCA stadium to M S Dhoni who was the bright upcoming cricketer back then !
He had seen an interview where Dhoni's father had apparently said that now Dhoni was getting popular… pic.twitter.com/yjugTq5ixY— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) August 24, 2023
ಇದನ್ನೂ ಓದಿ: ಕಾಟೇರಾ ಅದ್ಭುತ ಸಿನಿಮಾ.. ಒಳ್ಳೆಯ ಸಿನಿಮಾ ಗೆಲ್ಲಬೇಕು ಅನ್ನೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಡಿತ..!
ಈ ಘಟನೆಗೂ ಮುನ್ನ ಅಂಬರೀಶ್ ಧೋನಿ ತಂದೆಯ ಇಂಟರ್ವೀವ್ ನೋಡಿದ್ದರು. ಅದರಲ್ಲಿ ಧೋನಿ ಬಗ್ಗೆ ಮಾತನಾಡಿದ್ದರು. ಧೋನಿ ಅವರ ಇಂಟರ್ವೀವ್ ಮಾಡಲು ಮನೆಗೆ ಬರುವವರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡಲು ಸಾಧ್ಯವಾಗ್ತಿಲ್ಲ ಎಂದಿದ್ದರು. ಇದು ಅಂಬಿ ಮನದಲ್ಲಿ ಉಳಿದಿತ್ತು.
ಹೀಗಿರುವಾಗಲೇ ಬೆಂಗಳೂರಿನಲ್ಲಿ ಧೋನಿ ಪಂದ್ಯ ಆಡಲು ಬಂದರು. ಆಗ ಅಂಬರೀಶ್ ಸಹಾಯ ಮಾಡಿದ್ದರು. ಆ ವೇಳೆ ಧೋನಿ ಜೊತೆ ಅಂಬರೀಶ್ ಅವರ ಫೋಟೋ ತೆಗೆಯಲಾಗಿತ್ತು. ನಾನು ಆ ಫೋಟೋವನ್ನು ಕಳೆದುಕೊಂಡಿದ್ದೆ. ಸಾಕಷ್ಟು ಹುಡುಕಾಡಿದ್ದೆವು. ಇಂದು ಆ ಫೋಟೋ ಸಿಕ್ಕಿದೆ. ಆದ ಕಾರಣ ಆ ಘಟನೆಯನ್ನು ಮತ್ತೆ ಸ್ಮರಿಸಲು ಸಾಧ್ಯವಾಯಿತು ಎಂದು ಸುಮಲತಾ ಹೇಳಿದ್ದಾರೆ.
ಇದನ್ನೂ ಓದಿ: ಕಾಂತಾರ 2 ಶೂಟಿಂಗ್, ರಿಲೀಸ್ ಡೇಟ್ ರಿವೀಲ್.. ಯಾವಾಗ ಗೊತ್ತಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.