OMG: SC/ST ವಿದ್ಯಾರ್ಥಿಗಳಿಗೆ ಮುಗ್ಗಲು, ಹುಳ ಬಿದ್ದ ಅಕ್ಕಿಯಲ್ಲೇ ಆಹಾರ ಸಿದ್ಧತೆ!

SC/ST hostel students: ಹಾಸ್ಟೆಲ್‍ಗೆ ಸಂಬಂಧಿಸಿದಂತೆ ಬೇಜವಬ್ದಾರಿತನ ತೋರಿದ ವಾರ್ಡನ್ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡ ಅಧಿಕಾರಿಗಳು ಮತ್ತೊಮ್ಮೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Written by - Manjunath Hosahalli | Edited by - Puttaraj K Alur | Last Updated : Aug 21, 2023, 05:48 PM IST
  • ಬೆಂಗಳೂರು ವಿವಿಗೆ ಸಂಬಂಧಿಸಿದ ಹಾಸ್ಟೆಲ್‍ವೊಂದರ ಆಹಾರ ಧಾನ್ಯದಲ್ಲಿ ಹುಳ-ಹುಪ್ಪಡಿ
  • ಮುಗ್ಗಲು ಬಿದ್ದಿರುವ ಅಕ್ಕಿಯಿಂದಲೇ ಆಹಾರ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ
  • ಬೆಂಗಳೂರಿನ HSR ಬಡಾವಣೆಯ ಸರ್ಕಾರಿ ಕ್ಲಾಸಿಫೈಡ್ಸ್ ಬಾಲಕರ ಭವನದಲ್ಲಿ ಘಟನೆ
OMG: SC/ST ವಿದ್ಯಾರ್ಥಿಗಳಿಗೆ ಮುಗ್ಗಲು, ಹುಳ ಬಿದ್ದ ಅಕ್ಕಿಯಲ್ಲೇ ಆಹಾರ ಸಿದ್ಧತೆ! title=
ಆಹಾರದಲ್ಲಿ ಹುಳ-ಹುಪ್ಪಡಿ!

ಬೆಂಗಳೂರು: ಬೆಂಗಳೂರು ವಿವಿಗೆ ಸಂಬಂಧಿಸಿದ ಹಾಸ್ಟೆಲ್‍ವೊಂದರಲ್ಲಿ ಆಹಾರ ಧಾನ್ಯದಲ್ಲಿ ಹುಳ-ಹುಪ್ಪಡಿಗಳು ಬಿದ್ದಿದ್ರೂ ಕ್ಯಾರೆ ಎನ್ನದೇ ಅದೇ ಅಕ್ಕಿ, ದವಸ ಧಾನ್ಯಗಳಿಂದ ಆಹಾರ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ಘಟನೆ ಬೆಂಗಳೂರಿನ HSR ಬಡಾವಣೆಯ ಸರ್ಕಾರಿ ಕ್ಲಾಸಿಫೈಡ್ಸ್ ಬಾಲಕರ ಭವನದಲ್ಲಿ ನಡೆದಿದೆ. ಸುಮಾರು 50ಕ್ಕೂ ಹೆಚ್ಚು ಅಕ್ಕಿ ಮೂಟೆಗಳು ಮುಗ್ಗಲು ಬಂದಿದೆ. ಎಲ್ಲೆಂದರಲ್ಲಿ ಅಕ್ಕಿ ಕಾಳು ಚೆಲ್ಲಾಪಿಲ್ಲಿಯಾಗಿದೆ. ಹೀಗಿದ್ರೂ ಅದೇ ಅಕ್ಕಿ-ಬೇಳೆಯನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ ಎಂದು ಅಲ್ಲಿನ ವಿದ್ಯಾರ್ಥಿಗಳೇ ಆರೋಪಿಸಿದ್ದಾರೆ.

ಈ ಸಮಸ್ಯೆ ಸಂಬಂಧ ಹಲವಾರು ಬಾರಿ ಹಾಸ್ಟೆಲ್ ವಾರ್ಡನ್ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಆ ವಾರ್ಡನ್ ಮಹಾಶಯ ಈ ಬಗ್ಗೆ ತುಟಿ ಪಿಟಕ್ ಎಂದಿಲ್ಲವಂತೆ. ಕೊನೆಗೆ ವಿವಿ ವಿದ್ಯಾರ್ಥಿಗಳೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ: ಬಸ್‌ನಲ್ಲಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಇಬ್ಬರು ಐನಾತಿಗಳ ಬಂಧನ..!́

ಹಾಸ್ಟೆಲ್‍ಗೆ ತಾಲೂಕು ಅಧಿಕಾರಿಗಳ ವಿಸಿಟ್!

ಇನ್ನೂ ಕಳಪೆ ಆಹಾರ ವಿತರಣೆ ಸಂಬಂಧ ಮಾಹಿತಿ ತಿಳಿದ ಬೆಂಗಳೂರು ದಕ್ಷಿಣ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಕೂಡಲೇ HSR ಬಡಾವಣೆಯಲ್ಲಿರೂ ಈ ಕ್ಲಾಸಿಫೈಡ್ ವಿದ್ಯಾರ್ಥಿಗಳ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಹಾರ ಧಾನ್ಯ ಶೇಖರಣೆ ಸ್ಥಳ, ಅಡುಗೆ ಕೋಣೆ, ಸೇರಿ ಪ್ರತಿಯೊಂದು ಸ್ಥಳವನ್ನು ವೀಕ್ಷಿಸಿರುವ ಅಧಿಕಾರಿಗಳು ಅಲ್ಲಿದ್ದ ವಾರ್ಡನ್‍ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸ್ಟೆಲ್ ವಾರ್ಡನ್ ಬೇಜವಬ್ದಾರಿತಕ್ಕೆ ಸ್ಥಳದಲ್ಲಿಯೇ ಕ್ರಮ ತೆಗೆದುಕೊಂಡು ಸಸ್ಪೆಂಡ್ ಭಾಗ್ಯ ಕಲ್ಪಿಸಿದ್ದಾರೆ.

ಮತ್ತೊಮ್ಮೆ ಈ ರೀತಿ ಆಗದಂತೆ ಕ್ರಮ!

ಹಾಸ್ಟೆಲ್‍ಗೆ ಸಂಬಂಧಿಸಿದಂತೆ ಬೇಜವಬ್ದಾರಿತನ ತೋರಿದ ವಾರ್ಡನ್ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡ ಅಧಿಕಾರಿಗಳು ಮತ್ತೊಮ್ಮೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಹಾಸ್ಟೆಲ್‍ನಲ್ಲಿ ತಂಗಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಳಿ ಸಮಸ್ಯೆಗಳನ್ನು ಆಲಿಸಿದರು. ಹಾಸ್ಟೆಲ್ ನಲ್ಲಿರುವ ಎಲ್ಲಾ ಸಮಸ್ಯೆಗೂ ಕೂಡಲೇ ಪರಿಹಾರ ನೀಡುವ ಭರವಸೆಯನ್ನು ಸಹ ತಾಲೂಕು ಅಧಿಕಾರಿಗಳು ನೀಡಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ‘ಕಾವೇರಿ’ ಅಸ್ತ್ರ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News