ವಿಶ್ವಕಪ್ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್: ಬದಲಾಗಲಿದೆ ಈ 6 ಐತಿಹಾಸಿಕ ಪಂದ್ಯಗಳ ದಿನಾಂಕ!

IND vs PAK World Cup 2023: ಮೂಲಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಈಗ ಅಕ್ಟೋಬರ್ 15 ರಂದು ಅಲ್ಲ, ಅಕ್ಟೋಬರ್ 14 ರಂದು ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

Written by - Bhavishya Shetty | Last Updated : Aug 2, 2023, 12:03 PM IST
    • ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023
    • ಅಕ್ಟೋಬರ್ 14 ರಂದು ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ
    • ನವೀಕರಿಸಿದ ವೇಳಾಪಟ್ಟಿಯನ್ನು ಆಗಸ್ಟ್ 2 ಅಥವಾ 3 ರಂದು ಬಿಡುಗಡೆ ಮಾಡಬಹುದು
ವಿಶ್ವಕಪ್ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್: ಬದಲಾಗಲಿದೆ ಈ 6 ಐತಿಹಾಸಿಕ ಪಂದ್ಯಗಳ ದಿನಾಂಕ! title=
World Cup 2023 Schedule

IND vs PAK World Cup 2023: ವಿಶ್ವಕಪ್ 2023ರ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಶ್ವಕಪ್ 2023ರ ಹೈ-ಪ್ರೊಫೈಲ್ ಪಂದ್ಯದ ಜೊತೆ ಇತರ ದೊಡ್ಡ ಪಂದ್ಯಗಳ ದಿನಾಂಕಗಳು ಸಹ ಬದಲಾಗಲಿವೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಇಶಾನ್ ಜೊತೆ ಶುಭ್ಮನ್ ಅಬ್ಬರ: ದೋಸ್ತಿಗಳ ಬ್ಯಾಟಿಂಗ್ ದಾಳಿಗೆ 6 ವರ್ಷ ಹಳೆಯ ದಾಖಲೆ ಉಡೀಸ್

ಮೂಲಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಈಗ ಅಕ್ಟೋಬರ್ 15 ರಂದು ಅಲ್ಲ, ಅಕ್ಟೋಬರ್ 14 ರಂದು ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ನವರಾತ್ರಿ ಹಬ್ಬದ ಕಾರಣ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಮಹಾ ಪಂದ್ಯದ ದಿನಾಂಕ ಬದಲಾಗಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಶ್ವಕಪ್ 2023 ರ ಹೈ-ಪ್ರೊಫೈಲ್ ಪಂದ್ಯದೊಂದಿಗೆ, ಒಟ್ಟು 6 ಪಂದ್ಯಗಳ ದಿನಾಂಕಗಳಲ್ಲಿ ಬದಲಾವಣೆ ಇರುತ್ತದೆ. RevSportz ವರದಿ ಪ್ರಕಾರ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯವನ್ನು ಅಕ್ಟೋಬರ್ 12 ರ ಬದಲಿಗೆ ಅಕ್ಟೋಬರ್ 10 ರಂದು ನಡೆಸುವ ಸಾಧ್ಯತೆ ಇದೆ. ನ್ಯೂಜಿಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಿನ ವಿಶ್ವಕಪ್ ಪಂದ್ಯವನ್ನು ಅಕ್ಟೋಬರ್ 9 ರ ಬದಲಿಗೆ ಅಕ್ಟೋಬರ್ 12 ರಂದು, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಅಕ್ಟೋಬರ್ 14 ರ ಬದಲಿಗೆ ಅಕ್ಟೋಬರ್ 15 ರಂದು ನಡೆಸುವ ಸಾಧ್ಯತೆ ಇದೆ,

2023 ರ ವಿಶ್ವಕಪ್‌ ನ ನವೀಕರಿಸಿದ ವೇಳಾಪಟ್ಟಿಯನ್ನು ಆಗಸ್ಟ್ 2 ಅಥವಾ 3 ರಂದು ಬಿಡುಗಡೆ ಮಾಡಬಹುದು. ಇತ್ತೀಚೆಗಷ್ಟೇ ಬಿಸಿಸಿಐ ಕಾರ್ಯದರ್ಶಿ 2023ರ ವಿಶ್ವಕಪ್‌ ನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬಹುದು ಎಂದು ಹೇಳಿದ್ದರು.

ICC ಕ್ರಿಕೆಟ್ ವಿಶ್ವಕಪ್ 5 ಅಕ್ಟೋಬರ್ 2023 ರಿಂದ 19 ನವೆಂಬರ್ 2023 ರವರೆಗೆ ಭಾರತದ ಆತಿಥ್ಯದಲ್ಲಿ ಆಡಲಾಗುತ್ತದೆ. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ ಆತಿಥ್ಯ ವಹಿಸಲಿರುವ ಈ ಹೈ ಪ್ರೊಫೈಲ್ ಕ್ರಿಕೆಟ್ ಪಂದ್ಯಾವಳಿಯ ಪಂದ್ಯಗಳ ತಾತ್ಕಾಲಿಕ ಸಮಯವನ್ನು ಬೆಳಗ್ಗೆ 10:30 ಮತ್ತು ಮಧ್ಯಾಹ್ನ 2 ಗಂಟೆಗೆ ಇರಿಸಲಾಗಿದೆ. ವಿಶ್ವಕಪ್ ಸಮೀಪಿಸುತ್ತಿದ್ದಂತೆ ಪಂದ್ಯಗಳ ಸಮಯದಲ್ಲೂ ಬದಲಾವಣೆಗಳನ್ನು ಮಾಡಬಹುದು.

2023ರ ವಿಶ್ವಕಪ್‌ ನಲ್ಲಿ ಭಾರತದ ವೇಳಾಪಟ್ಟಿ

  • ಭಾರತ vs ಆಸ್ಟ್ರೇಲಿಯಾ, 8 ಅಕ್ಟೋಬರ್, ಚೆನ್ನೈ
  • ಭಾರತ vs ಅಫ್ಘಾನಿಸ್ತಾನ, 11 ಅಕ್ಟೋಬರ್, ದೆಹಲಿ
  • ಭಾರತ vs ಪಾಕಿಸ್ತಾನ, 14 ಅಕ್ಟೋಬರ್, ಅಹಮದಾಬಾದ್
  • ಭಾರತ vs ಬಾಂಗ್ಲಾದೇಶ, 19 ಅಕ್ಟೋಬರ್, ಪುಣೆ
  • ಭಾರತ vs ನ್ಯೂಜಿಲೆಂಡ್. ಅಕ್ಟೋಬರ್ 22 ಧರ್ಮಶಾಲಾ
  • ಭಾರತ vs ಇಂಗ್ಲೆಂಡ್, 29 ಅಕ್ಟೋಬರ್, ಲಕ್ನೋ
  • ಭಾರತ ವಿರುದ್ಧ ನೆದರ್ಲ್ಯಾಂಡ್ಸ್, ನವೆಂಬರ್ 2, ಮುಂಬೈ

ಇದನ್ನೂ ಓದಿ: ವಿಂಡೀಸ್ ಮಂಡಳಿಯ ಕಳಪೆ ನಿರ್ವಹಣೆಯ ಬಗ್ಗೆ ಹಾರ್ದಿಕ್ ಪಾಂಡ್ಯ ಆಕ್ರೋಶ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News