SIM Rules: ಟೆಲಿಕಾಂ ನೆಟ್ವರ್ಕ್ನಲ್ಲಿ ವಂಚನೆಯನ್ನು ನಿರ್ಗಹಿಸುವ ನಿಟ್ಟಿನಲ್ಲಿ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದ್ದು ಒಂದು ಐಡಿಯಲ್ಲಿ 9ರ ಬದಲಿಗೆ ಇನ್ನು ಮುಂದೆ ಕೇವಲ 4 ಸಿಮ್ ಕಾರ್ಡ್ಗಳನ್ನು ಗಳನ್ನಷ್ಟೇ ವಿತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಟೆಲಿಕಾಂ ಸಚಿವರು ಇಂದು ಹೊಸ ಸಿಮ್ ಕಾರ್ಡ್ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಷ್ಟಕ್ಕೂ ಒಂದು ಐಡಿಯಲ್ಲಿ ಹೆಚ್ಚಿನ ಸಿಮ್ ಕಾರ್ಡ್ ಕೊಳ್ಳುವುದರಿಂದ ಏನು ಸಮಸ್ಯೆ? ಈ ಸಂಖ್ಯೆಯನ್ನು ಏಕೆ ನಿಯಂತ್ರಿಸಲಾಗುತ್ತಿದೆ ಎಂಬ ಪ್ರಶ್ನೆ ನಿಮ್ಮಲ್ಲೂ ಇದ್ದರೆ, ಇದಕ್ಕೆ ಮುಖ್ಯ ಕಾರಣ ಸೈಬರ್ ವಂಚನೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಟೆಲಿಕಾಂ ನೆಟ್ವರ್ಕ್ನಲ್ಲಿ ಕರೆ ಡ್ರಾಪ್, ವಂಚನೆಯನ್ನು ನಿಯಂತ್ರಿಸಲು ಸರ್ಕಾರ ಈ ರೀತಿಯ ಮಹತ್ವದ ಹೆಜ್ಜೆ ತೆಗೆದುಕೊಳ್ಳಲು ಮುಂದಾಗಿದೆ.
ಇದನ್ನೂ ಓದಿ- ರಾತ್ರಿ ವೇಳೆ ಫ್ರೀಡ್ಜ್ ಆಫ್ ಮಾಡಿದ್ರೆ ವಿದ್ಯುತ್ ಬಿಲ್ ಕಡಿಮೆ ಬರುತ್ತಾ? ಇಲ್ಲಿದೆ ಸತ್ಯಾಸತ್ಯತೆ
ಹೆಚ್ಚುವರಿ ಸಿಮ್ ಕಾರ್ಡ್ಗಳು ಬಂದ್ ಆಗಲಿವೆಯೇ?
ವಾಸ್ತವವಾಗಿ, ಇದುವರೆಗಿನ ಟೆಲಿಕಾಂ ನಿಯಮದ ಅನ್ವಯ ಒಬ್ಬರು ಒಂದು ಐಡಿಯನ್ನು ಬಳಸಿ 9 ಸಿಮ್ಗಳನ್ನು ಕೊಳ್ಳಲು ಅವಶಾಶವಿತ್ತು. ಒಂದೊಮ್ಮೆ ಹೊಸ ನಿಯಮ ಜಾರಿಗೆ ಬಂದರೆ ಸೀಮಿತ ಸಿಮ್ಗಳನ್ನಷ್ಟೇ ಬಳಸಲು ಅವಕಾಶವಿರುತ್ತದೆ. ಆದಾಗ್ಯೂ, ನಿಮ್ಮ ಚಾಲ್ತಿಯಲ್ಲಿರುವ ಸಿಮ್ಗಳಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ನಿಮ್ಮ ಫೋನ್ ಗೆ ಸ್ಕ್ರೀನ್ ಗಾರ್ಡ್ ಹಾಕಿದ್ದೀರಾ ? ಹಾಗಿದ್ದರೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು
ಭಾರತ ಸರ್ಕಾರದ ಸಂಚಾರ ಸಾಥಿ ಪೋರ್ಟಲ್:
ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಸಂಚಾರ ಸಾಥಿ ಪೋರ್ಟಲ್ ಅನ್ನು ಆರಂಭಿಸಿದೆ. ಒಂದೊಮ್ಮೆ ನಿಮ್ಮ ಫೋನ್ ಕಳುವಾಗಿದ್ದರೆ ನೀವು ಈ ಪೋರ್ಟಲ್ನಲ್ಲಿ ದೂರು ದಾಖಲಿಸಬಹುದು. ಅಷ್ಟೇ ಅಲ್ಲ, ಈ ಸಂಚಾರ ಸಾಥಿ ಪೋರ್ಟಲ್ನಲ್ಲಿ ನಿಮ್ಮ ಐಡಿಯಲ್ಲಿ ಇದುವರೆಗೂ ಎಷ್ಟು ಸಿಮ್ ಕಾರ್ಡ್ಗಳನ್ನು ಖರೀದಿಸಲಾಗಿದೆ ಎಂಬುದನ್ನೂ ಕೂಡ ಪತ್ತೆ ಮಾಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.